ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬೆಂಗಳೂರು Archives » Page 2 of 2 » Dynamic Leader
December 3, 2024
Home Posts tagged ಬೆಂಗಳೂರು (Page 2)
ರಾಜ್ಯ

ಪ್ರತಿನಿತ್ಯ ಸೇವಿಸುವ ಹಲವು ಬಗೆಯ ಆಹಾರಗಳಿದ್ದರೂ, ಗಮ ಗಮ ಬಿಸಿಬಿಸಿಯ ಬಿರಿಯಾನಿಯೇ ಎಲ್ಲರ ಆಯ್ಕೆಯಾಗಿದೆ. ಅದರಲ್ಲೂ ಆನ್ ಲೈನ್ ಫುಡ್ ಡೆಲಿವರಿ ವ್ಯವಸ್ಥೆ ಬಂದ ನಂತರ ಮನೆಯಿಂದಲೇ ಬಿರಿಯಾನಿ ಆರ್ಡರ್ ಮಾಡಿ ತಿನ್ನುವ ಹಿರಿಮೆ ಇನ್ನಷ್ಟು ಹೆಚ್ಚಿದೆ.

ಈ ನಿಟ್ಟಿನಲ್ಲಿ ಕಳೆದ 12 ತಿಂಗಳಲ್ಲಿ 7.6 ಕೋಟಿ ಆರ್ಡರ್‌ಗಳನ್ನು ತಲುಪಿಸಿದ್ದು, ಭಾರತೀಯರು ಅತಿ ಹೆಚ್ಚು ಬಿರಿಯಾನಿ ಆರ್ಡರ್ ಮಾಡಿದ್ದಾರೆ ಎಂದು ಆಹಾರ ವಿತರಣಾ ಕಂಪನಿ ಸ್ವಿಗ್ಗಿ ವರದಿ ಮಾಡಿದೆ.

ನಾಳೆ (2ನೇ ದಿನ) ಅಂತರಾಷ್ಟ್ರೀಯ ಬಿರಿಯಾನಿ ದಿನವನ್ನು ಆಚರಿಸುವ ಸಲುವಾಗಿ, ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ತಮ್ಮ ಸೈಟ್‌ನಲ್ಲಿ ಬಿರಿಯಾನಿ ಆರ್ಡರ್ ಮಾಡುವ ಭಾರತೀಯರ ಕುರಿತು ಸಮೀಕ್ಷೆಯನ್ನು ನಡೆಸಿದೆ. ಆ ಅಂಕಿಅಂಶಗಳ ಪ್ರಕಾರ, ತಮ್ಮ ನೆಚ್ಚಿನ ಆಹಾರದಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದ್ದು, ಬಿರಿಯಾನಿ ಪ್ರಿಯರು ತಮ್ಮ ಬಿರಿಯಾನಿ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳಿಲ್ಲವೆಂದು ಹೇಳಿದ್ದಾರೆ.

ಸ್ವಿಗ್ಗಿಯೊಂದಿಗೆ ಸಂಪರ್ಕದಲ್ಲಿರುವ ಗ್ರಾಹಕರು, ಸಾಮಾಜಿಕ ಜಾಲತಾಣಗಳಲ್ಲಿಯೂ ಬಿರಿಯಾನಿಯ ಹಿರಿಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಕಂಪನಿ, ಜನವರಿ 2023 ರಿಂದ ಜೂನ್ 15 ರವರೆಗೆ ಮಾಡಿದ ಬಿರಿಯಾನಿ ಆರ್ಡರ್‌ಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಕಳೆದ ಐದೂವರೆ ತಿಂಗಳುಗಳಲ್ಲಿ ಬಿರಿಯಾನಿ ಆರ್ಡರ್‌ಗಳಲ್ಲಿ ಶೇಕಡಾ 8.26 ರಷ್ಟು ಹೆಚ್ಚಳವಾಗಿದೆ ಮತ್ತು 2022ರ ಇದೇ ಅವಧಿಗೆ ಹೋಲಿಸಿದರೆ ಬಿರಿಯಾನಿ ಆರ್ಡರ್‌ಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.

