ಬಾಂಗ್ಲಾದೇಶದಾದ್ಯಂತ ಕೋಪವನ್ನು ಕೆರಳಿಸುತ್ತಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆನ್ಲೈನ್ ಭಾಷಣಗಳನ್ನು ತಡೆಯುವ ಢಾಕಾದ ವಿನಂತಿಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷಿಸಿದ್ದಾರೆ ಎಂದು ಬಾಂಗ್ಲಾದೇಶದ ಮಧ್ಯಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಟೀಕಿಸಿದ್ದಾರೆ.
ಲಂಡನ್‌ನ ಚಾಥಮ್ ಹೌಸ್‌ನಲ್ಲಿ (Chatham House) ಮಾತನಾಡಿದ ಮುಹಮ್ಮದ್ ಯೂನಸ್, ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಆ ಸಮಯದಲ್ಲಿ, ಶೇಖ್ ಹಸೀನಾ ಅವರನ್ನು ಭಾರತದಲ್ಲಿಯೇ ಉಳಿಸಿಕೊಳ್ಳುವುದು ನಿಮ್ಮ ಆಯ್ಕೆ. ನಾವು ಅವರುನ್ನು ತ್ಯಜಿಸಬೇಕೆಂದು ಹೇಳುತ್ತಿಲ್ಲ. ಶೇಖ್ ಹಸೀನಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ಇದು ಸಾಮಾಜಿಕ ಮಾಧ್ಯಮ ವೇದಿಕೆ. ಇದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಬಾಂಗ್ಲಾದೇಶ ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ನ್ಯಾಯಮಂಡಳಿ ತನಿಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಅವರು ಮಾಡಿದ ಅಪರಾಧಗಳಿಗಾಗಿ ಅವರಿಗೆ ನೋಟಿಸ್ ಕಳುಹಿಸಲಾಗಿದೆ. ತನಿಖೆಯ ಸಮಯದಲ್ಲಿ ಇನ್ನೂ ಅನೇಕ ಅಪರಾಧಗಳು ಬಹಿರಂಗಗೊಳ್ಳುತ್ತವೆ. ನಾವು ಕಾನೂನು ವಿಧಾನವನ್ನು ಅನುಸರಿಸುತ್ತಿದ್ದೇವೆ.
ಅದು ಕಾನೂನುಬದ್ಧ ಮತ್ತು ಔಪಚಾರಿಕವಾಗಿರಬೇಕೆಂದು ನಾವು ಬಯಸುತ್ತೇವೆ. ಕೋಪದಲ್ಲಿ ಏನನ್ನೂ ಮಾಡಬಾರದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳ ಬಯಸುತ್ತೇವೆ. ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ. ಅವರು ನಮ್ಮ ನೆರೆಹೊರೆಯವರು. ನಾವು ಅವರೊಂದಿಗೆ ಯಾವುದೇ ಮೂಲಭೂತ ಸಮಸ್ಯೆಗಳನ್ನು ಹೊಂದಲು ಬಯಸುವುದಿಲ್ಲ.
ಆದರೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಬಾಂಗ್ಲಾದೇಶವನ್ನು ತುಂಬಾ ಆತಂಕ ಮತ್ತು ಕೋಪಕ್ಕೆ ದೂಡುತ್ತಿದೆ. ನಾವು ಈ ಕೋಪವನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಶಾಂತವಾಗಿರಲು ಪ್ರಯತ್ನಿಸಿದರೂ, ಇದ್ದಕ್ಕಿದ್ದಂತೆ ಅವರು ಏನೋ ಹೇಳುತ್ತಾರೆ, ಏನೋ ಮಾಡುತ್ತಾರೆ, ಕೋಪವು ಮತ್ತೇ ಹಿಂತಿರುಗುತ್ತದೆ. ಎಂದು ಮುಹಮ್ಮದ್ ಯೂನಸ್ ಹೇಳಿದ್ದಾರೆ.