ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
cricket Archives » Dynamic Leader
November 21, 2024
Home Posts tagged cricket
ಕ್ರೀಡೆ

ಐಪಿಎಲ್ ಇತಿಹಾಸದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಮಳೆಯಿಂದಾಗಿ ಕೈಬಿಡಲಾದ ಪಂದ್ಯಗಳ ನೋಟ ಇಲ್ಲಿದೆ.

ಪ್ರಸ್ತುತ ಐಪಿಎಲ್ ಸರಣಿಯ ಯಾವುದೇ ಪಂದ್ಯಕ್ಕಿಂತ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ಸುದ್ದಿಯೇ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಇಲ್ಲಿ ಬೀಳುವ ಮಳೆ. ಈ ಹಿನ್ನೆಲೆಯಲ್ಲಿ, ಐಪಿಎಲ್ ಇತಿಹಾಸದಲ್ಲಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ರದ್ದಾಗಿರುವ ಪಂದ್ಯಗಳ ಮಾಹಿತಿ ಇಲ್ಲಿದೆ.

RCB ಮತ್ತು ರಾಜಸ್ಥಾನ ನಡುವಿನ 2011ರ ಐಪಿಎಲ್ ಪಂದ್ಯವು ಒಂದು ಚೆಂಡು ಎಸೆತವಿಲ್ಲದೆ ರದ್ದುಗೊಂಡಿತು. ಅದರ ನಂತರ, 2012ರಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ ಸರಣಿಯಲ್ಲಿ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಳೆ ಹೆಚ್ಚಾದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಅದೇ ರೀತಿ 2015ರಲ್ಲಿ ಆರ್‌ಸಿಬಿ ಹಾಗೂ ದೆಹಲಿ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ದೆಹಲಿ ತಂಡ 20 ಓವರ್‌ಗಳಲ್ಲಿ 187 ರನ್ ಸೇರಿಸಿತು. ಇದಾದ ಬಳಿಕ ಏಕಾಏಕಿ ಮಳೆ ಸುರಿದ ಕಾರಣ ಆರ್‌ಸಿಬಿ ಬ್ಯಾಟಿಂಗ್ ಮಾಡದೆ ಪಂದ್ಯ ರದ್ದಾಗಿದೆ ಎಂದು ಘೋಷಿಸಲಾಯಿತು.

ನಂತರ 2015ರಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 200 ರನ್ ಸೇರಿಸಿತ್ತು. ಇದಾದ ಬಳಿಕ ಮಳೆಯಿಂದಾಗಿ ರಾಜಸ್ಥಾನ ತಂಡಕ್ಕೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಂದ್ಯ ರದ್ದಾಗಿತ್ತು.

ಮುಂದೆ, 2017 ರಲ್ಲಿ RCB-ಹೈದರಾಬಾದ್ ಪಂದ್ಯವು ಮಳೆಯಿಂದಾಗಿ ಒಂದು ಚೆಂಡು ಬೌಲ್ ಆಗದೆ ರದ್ದುಗೊಂಡಿತು. ಅದೇ ರೀತಿ 2019ರಲ್ಲಿ ಮಳೆಯಿಂದಾಗಿ ಆರ್‌ಸಿಬಿ ಹಾಗೂ ರಾಜಸ್ಥಾನ ತಂಡಗಳ ನಡುವಿನ ಪಂದ್ಯವನ್ನು 5 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು.

ಈ ಪಂದ್ಯದಲ್ಲಿ ರಾಜಸ್ಥಾನ ತಂಡ 63 ರನ್‌ಗಳ ಗುರಿ ಬೆನ್ನಟ್ಟಿದ ವೇಳೆ 4ನೇ ಓವರ್‌ನಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿತು. ಪರಿಣಾಮವಾಗಿ ಪಂದ್ಯವನ್ನು ಕೈಬಿಡಲಾಗಿದೆ ಎಂದು ಘೋಷಿಸಲಾಯಿತು. ಚಿನ್ನಸ್ವಾಮಿ ಮೈದಾನದಲ್ಲಿ ಇದುವರೆಗೆ 6 ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದರೂ, 2019 ರಿಂದ ಪಂದ್ಯಗಳಿಗೆ ಮಳೆಯ ತೊಂದರೆಯಾಗಿಲ್ಲ ಎಂಬುದು ಗಮನಾರ್ಹ.

ಕ್ರೀಡೆ ದೇಶ

ಚೆನ್ನೈ: ವಿಶ್ವ ಕಪ್ ಕ್ರಿಕೆಟ್‌ನ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಲೀಗ್ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.

ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡವು 42.5 ಓವರ್‌ಗಳಲ್ಲಿ 191 ರನ್‌ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡಿದರು. ಪಂದ್ಯದ ವೇಳೆ ಅಭಿಮಾನಿಗಳು ಹಲವು ಬಾರಿ ಜಯಶ್ರೀರಾಮ್ ಘೋಷಣೆ ಕೂಗಿದರು.

ಮತ್ತು ಪಾಕಿಸ್ತಾನದ ಪ್ರಮುಖ ಆಟಗಾರ ‘ರಿಜ್ವಾನ್’ 49 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದಾಗ ‘ಜಯಶ್ರೀರಾಮ್’ ಘೋಷಣೆಗಳು ಮೊಳಗಿದವು. ಇದನ್ನು ಹಲವರು ಟೀಕಿಸಿದ್ದಾರೆ. ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಹಂಚಿಕೊಂಡಿರುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, “ಆತಿಥ್ಯಕ್ಕೆ ಹೆಸರುವಾಸಿಯಾದ ಭಾರತದಲ್ಲಿ ಪಾಕಿಸ್ತಾನಿ ಆಟಗಾರರ ವಿರುದ್ಧ ಘೋಷಣೆಗಳು ಸ್ವೀಕಾರಾರ್ಹವಲ್ಲ. ಕ್ರೀಡೆ ಎಂಬುದು ರಾಷ್ಟ್ರಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಬೇಕು.

ಕ್ರೀಡೆಗಳು ಯಾವಾಗಲೂ ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷ ಹರಡಲು ಕ್ರೀಡೆಯನ್ನು ಸಾಧನವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡೆ

ಭಾರತದಲ್ಲಿ 50 ಓವರ್ ಪುರುಷರ ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗಲು ಇನ್ನು 5 ದಿನ ಮಾತ್ರ ಬಾಕಿ ಇದೆ. ಇದಕ್ಕಾಗಿ ಸಮಾರಂಭಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ತಂಡದ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸಲು ಬಂದಿರುವ ಪ್ರತಿ ತಂಡದ ಆಟಗಾರರ ಮೆನು ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಯಾವುದೇ ತಂಡಕ್ಕೆ ಗೋಮಾಂಸ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ದನದ ಮಾಂಸ ಇಲ್ಲದ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಿಗೂ ವಿಭಿನ್ನ ಮೆನು ಸಿದ್ಧಪಡಿಸಲಾಗಿದೆ. ಆದರೂ ಮೆನುವಿನಲ್ಲಿ ಗೋಮಾಂಸ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ವರ್ಷ ಭಾರತದಲ್ಲಿ ವಿಶ್ವಕಪ್ ಸರಣಿ ನಡೆಯಲಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಬರುವ ವಿದೇಶಿ ಆಟಗಾರರಿಗೆ ನೀಡುವ ಆಹಾರದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಗೋಮಾಂಸವನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಮಟನ್, ಚಿಕನ್, ಮೀನಿನಂಥ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಆಟಗಾರರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

ವಿಶೇಷವೆಂದರೆ, ಏಳು ವರ್ಷಗಳ ನಂತರ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಅವರಿಗೆ ಬಡಿಸುವ ಆಹಾರದ ಪ್ರಕಾರಗಳಲ್ಲಿ ಮಟನ್ ಚಾಪ್ಸ್, ಮಟನ್ ಗ್ರೇವಿ, ಬಟ್ಟರ್ ಚಿಕ್ಕನ್, ಹುರಿದ ಮೀನು ಮತ್ತು ಬಾಸ್ಮತಿ ಅಕ್ಕಿ, ಸ್ಪಾಗೆಟ್ಟಿ ಮತ್ತು ಬೊಲೊಗ್ನೀಸ್ ಸಾಸ್, ವೆಜ್ ಪುಲಾವ್ ಮತ್ತು ಹೈದರಾಬಾದ್ ಬಿರಿಯಾನಿ ಮುಂತಾದವುಗಳು ಒದಗಿಸಲಾಗುತ್ತದೆ. ಅದರಲ್ಲಿ ದನದ ಮಾಂಸ ಇರುವುದಿಲ್ಲ ಎಂಬುದು ವಿವಾದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕೆಲವರು ಹಸುವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಹಾಗಾಗಿ ದೇಶದ ಹಲವು ಭಾಗಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಗೋಮಾಂಸ ಸಾಗಣೆದಾರರು ಮತ್ತು ಮಾರಾಟಗಾರರನ್ನು ಗೋರಕ್ಷಕರು ಹತ್ಯೆಗೈದ ಮತ್ತು ಹಲ್ಲೆ ಮಾಡಿದ ಘಟನೆಗಳೂ ನಡೆದಿವೆ. ಈ ಕಾರಣಕ್ಕಾಗಿ ಭಾರತ ಸರ್ಕಾರ ವಿಶ್ವಕಪ್ ಆಟಗಾರರಿಗೆ ಗೋಮಾಂಸವನ್ನು ನಿಷೇಧಿಸಿರಬಹುದು ಎಂದು ಹೇಳಲಾಗಿದೆ. ಆದರೂ ಇದನ್ನು ಕೆಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ಅನೇಕ ನೆಟ್ಟಿಗರು ಇದನ್ನು ಟೀಕಿಸುತ್ತಿದ್ದಾರೆ.