ಪ್ಲಾಟ್‌ಫಾರ್ಮ್‌ಗಳು ಮತ್ತು ರಸ್ತೆಬದಿಯ ಅಂಗಡಿಗಳ ಮೂಲಕ ಬಿರಿಯಾನಿ ಬಡಿಸುವ ಒಂದು ಲಕ್ಷ ರೆಸ್ಟೋರೆಂಟ್‌ಗಳು ಮತ್ತು 28 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ ಈ ಬಿರಿಯಾನಿ ಖಾದ್ಯಗಳು ವಿಶಿಷ್ಟವೆಂದು ಕಂಡುಬರುತ್ತವೆ. ಸುಗಂಧಭರಿತ ಲಕ್ನೋ ಬಿರಿಯಾನಿಯಿಂದ ಮಸಾಲೆಯುಕ್ತ ಹೈದರಾಬಾದ್ ದಮ್ ಬಿರಿಯಾನಿ ಮತ್ತು ರುಚಿಕರವಾದ ಕೋಲ್ಕತ್ತಾ ಬಿರಿಯಾನಿಯಿಂದ ಪರಿಮಳಯುಕ್ತ ಮಲಬಾರ್ ಬಿರಿಯಾನಿಯವರೆಗೆ, ದೇಶಾದ್ಯಂತ ಜನರು ತಮ್ಮ ಬಿರಿಯಾನಿ ಆಹಾರಕ್ಕಾಗಿ ನಿಮಿಷಕ್ಕೆ 219 ಆರ್ಡರ್‌ಗಳನ್ನು ನೀಡುತ್ತಿದ್ದಾರೆ.

ಬಿರಿಯಾನಿಯನ್ನು ಮಾರಾಟ ಮಾಡುವ ಅತಿ ಹೆಚ್ಚು ರೆಸ್ಟೋರೆಂಟ್‌ಗಳನ್ನು ಹೊಂದಿರುವ ನಗರಗಳ ಪ್ರಕಾರ, ಬಿರಿಯಾನಿ ತಯಾರಿಸಿ ಬಡಿಸುವ ದೇಶಾದ್ಯಂತ 26 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿವೆ. 28 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೇವಲ ಬಿರಿಯಾನಿ ಖಾದ್ಯ ತಯಾರಿಸಿ ಬಡಿಸುವ ಮೂಲಕ ಹೊರಜಗತ್ತಿಗೆ ಹೆಸರು ತಂದುಕೊಟ್ಟಿವೆ.

ಆದಾಗ್ಯೂ, ಬೆಂಗಳೂರಿನಲ್ಲಿ 24,000 ಬಿರಿಯಾನಿಗಳನ್ನು ಪೂರೈಸುವ ರೆಸ್ಟೋರೆಂಟ್‌ಗಳು ಇವೆ. ನಂತರ ಮುಂಬೈನಲ್ಲಿ 22,000 ಮತ್ತು ದೆಹಲಿಯಲ್ಲಿ 20,000 ರೆಸ್ಟೋರೆಂಟ್‌ಗಳಿವೆ. ಬಿರಿಯಾನಿ ಪ್ರಿಯರ ಸಂಖ್ಯೆಯ ಬಗ್ಗೆ ನೋಡುವುದಾದರೆ, ಹೈದರಾಬಾದ್‌ನ ಸ್ವಿಗ್ಗಿ 7.2 ಮಿಲಿಯನ್ ಆರ್ಡರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಬೆಂಗಳೂರಿನ ಗ್ರಾಹಕರು 5 ಮಿಲಿಯನ್ ಆರ್ಡರ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ, ಚೆನ್ನೈ ನಿವಾಸಿಗಳು 3 ಮಿಲಿಯನ್‌ಗಿಂತಲೂ ಹೆಚ್ಚು ಬಿರಿಯಾನಿ ಆರ್ಡರ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಹೈದರಾಬಾದ್ ಬಿರಿಯಾನಿ, ಸುಮಾರು 85 ವಿಧದ ಬಿರಿಯಾನಿಗಳೊಂದಿಗೆ 35 ಮಿಲಿಯನ್ ಆರ್ಡರ್‌ಗಳೊಂದಿಗೆ ದಾಖಲೆ ನಿರ್ಮಿಸಿದೆ.

