ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Microsoft Alert Archives » Dynamic Leader
December 4, 2024
Home Posts tagged Microsoft Alert
ದೇಶ

ಎಐ ತಂತ್ರಜ್ಞಾನದ ಮೂಲಕ ರಚಿತವಾದ ನಕಲಿ ರಾಜಕೀಯ ಜಾಹೀರಾತುಗಳು, ಡೀಪ್‌ಫೇಕ್ ಆಡಿಯೊಗಳು ಮತ್ತು ವೀಡಿಯೊಗಳು ಮತದಾರರನ್ನು ದಾರಿ ತಪ್ಪಿಸಬಹುದು ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ!

ಭಾರತದಲ್ಲಿ ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗಲಿದ್ದು, 7ನೇ ಹಂತವು ಜೂನ್ 1 ರಂದು ಕೊನೆಗೊಳ್ಳಲಿದೆ. ಈ ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಎಐ (AI) ತಂತ್ರಜ್ಞಾನದೊಂದಿಗೆ ಚೀನಾ ಚುನಾವಣೆಗಳನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.

ತೈವಾನ್‌ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲು ಎಐ ತಂತ್ರಜ್ಞಾನವನ್ನು ಬಳಸಲು ಚೀನಾ ಪ್ರಯತ್ನಿಸಿದ್ದು, ಅಮೆರಿಕಾದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣಾ ಪ್ರಚಾರದ ಮೇಲೆಯೂ ಪ್ರಭಾವ ಬೀರಲು ಈ ಚೀನೀ ಗುಂಪುಗಳು ಪ್ರಯತ್ನಿಸುತ್ತಿವೆ ಎಂದು ಮೈಕ್ರೋಸಾಫ್ಟ್ ಇಂಟೆಲಿಜೆನ್ಸ್ ಗ್ರೂಪ್ ಎಚ್ಚರಿಸಿದೆ.

ಎಐ ತಂತ್ರಜ್ಞಾನದ ಮೂಲಕ ರಚಿತವಾದ ನಕಲಿ ರಾಜಕೀಯ ಜಾಹೀರಾತುಗಳು, ಡೀಪ್‌ಫೇಕ್ ಆಡಿಯೊಗಳು ಮತ್ತು ವೀಡಿಯೊಗಳು ಮತದಾರರನ್ನು ದಾರಿ ತಪ್ಪಿಸಬಹುದು ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.

ಈ ಎಐ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳ ಹೇಳಿಕೆಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಅವರ ನಿಲುವುಗಳನ್ನು ಜನರಲ್ಲಿ ತಪ್ಪಾಗಿ ಹರಡಿಸಿ, ಜನರನ್ನು ತಪ್ಪುದಾರಿಗೆಳೆಯಬಹುದು. ಹಾಗಾಗಿ ಆ ಸಂದೇಶಗಳನ್ನು ಪರಿಶೀಲಿಸದೇ ಅನುಮತಿಸಿದರೆ ಮತದಾರರು ಸರಿಯಾದ ನಿರ್ಧಾರ ತೆಗೆದುಕೊಳ್ಳದಿರುವ ಸಾಧ್ಯತೆಗಳು ಇದೆ.

ಅಲ್ಲದೆ, “ಚೀನಾ ಸರ್ಕಾರದ ಬೆಂಬಲಿತ ಸೈಬರ್ ಗುಂಪುಗಳು ಉತ್ತರ ಕೊರಿಯಾದ ಸಹಾಯದಿಂದ 2024ರಲ್ಲಿ ನಡೆಯಲಿರುವ ವಿವಿಧ ಚುನಾವಣೆಗಳನ್ನು ಹಾಳುಮಾಡಲು ಯೋಜಿಸುತ್ತಿವೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ರಚಿತವಾದ ಅಭಿಪ್ರಾಯಗಳನ್ನು ಹರಡಿಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಬದಲಾಯಿಸಲು ಯೋಜಿಸಿದ್ದಾರೆ” ಎಂದು ಮೈಕ್ರೋಸಾಫ್ಟ್ ಇಂಟೆಲಿಜೆನ್ಸ್ ಗ್ರೂಪ್ ಎಚ್ಚರಿಸಿದೆ. ಆದರೂ, ಭಾರತದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಕಳೆದ ತಿಂಗಳು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಸಾಮಾಜಿಕ ಪ್ರಗತಿ, ಮಹಿಳೆಯರ ಅಭಿವೃದ್ಧಿ ಹಾಗೂ ಆರೋಗ್ಯದಲ್ಲಿ ಎಐ ತಂತ್ರಜ್ಞಾನವನ್ನು ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಎಂಬುದರ ಬಗ್ಗೆ ಇಬ್ಬರೂ ಚರ್ಚಿಸಿದ್ದು ಗಮನಾರ್ಹ.