ಪ್ರಧಾನಿ ನರೇಂದ್ರ ಮೋದಿ ಅವರು 'ದಿ ಕೇರಳ ಸ್ಟೋರಿ' ಚಲನ ಚಿತ್ರದ ನಿರ್ಮಾಪಕರೇ ಅಥವಾ ನಿರ್ದೇಶಕರೇ? » Dynamic Leader
November 23, 2024
ರಾಜಕೀಯ ಸಿನಿಮಾ

ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ಕೇರಳ ಸ್ಟೋರಿ’ ಚಲನ ಚಿತ್ರದ ನಿರ್ಮಾಪಕರೇ ಅಥವಾ ನಿರ್ದೇಶಕರೇ?

“ದಿ ಕೇರಳ ಸ್ಟೋರಿ ಚಲನ ಚಿತ್ರವು ಇಸ್ಲಾಮಿಕ್ ವಿರೋಧಿ ದ್ವೇಷ ರಾಜಕಾರಣವನ್ನು ಪ್ರೇರೇಪಿಸುತ್ತಿದೆ. ಈ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲಿಸುವುದಾಗಿ ಹೇಳಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕರೇ ಅಥವಾ ನಿರ್ದೇಶಕರೇ” ಎಂದು ಸಂಸದ ಡಾ.ತೊಲ್ ತಿರುಮಾವಳವನ್ ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಿರುವುದು ಆಘಾತಕಾರಿಯಾಗಿದೆ. ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದನ್ನು ಮುಂದುವರಿಸಿದರೆ ತಮಿಳುನಾಡಿನಲ್ಲಿ ಶಾಂತಿ ಕದಡುತ್ತದೆ. ಆದ್ದರಿಂದ ತಮಿಳುನಾಡು ಸರ್ಕಾರ ಕೂಡಲೇ ಈ ಚಿತ್ರವನ್ನು ನಿಷೇಧಿಸಬೇಕು ಎಂದು  ವಿಡುದಲೈ ಚಿರುತ್ತೈಗಳ್ ಪಕ್ಷದ ಅದ್ಯಕ್ಷ ಹಾಗೂ ಶಿವಗಂಗೈ ಸಂಸದ ಡಾ.ತೊಲ್ ತಿರುಮಾವಳವನ್ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ಕೇರಳ ಸ್ಟೋರಿ’ ಚಿತ್ರದ ವಿಷಯವನ್ನು ಪ್ರಸ್ತಾಪಿಸಿ, ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದೆ ಎಂದು ಹೇಳಿದರು. “ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ” ಎಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಬಳ್ಳಾರಿಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.

Related Posts