ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮಹಿಳಾ ಬಾಕ್ಸಿಂಗ್ Archives » Dynamic Leader
December 3, 2024
Home Posts tagged ಮಹಿಳಾ ಬಾಕ್ಸಿಂಗ್
ಕ್ರೀಡೆ

ದೆಹಲಿ: ದೆಹಲಿಯಲ್ಲಿ 13ನೇ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಇದರಲ್ಲಿ ಇಂದು 81 ಕೆಜಿ ವಿಭಾಗದಲ್ಲಿ ಫೈನಲ್ ಪಂದ್ಯ ನಡೆಯಿತು. ಇದರಲ್ಲಿ ಭಾರತದ ಸ್ವೀಟಿ ಬುರಾ ಚೀನಾದ ವಾಂಗ್ ಲಿನಾ ಅವರನ್ನು ಎದುರಿಸಿದರು. ಭಾರತದ ಸ್ವೀಟಿ ಬೋರಾ ರೋಚಕ ಪಂದ್ಯದಲ್ಲಿ ಚೀನಾದ ಲಿನಾ ಅವರನ್ನು 4-3 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.

81 ಕೆಜಿ ವಿಭಾಗದಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಸ್ವೀಟಿ ಬುರಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ನಿತು ಗಂಗಾಸ್ ಈಗಾಗಲೇ 48 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿರುವುದು ಗಮನಾರ್ಹ. Saweety Boora wins gold medal by defeating China’s Wang Lina in the 81 kg category final at Women’s World Boxing Championships.