ಈ ನಡುವೆ ಚೆನ್ನೈನ ಬಿರಿಯಾನಿ ಪ್ರಿಯರೊಬ್ಬರು ಸ್ವಿಗ್ಗಿಯಲ್ಲಿ 31 ಸಾವಿರದ 532 ರೂ.ಗೆ ಆರ್ಡರ್ ಮಾಡುವ ಮೂಲಕ ತಮ್ಮ ಬಿರಿಯಾನಿ ಪ್ರೀತಿಯನ್ನು ಜಗತ್ತಿಗೆ ತೋರಿಸಿದ್ದಾರೆ.

ದೇಶ ರಾಜಕೀಯ

ಮುಂಬೈ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯ ಬೇಕಿದ್ದ ವಿಪಕ್ಷ ನಾಯಕರ ಸಭೆಯನ್ನು, ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆಡಳಿತಾರೂಢ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ, ಆಡಳಿತ ಪಕ್ಷದ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ಕರೆಯಲಾಗಿತ್ತು.

ಆ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ 16 ವಿರೋಧ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು. ಈ ಸಭೆಯ ಕೊನೆಯಲ್ಲಿ, ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿತ್ತು.

ಈ ಹಿನ್ನಲೆಯಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, “ಪಾಟ್ನಾದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆಯಿಂದ ಪ್ರಧಾನಿ ಮೋದಿ ಅಸ್ತವ್ಯಸ್ತರಾಗಿ ಕಾಣುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 13 ಮತ್ತು 14 ರಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿದೆ” ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜಕೀಯ

ಬೆಂಗಳೂರು: “ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ. ಆದರೆ, ಖರ್ಚು ಮಾಡಿಲ್ಲ. ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ.

ಕರ್ನಾಟದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ.

ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ; ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ; ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು

ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ವತಿಯಿಂದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯು (CET) ದಿನಾಂಕ: 20-05-2023 ಮತ್ತು 21-05-2023 ರಂದು ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಷವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ. ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

“ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET) ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ದೃಷ್ಟಿಯಿಂದ, ಹಾಗೂ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರ ಸೂಚನೆಯ ಮೇರೆಗೆ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 144ನೇ ಪ್ರರಕರಣದ ಅನ್ವಯ ಪ್ರದತ್ತರವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ: 20-05-2023 ರಂದು ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 3-50 ಗಂಟೆಯವರೆಗೆ ಮತ್ತು ದಿನಾಂಕ: 21-05-2023 ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 3-50 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಹಾಗೂ ಸದರಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಘೋಷಿಸಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ” ಎಂದು ವಿಷೇಶ ಪೊಲೀಸ್ ಆಯುಕ್ತರು, ಸಂಚಾರ ಮತ್ತು ಪೊಲೀಸ್ ಆಯುಕ್ತರು (ಪ್ರಭಾರ) ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಎಂ.ಎ.ಸಲೀಂ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

     

ಬೆಂಗಳೂರು

ಡಿ.ಸಿ.ಪ್ರಕಾಶ್

ತಿರುಮಂಗಲಂ: ತಮಿಳುನಾಡಿನ ತಿರುಮಂಗಲಂ ನಗರ ಪುರಸಭೆಯು ಸಾರ್ವಜನಿಕರಿಂದ ಸಂಗ್ರಹಿಸುವ ತಾಜ್ಯವನ್ನು ವಿಂಗಡಣೆ ಮಾಡಿ ಕೊಳೆತ ಹಸಿ ತ್ಯಾಜ್ಯದಿಂದ ನೈಸರ್ಗಿಕ ಗೊಬ್ಬರವನ್ನು ತಯಾರಿಸಿ ರೈತರಿಗೆ ಉಚಿತವಾಗಿ ವಿತರಿಸುತ್ತಿರುವುದು ಸುದ್ದಿಯಾಗಿದೆ.

ತಿರುಮಂಗಲಂ ಪುರಸಭೆಯಲ್ಲಿ ಪ್ರತಿದಿನ 12 ಮೆಟ್ರಿಕ್ ಟನ್ ಕಸವನ್ನು ಸ್ವಚ್ಚತಾ ಕಾರ್ಯಕರ್ತರಿಂದ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಲಾದ ಕಸವನ್ನು ಸಂಗ್ರಹ ಕೇಂದ್ರಕ್ಕೆ ತಂದು, ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವೆಂದು ಇಬ್ಬಾಗವಾಗಿ ವಿಂಗಡಿಸಲಾಗುತ್ತದೆ. ನಂತರ ಸಂಗ್ರಹ ಕೇಂದ್ರದಲ್ಲಿರುವ ಗ್ರೈಂಡಿಂಗ್ ಯಂತ್ರಗಳ ಮೂಲಕ ಸಣ್ಣ ಸಣ್ಣ ತುಂಡುಗಳಾಗಿ ಪುಡಿಮಾಡಲಾಗುತ್ತದೆ.

