ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕ್ರಿಸ್ಚಿಯನ್ ದೌರ್ಜನ್ಯಗಳು Archives » Dynamic Leader
November 25, 2024
Home Posts tagged ಕ್ರಿಸ್ಚಿಯನ್ ದೌರ್ಜನ್ಯಗಳು
ದೇಶ

ಅಮೆರಿಕಾದ ಒಕ್ಲಹೋಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುತಾತ್ಮರ ಧ್ವನಿ (Voice of Martyrs) ಸಂಸ್ಥೆ, ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರ ಮೇಲೆ ನಡೆಯುವಂತಹ ಕಿರುಕುಳಗಳನ್ನು ದಾಖಲು ಮಾಡಿ, ಅಂತಹ ಚಟುವಟಿಕೆಗಳು ನಡೆಯುವ ದೇಶಗಳ ಸರ್ಕಾರಗಳಿಂದ ಸ್ಪಷ್ಟೀಕರಣಗಳನ್ನು ಪಡೆಯಲು ಅಮೆರಿಕಾವನ್ನು ಒತ್ತಾಯಿಸುತ್ತದೆ.

ಕೆಲವು ದಿನಗಳ ಹಿಂದೆ, ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್ persecution.com ನಲ್ಲಿ “ಭಾರತದಲ್ಲಿ ಇತರ ಧರ್ಮದ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಕ್ರೈಸ್ತರಿಗೆ ತೀವ್ರ ರೀತಿಯ ಕಿರುಕುಳ ನೀಡಲಾಗುತ್ತಿದೆ” ಎಂದು ವರದಿ ಮಾಡಿದೆ.

3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಸೆ.7 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ, ಜೋ ಬಿಡೆನ್ ಅವರ ಭಾರತ ಭೇಟಿ ಮತ್ತು ಧಾರ್ಮಿಕ ಕಿರುಕುಳದ ಕುರಿತಾದ ಪ್ರಶ್ನೆಗಳಿಗೆ ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯೂ ಮಿಲ್ಲರ್ (Matthew Miller) ಪ್ರತಿಕ್ರಿಯಿಸಿದ್ದಾರೆ.

ಇದರ ಕುರಿತು ಮಾತನಾಡಿದ ಅವರು, “ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಾಳಜಿ ವಹಿಸುವ ದೇಶಗಳೊಂದಿಗೆ ನಾವು ವಾಡಿಕೆಯಂತೆ ಮಾತನಾಡುತ್ತಿದ್ದೇವೆ. ನಾವು ಹಿಂದೆಯೂ ಮಾತನಾಡಿದ್ದೇವೆ; ಭವಿಷ್ಯದಲ್ಲೂ ಮಾತನಾಡುತ್ತೇವೆ. ಧಾರ್ಮಿಕ ಕಿರುಕುಳದ ಬಗ್ಗೆ ಮಾತನಾಡಲು ಅಮೆರಿಕ ಎಂದಿಗೂ ಹಿಂಜರಿಯುವುದಿಲ್ಲ.

ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲ, ಭಾರತ ಸೇರಿದಂತೆ ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ಧರ್ಮದ ಶೋಷಣೆಗೆ ಅಮೆರಿಕ ವಿರುದ್ಧವಾಗಿದೆ. ಅದರ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇವೆ” ಎಂದು ಹೇಳಿದರು.