ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Vaikom 100 Archives » Dynamic Leader
December 12, 2024
Home Posts tagged Vaikom 100
ದೇಶ

ಕೇರಳದ ಕೊಟ್ಟಾಯಂನಲ್ಲಿ ಪೆರಿಯಾರ್ ನಡೆಸಿದ ವೈಕಂ ಚಳುವಳಿಯ ಶತಮಾನೋತ್ಸವ ಇಂದು ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದಾರೆ.

ಮಹಾದೇವ ದೇವಸ್ಥಾನದ ಬೀದಿಗಳಲ್ಲಿ ಒಂದು ಪಂಗಡದವರಿ ಅವಕಾಶ ನೀಡದೇ ಅಸ್ಪೃಶ್ಯತೆ ಆಚರಿಸುವುದನ್ನು ಖಂಡಿಸಿ ಪೆರಿಯಾರ್ ಅವರ ನೇತೃತ್ವದಲ್ಲಿ ವೈಕಂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಪೆರಿಯಾರ್ ಅವರನ್ನು ಬಂಧಿಸಲಾಯಿತು. ಸತತ 74 ದಿನ ಜೈಲಿನಲ್ಲಿದ್ದು ಚಿತ್ರಹಿಂಸೆ ಅನುಭವಿಸಿದರು. ಆದರೂ ಹೋರಾಟವನ್ನು ಕೈಬಿಡಲಿಲ್ಲ. ಅಂತಿಮವಾಗಿ ಮಹಾತ್ಮ ಗಾಂಧಿಯವರು ಮಧ್ಯಪ್ರವೇಶಿಸಿ ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿದ ನಂತರ ಮಹಾದೇವ ದೇವಸ್ಥಾನದ ಬೀದಿಗಳಲ್ಲಿ ಎಲ್ಲ ವರ್ಗದವರಿಗೂ ಅವಕಾಶ ನೀಡಲಾಯಿತು. ಹೀಗೆ ವೈಕಂ ಹೋರಾಟ ಯಶಸ್ವಿಯಾಗಿ ಕೊನೆಗೊಂಡಿತು.

ಇಂತಹ ಇತಿಹಾಸವಿರುವ ವೈಕಂ ಹೋರಾಟ 100 ವರ್ಷ ದಾಟಿದೆ. ಇಂತಹ ಹೋರಾಟಗಳನ್ನು ಸ್ಮರಿಸಲು ಕೇರಳದಲ್ಲಿ ವೈಕಂ ದೇವಾಲಯ ಪ್ರವೇಶ ಪ್ರತಿಭಟನೆಯ 100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದಾರೆ. ಕಾರ್ಯಕ್ರಮವು ತಮಿಳು ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಸ್ಮರಣಾರ್ಥ ಉಡುಗೊರೆಗಳನ್ನು ನೀಡಲಾಯಿತು.

ಮುಂಚಿತವಾಗಿ, ರೂ.8.14 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಪೆರಿಯಾರ್ ಸ್ಮಾರಕ ಮತ್ತು ಗ್ರಂಥಾಲಯವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಮುಖ್ಯಮಂತ್ರಿ ಸ್ಟಾಲಿನ್ ಅವರು ಪೆರಿಯಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪೆರಿಯಾರ್ ಸ್ಮಾರಕದಲ್ಲಿ ಪೆರಿಯಾರ್ ಅವರ ಪ್ರತಿಮೆ, ಛಾಯಾಚಿತ್ರಗಳ ಇತಿಹಾಸ, ಗ್ರಂಥಾಲಯ ಮತ್ತು ಉದ್ಯಾನವನವನ್ನು ಸಹ ಒಳಗೊಂಡಿದೆ. ಗ್ರಂಥಾಲಯದಲ್ಲಿ ಪೆರಿಯಾರ್ ಬರೆದ ಪುಸ್ತಕಗಳು ಮತ್ತು ಪೆರಿಯಾರ್ ಅವರ ಕೊಡುಗೆಯ ಕುರಿತು ಅನೇಕ ಲೇಖಕರು ಬರೆದ ಪುಸ್ತಕಗಳಿವೆ.

ಮುಖ್ಯಮಂತ್ರಿ ಸ್ಟಾಲಿನ್ ಅವರು ಇಂದು ತಮಿಳುನಾಡು ಸರ್ಕಾರದ ಪರವಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಸಾಹಿತಿ ದೇವನೂರ ಮಹಾದೇವ ಅವರಿಗೆ 2024ನೇ ಸಾಲಿನ ವೈಕಂ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂಬುದು ಗಮನಾರ್ಹ.