ನಂತರ ಈ ಕೇಂದ್ರದಲ್ಲಿರುವ ತೊಟ್ಟಿಗಳಲ್ಲಿ ಇಎಂ ದ್ರಾವಣವನ್ನು (ಸಲ್ಯೂಷನ್) ಬಳಸಿ 21 ದಿನಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ನಂತರ ಅವುಗಳನ್ನು ತೊಟ್ಟಿಯಿಂದ ಹೊರತೆಗೆದು ಮತ್ತೆ 24 ದಿನಗಳವರೆಗೆ ಒಣಗಿಸಿ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈ ನೈಸರ್ಗಿಕ ಗೊಬ್ಬರಗಳನ್ನು ಮನೆಯಲ್ಲಿ ಬೆಳೆಸುವ ಗಿಡಗಳು, ಬಳ್ಳಿಗಳು ಮತ್ತು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ನೈಸರ್ಗಿಕ ಗೊಬ್ಬರ ಬೇಕಾದವರು ನಗರಸಭೆಯ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂದೂ ಪ್ರಕಟಣೆಯನ್ನೂ ನೀಡಲಾಗಿದೆ. ನಗರಸಭೆ ಮೂಲಕ ದೊರೆಯುವ ನೈಸರ್ಗಿಕ ಗೊಬ್ಬರವನ್ನು ಪಡೆಯಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಇದಲ್ಲದೇ ಒಣ ತ್ಯಾಜ್ಯಗಳಾದ ರಟ್ಟು, ಹಾಲಿನ ಪ್ಯಾಕೆಟ್, ಪ್ಲಾಸ್ಟಿಕ್ ಕವರ್ ಇತ್ಯಾದಿಗಳನ್ನು ಸ್ವಚ್ಛತಾ ಕಾರ್ಮಿಕರೇ ತೆಗೆದುಕೊಳ್ಳುತ್ತಾರೆ. ಉಳಿದ ತ್ಯಾಜ್ಯಗಳಾದ ರಬ್ಬರ್, ಟೈರ್ ಮತ್ತು ಹಳೆಯ ಶೂಗಳನ್ನು ತಿರುಮಂಗಲಂ ಪುರಸಭೆಯ ಮೂಲಕ ಸಿಮೆಂಟ್ ಕಂಪೆನಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ತಂತ್ರಗಾರಿಕೆ ನಮಗೆ ತಿಳಿದಿದ್ದರೂ ನಾವು ಆ ಪ್ರಯತ್ನಕ್ಕೆ ಕೈಹಾಕಲಿಲ್ಲ ಎಂದು ಭಾವಿಸುತ್ತೇನೆ. ನಾವು ಯಾಕೆ ಇಂತಹ ಪ್ರಯತ್ನವನ್ನು ಮಾಡಬಾರದು ಎಂಬುದು ನನ್ನ ಪ್ರಶ್ನೆಯಾಗಿದೆ.

ಬೆಂಗಳೂರು ನಗರದಲ್ಲಿ ಸಂಗ್ರಹಿಸಲಾಗುವ ಹಸಿ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಿ ಹಂಚಿಕೆ ಮಾಡಿದರೆ, ನಮ್ಮ ಅಕ್ಕಪಕ್ಕದಲ್ಲಿರುವ ಎಲ್ಲಾ ಜಿಲ್ಲೆಗಳಿಗೂ ಉಚಿತವಾಗಿ ನೈಸರ್ಗಿಕ ಗೊಬ್ಬರವನ್ನು ಹಂಚಿಕೆಮಾಡಬಹುದು ಅಲ್ಲವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಮ್ಮ ಸುತ್ತಮುತ್ತ ಇರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಇದರ ಬಗ್ಗೆ ಯೋಚಿಸಬೇಕು.