ತಮಿಳುನಾಡು PFI ಪ್ರಕರಣದಲ್ಲಿ ಮೂವರ ವಿರುದ್ಧ ತನಿಖಾ ಸಂಸ್ಥೆ NIA ಚಾರ್ಜ್‌ಶೀಟ್ ಸಲ್ಲಿಸಿದೆ!
ನವದೆಹಲಿ: ತಮಿಳುನಾಡಿನಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಅಬ್ದುಲ್ ರಜಾಕ್, ಮೊಹಮ್ಮದ್ ಯೂಸುಫ್ ಮತ್ತು ಕೈಜರ್ ಎ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಉಗ್ರವಾದಿ ಸಿದ್ಧಾಂತವನ್ನು ಸಕ್ರಿಯವಾಗಿ ಪ್ರತಿಪಾದಿಸುತ್ತಿದ್ದಾರೆ ಮತ್ತು ಪ್ರಸಾರ ಮಾಡುತ್ತಿದ್ದಾರೆ ಎಂದು ಪಿಎಫ್‌ಐನ ನಾಯಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್‌ಐಎ ಮಾರ್ಚ್ 17 ರಂದು 10 ಜನ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
ಪಿಎಫ್‌ಐ ಸಂಘಟನೆಯ ಕಾರ್ಯಾಚಟುವಟಿಕೆಗಳು ಚೆನ್ನೈನ ಪುರಸವಾಕ್ಕಂನಲ್ಲಿರುವ ತಮ್ಮ ರಾಜ್ಯ ಪ್ರಧಾನ ಕಛೇರಿಯ ಮೂಲಕ ನಡೆಸಲಾಗುತ್ತಿತ್ತು. ಮತ್ತು ತಮಿಳುನಾಡಿನಾದ್ಯಂತ ಇರುವ ಜಿಲ್ಲಾ ಕಛೇರಿಗಳ ಮೂಲಕವೂ ಅವರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ತನಿಖೆಯ ಸಮಯದಲ್ಲಿ, ಆರೋಪಿಗಳಾದ ರಜಾಕ್, ಯೂಸುಫ್ ಮತ್ತು ಕೈಜರ್ ಎ ಅವರ ನಿವಾಸಗಳಲ್ಲಿ ಶೋಧ ನಡೆಸಲಾಯಿತು ಮತ್ತು ಅವರನ್ನು ಬಂಧಿಸಿ ಮೇ 9 ರಂದು ಚೆನ್ನೈನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ಶಂಕಿತರು ಪಿಎಫ್‌ಐನ ಉಗ್ರಗಾಮಿ ಸಿದ್ಧಾಂತವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು. ಮತ್ತು ನೇಮಕಗೊಂಡ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ, PFI ನ ಸಿದ್ಧಾಂತಗಳಿಗೆ ವಿರುದ್ಧವಾಗಿರುವವರ ಮೇಲೆ ದಾಳಿ, ಹಲ್ಲೆ, ಅಂಗವಿಕಲತೆ ಮತ್ತು ಕೊಲೆಗೆ ಯತ್ನಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಹಿಂಸಾತ್ಮಕ ವಿಧಾನಗಳ ಮೂಲಕ ಭಾರತ ಸರ್ಕಾರವನ್ನು ಉರುಳಿಸಲು ಈ ಆರೋಪಿಗಳು ಪಿತೂರಿ ನಡೆಸಿ, ಸ್ವಯಂ-ಶೈಲಿಯ PFI ಸೈನ್ಯದಲ್ಲಿ ಹೊಸ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದು NIA ವಕ್ತಾರರು ತಿಳಿಸಿದ್ದಾರೆ.
Source: ndtv.com