ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ವೀಸಾಗಳನ್ನು ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿಗಳು ತವರಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಆ ರೀತಿ ದೇಶಕ್ಕೆ ಮರಳಲಿರುವ 75 ವರ್ಷದ ಟ್ಯೂಬೆಲ್ಲಾ ಮುಸ್ಕಾನ್ ಕೂಡ ಒಬ್ಬರಾಗಿದ್ದಾರೆ. ಒಂಬತ್ತು ವರ್ಷಗಳ ನಂತರ ಮುಸ್ಕಾನ್ ತನ್ನ ಸ್ನೇಹಿತರನ್ನು ನೋಡಲು ಭಾರತಕ್ಕೆ ಬಂದಿದ್ದಾರೆ. ಮುಸ್ಕಾನ್ ಅವರು 1984 ರಿಂದ ಹಲವಾರು ಬಾರಿ ಭಾರತಕ್ಕೆ ಬಂದಿರುವುದಾಗಿ ಹೇಳುತ್ತಾರೆ.
“ನನ್ನ ಸಂಬಂಧಿಕರು ನನಗಾಗಿ ಕಾಯುತ್ತಿರುವಂತೆ ನನ್ನ ಸ್ನೇಹಿತರು ಕೂಡ ಹಳ್ಳಿಯಲ್ಲಿ ನನಗಾಗಿ ಕಾಯುತ್ತಿರುತ್ತಾರೆ ಎಂದರೆ ನೀವು ನಂಬುವುದಿಲ್ಲ” ಎಂದು ಮಸ್ಕಾನ್ ಹೇಳಿದ್ದಾರೆ.
ತಮ್ಮ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ ಅವರು ಭಾರವಾದ ಹೃದಯದಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ.
“ಇದು ನನ್ನ ಅಜ್ಜ ಮತ್ತು ತಂದೆಯ ಜನ್ಮಸ್ಥಳ… ಅವರ ಸಮಾಧಿಗಳೂ ಇಲ್ಲಿವೆ” ಎಂದು ಮಸ್ಕಾನ್ ಹೇಳಿದ್ದಾರೆ.
Courtesy: BBC