"ಸೈನಿಕರು ಇರುವ ಸ್ಥಳವೇ ನನಗೆ ಅಯೋಧ್ಯೆ" - ಪ್ರಧಾನಿ ನರೇಂದ್ರ ಮೋದಿ » Dynamic Leader
November 23, 2024
ದೇಶ

“ಸೈನಿಕರು ಇರುವ ಸ್ಥಳವೇ ನನಗೆ ಅಯೋಧ್ಯೆ” – ಪ್ರಧಾನಿ ನರೇಂದ್ರ ಮೋದಿ

ಲೆಪ್ಚಾ: 2014 ರಿಂದ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದ ಪ್ರಧಾನಿ ಮೋದಿ, ಈ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಯೋಧರ ನಡುವೆ ಮಾತನಾಡಿದ ಮೋದಿ ಅವರು,

“ರಾಮ ಇರುವ ಸ್ಥಳ ಅಯೋಧ್ಯೆ” ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ” ಎಂದು ಹೇಳಿದ್ದಾರೆ.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಯಾವುದೇ ಸವಾಲನ್ನು ಎದುರಿಸಲು ಯೋಧರು ಸಿದ್ಧರಾಗಿದ್ದಾರೆ. ನಮ್ಮ ಯೋಧರು ಎಲ್ಲದರಲ್ಲೂ ಮುಂದಿದ್ದಾರೆ. ದೇಶವು ತನ್ನ ಸೈನಿಕರಿಗೆ ಋಣಿಯಾಗಿದೆ. ಸ್ವಾವಲಂಬನೆಯ ಭಾರತ ಎಂಬ ಗುರಿಯತ್ತ ನಮ್ಮ ದೇಶ ಸಾಗುತ್ತಿದೆ. ಭಾರತದಲ್ಲಿ ಭದ್ರತಾ ಉಪಕರಣಗಳ ಉತ್ಪಾದನೆ 1 ಲಕ್ಷ ಕೋಟಿ ದಾಟಿದೆ. 140 ಕೋಟಿ ಜನ ನಿಮ್ಮೊಂದಿಗಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮಗಾಗಿ ಪ್ರಾರ್ಥಿಸುತ್ತಿದ್ದಾನೆ.

ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದೇನೆ. ಇಲ್ಲಿಂದ ನಾಡಿನ ಜನರಿಗೆ ಶುಭಾಶಯಗಳನ್ನು ಹೇಳುವುದು  ವಿಷೇಶವಾಗಿರುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ರಾಮ ಇರುವ ಸ್ಥಳ ಅಯೋಧ್ಯೆ ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ”

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಭಾರತದ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭಗಳಲ್ಲಿ ಭಾರತದ ಗಡಿ ಪ್ರದೇಶಗಳು ಸುರಕ್ಷಿತವಾಗಿರುವುದು ಮುಖ್ಯ. ದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುತ್ತಿದ್ದೇವೆ. ಅದರಲ್ಲಿ ನಿಮಗೆ ಮಹತ್ವದ ಪಾತ್ರವಿದೆ. ಗಡಿಯಲ್ಲಿ ಯೋಧರು ಹಿಮಾಲಯದಂತೆ ಗಟ್ಟಿಯಾಗಿ ನಿಂತಿರುವುದರಿಂದ ನಮ್ಮ ದೇಶ ಸುರಕ್ಷಿತವಾಗಿದೆ. ಎಂದು ಮೋದಿ ಹಾಳಿದ್ದಾರೆ.

Related Posts