ಭೋಪಾಲ್,
ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ. ಆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ (Jitu Patwari) ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಈ ಕುರಿತು ವರದಿಗಾರರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಜಿತು ಪಟ್ವಾರಿ, “ದೇಶದ ಇತರ ಭಾಗಗಳಿಗಿಂತ ಮಧ್ಯಪ್ರದೇಶದ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುತ್ತಾರೆ. ಇದಕ್ಕಾಗಿ ಮಧ್ಯಪ್ರದೇಶಕ್ಕೆ ಪದಕ ನೀಡಬೇಕು. ಮಧ್ಯಪ್ರದೇಶವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡುವ ಕನಸು ಕಾಣುತ್ತಿರುವ ಬಿಜೆಪಿ ಇದಕ್ಕೆ ಹೊಣೆ ಹೊರಬೇಕು.
ಬಿಜೆಪಿ ಸರ್ಕಾರ ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮಾದಕ ದ್ರವ್ಯಗಳನ್ನೂ ಬಳಸಲು ಪ್ರಾರಂಭಿಸಿದ್ದಾರೆ. ಮಧ್ಯಪ್ರದೇಶದ ಮಹಿಳೆಯರು ಮಾದಕ ದ್ರವ್ಯ ಬಳಸುವವರ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಮಾದಕವಸ್ತು ವ್ಯಾಪಾರದಲ್ಲಿ ಮಧ್ಯಪ್ರದೇಶ ಪಂಜಾಬ್‌ನಂತಹ ರಾಜ್ಯಗಳನ್ನೂ ಹಿಂದಿಕ್ಕಿದೆ” ಎಂದು ಅವರು ಹೇಳಿದ್ದಾರೆ.
ಜಿತು ಪಟ್ವಾರಿ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಖಂಡಿಸಿದ್ದಾರೆ. “ಜಿತು ಪಟ್ವಾರಿಯವರ ಹೇಳಿಕೆಯು ಮಹಿಳೆಯರ ಬಗ್ಗೆ ಕಾಂಗ್ರೆಸ್‌ನ ಸಂಕುಚಿತ ಮನೋಭಾವವನ್ನು ತೋರಿಸುತ್ತಿದ್ದು, ಕಾಂಗ್ರೆಸ್ ನಾಯಕ ಖರ್ಗೆ ಇದಕ್ಕಾಗಿ ಕ್ಷಮೆಯಾಚಿಸಬೇಕು” ಎಂದು ಮೋಹನ್ ಯಾದವ್ ಹೇಳಿದ್ದಾರೆ.