ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆ ಅಗತ್ಯವಿಲ್ಲ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, “ಮುಟ್ಟು ಮತ್ತು ಋತುಚಕ್ರವು ದೋಷವಲ್ಲ, ಮಹಿಳೆಯರ ಜೀವನದಲ್ಲಿ ಇದು ಸಹಜ. ಮುಟ್ಟನ್ನು ಎದುರಿಸುವ ಮಹಿಳೆಯಾಗಿ ನಾನು ಇದನ್ನು ಹೇಳುತ್ತಿದ್ದೇನೆ.
ಕಡಿಮೆ ಪ್ರಮಾಣದ ಮಹಿಳೆಯರೇ ತೀವ್ರ ಮುಟ್ಟಿನ ನೋವಿಗೆ ಒಳಗಾಗುತ್ತಾರೆ. ಇವು ಸಾಮಾನ್ಯವಾಗಿ ಔಷಧಿಗಳ ಮೂಲಕ ಸರಿ ಮಾಡಬಹುದಾದವುಗಳು. ಆದ್ದರಿಂದ, ಮಹಿಳೆಯರಿಗೆ ವೇತನ ನೀಡುವುದರೊಂದಿಗೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಅನಿವಾರ್ಯವಲ್ಲ” ಎಂದು ಹೇಳಿದ್ದಾರೆ. ಹೀಗೆ ಸ್ಮೃತಿ ಇರಾನಿ ಮಾತನಾಡಿದ್ದು ವಿವಾದವನ್ನು ಸೃಷ್ಟಿಸಿದೆ.