Leader Impact: ಮನೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ನಗರೇಶ್ವರ ನಾಗೇನಹಳ್ಳಿಗೆ ಭೇಟಿಕೊಟ್ಟ ವಸತಿ ಸಚಿವರು ಹಾಗೂ ಕೊಳಗೇರಿ ಮಂಡಳಿಯ ಅಧ್ಯಕ್ಷರು! » Dynamic Leader
October 21, 2024
ಬೆಂಗಳೂರು

Leader Impact: ಮನೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ನಗರೇಶ್ವರ ನಾಗೇನಹಳ್ಳಿಗೆ ಭೇಟಿಕೊಟ್ಟ ವಸತಿ ಸಚಿವರು ಹಾಗೂ ಕೊಳಗೇರಿ ಮಂಡಳಿಯ ಅಧ್ಯಕ್ಷರು!

ಬೆಂಗಳೂರು: ವಸತಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ (Slum Board) ನೂತನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಇಂದು ಬೆಂಗಳೂರು ಸರ್ವಜ್ಞ ನಗರ ಕ್ಷೇತ್ರದ ಮಾರುತಿ ಸೇವಾ ನಗರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಿರ್ಮಿಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಬಂದಿದ್ದಾರೆ.

ನೆನ್ನೆ ನಮ್ಮ ಡೈನಾಮಿಕ್ ಲೀಡರ್, “ಕೊಳಗೇರಿ ಮಂಡಳಿಯ ಕರ್ಮಕಾಂಡ-1” ಶೀರ್ಷಿಕೆಯಡಿ, ‘ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು! ಕಂಡುಕೊಳ್ಳದ ವಸತಿ ಸಚಿವ’ ಎಂಬ ತನಿಖಾ ಸುದ್ಧಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು.! ಕಂಡುಕೊಳ್ಳದ ವಸತಿ ಸಚಿವರು.!!

ಡೈನಾಮಿಕ್ ಲೀಡರ್‌ ನಲ್ಲಿ ಪ್ರಕಟವಾದ ಸುದ್ಧಿಯಲ್ಲಿ, “ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ” ಎಂದು ವರದಿ ಮಾಡಿತ್ತು.

ಜೊತೆಯಲ್ಲೇ, “ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದೂ ಮನವಿ ಮಾಡಿತ್ತು.

ಈ ಹಿನ್ನಲೆಯಲ್ಲಿ, ಕೆ.ಆರ್.ಪುರಂ ವಿಧಾನಸಭಾ ಮತಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ, ಸ್ಲಮ್ ಬೋರ್ಡ್ ವತಿಯಿಂದ ನಿರ್ಮಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಮಂಡಳಿಯ ಅಧಿಕಾರಿಗಳೊಂದಿಗೆ ಬಂದಿರುವುದು ಸ್ವಾಗತಾರ್ಹ. ಅದೇ ವೇಳೆಯಲ್ಲಿ ಮಂಡಳಿಯ ಅಧಿಕಾರಿಗಳು ನಿಮ್ಮಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ; ಎಚ್ಚರದಿಂದ ಇರಲು ನಮ್ಮ ಮನವಿ. ಆದಷ್ಟು ಬೇಗೆ ನಮ್ಮ ಕೋರಿಕೆಯ ಮೇಲೆ ಕ್ರಮ ಕೈಗೊಂಡು ಕೊಳಗೇರಿ ಬಡಜನರಿಗೆ ನೆರವಾಗುತ್ತೀರಿ ಎಂದು ನಂಬಿದ್ದೇವೆ.

Related Posts