ಸಿನಿಮಾ

ಐಶ್ವರ್ಯಾ ರಜನಿಕಾಂತ್ ಸದ್ಯ ‘ಲಾಲ್ ಸಲಾಂ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೈಕಾ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್.ರಹಮಾನ್‌ ಸಂಗೀತ ಸಂಯೋಜಿಸಿದ್ದಾರೆ.

ನಟ ರಜನೀಕಾಂತ್ ಹಾಗೂ ಮಾಜಿ ಕ್ರಿಕಟಿಗ ಕಪಿಲ್ ದೇವ್

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ‘ಲಾಲ್ ಸಲಾಂ’ ಚಿತ್ರದಲ್ಲಿ ಮೊಯ್ದೀನ್ ಭಾಯ್ ಪಾತ್ರವನ್ನು ನಟ ರಜನಿಕಾಂತ್ ಮಾಡಲಿದ್ದಾರೆ ಎಂದು ಚಿತ್ರತಂಡ ಪ್ರಕಟಿಸಿತ್ತು. ಇತ್ತೀಚೆಗಷ್ಟೇ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದರು.

ಈ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರದ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಅದರಂತೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ವಿಷಯವನ್ನು ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದಾರೆ. “ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಮಹಾನ್, ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿಯಾದ ಕಪಿಲ್ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಸಂತೋಷವಾಗಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಮೂಡಿಸಿದೆ.

ಕ್ರೀಡೆ

ಇಸ್ಲಾಮಾಬಾದ್: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಮಾಜಿ ಆಟಗಾರ ಶೋಯಬ್ ಅಖ್ತರ್ ಹೊಗಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತ್ನಾಡಿದ ಶೋಯಬ್, ‘ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ನಾನು ನಂಬುತ್ತೇನೆ. ಆದರೆ ಸಚಿನ್ ನಾಯಕನಾಗಿ ಏನನ್ನೂ ಸಾಧಿಸಲಿಲ್ಲ. ಅವರು ನಾಯಕತ್ವವನ್ನು ನಿರಾಕರಿಸಿದರು. ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಫಾರ್ಮ್‌ನಿಂದ ಹೊರಗುಳಿಯುತ್ತಿದ್ದರು.

ಆದರೆ ಅವರು ತಮ್ಮ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಮತ್ತೆ ಕ್ರಿಕೆಟ್ ಕ್ಷೇತ್ರದಲ್ಲಿ ಮೆರೆಯುತ್ತಿದ್ದಾರೆ. ಕೊಹ್ಲಿಯ ದಾಖಲೆಯನ್ನು ನೋಡಿದರೆ ನೀವು ಇದನ್ನು ಕಾಣಬಹುದು. ನನ್ನನ್ನು ನೋಡುವ ಸ್ನೇಹಿತರು ನೀವು ಕೊಹ್ಲಿಯನ್ನು ತುಂಬಾ ಮೆಚ್ಚುತ್ತಿದ್ದೀರಿ ಎಂದು ಹೇಳುತ್ತಾರೆ. ನಾನು ಅವರಿಗೆ ಹೇಳುವುದು ಇಷ್ಟೆ, ನಾನು ಅವರನ್ನು ಪ್ರಶಂಸಿಸದೆ ಹೇಗಿರಲಿ ಎಂಬುದೆ. ಎಂದು ಹೇಳೀದ್ದಾರೆ.

Former Pakistan cricketer Shoaib Akhtar has used a comparison to Sachin Tendulkar to explain his constant praise of Virat Kohli. The speedster said it was Kohli’s batting during the phase he was also the captain, that had impressed him.