ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸು ಜಾನಪದ ಹಾಗೂ ಬೀದಿ ನಾಟಕವನ್ನು ಪ್ರದರ್ಶಿಸಿದ ಕಲಾ ತಂಡ.! » Dynamic Leader
October 31, 2024
ರಾಜ್ಯ

ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸು ಜಾನಪದ ಹಾಗೂ ಬೀದಿ ನಾಟಕವನ್ನು ಪ್ರದರ್ಶಿಸಿದ ಕಲಾ ತಂಡ.!

ಯಾದಗಿರಿ: ನೆನ್ನೆ ಕೋಕಲ್ ಗ್ರಾಮದಲ್ಲಿ “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ 2023-24 ಸಾಲಿನ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸು ಜಾನಪದ ಹಾಗೂ ಬೀದಿ ನಾಟಕಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ದೇಶದಲ್ಲಿ ಕೆಲವು ಮತಾಂಧ ಶಕ್ತಿಗಳು, ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಬದಿಗೊತ್ತಿ, ಧರ್ಮ, ಜಾತಿ ಹಾಗೂ ಭಾಷೆಯ ವಿಚಾರಗಳನ್ನು ಮುಂದಿಟ್ಟು ಅದನ್ನು ರಾಜಕೀಯ ಗೊಳಿಸಿ, ಈ ದೇಶವನ್ನು / ರಾಜ್ಯವನ್ನು ತುಂಡಾಡುತ್ತಿರುವ ಇಂತಹ ಸಂದರ್ಭದಲ್ಲಿ, “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆ, ಗ್ರಾಮಗಳಲ್ಲಿ ಈ ರೀತಿಯ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಜಾನಪದ ಕಲೆಯನ್ನು ನಾಟಕದ ಮೂಲಕ ಪ್ರದರ್ಶಿಸಿ, ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈಯದ್ ಅಲಿ, ಆಶಾ ಕಾರ್ಯಕರ್ತರು, ಕೊಂಕಲ್ ಹಾಸ್ಟೆಲ್ ವಾರ್ಡನ್ ಲಕ್ಷ್ಮಣ, ಕಲಾ ತಂಡದ ನಾಯಕರಾದ ಶರಣು ಎಸ್ ನಾಟೇಕರ್, ಶ್ರೀಮತಿ ನಿರ್ಮಲಾ ಎಸ್ ನಾಟೇಕರ್, ಶಾಂತಯ್ಯ ಎಸ್ ಮಠಪತಿ, ಸದಾಶಿವ ನಾಟೇಕರ್, ಮರೆಪ್ಪ ಈಟೆ, ರಾಜು ಕೊಂಕಲ್, ಗಿರೀಶ್ ಚಟ್ಟೇರಕರ್ ಇನ್ನಿತರರು ಗ್ರಾಮಸ್ಥರು ಭಾಗವಹಿಸಿದ್ದರು.

Related Posts