12 ಬಾರಿ ಚಾಕುವಿನಿಂದ ಇರಿದು ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಕೊಲೆ!
ದೆಹಲಿ: ದೆಹಲಿಯಲ್ಲಿ ಕಳ್ಳನೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಗೆ 12 ಬಾರಿ ಇರಿದಿರುವ ಘಟನೆ ಸಂಚಲನವನ್ನು ಮೂಡಿಸಿದೆ.
ರಾಜಸ್ಥಾನದ ಸಿಕರ್ ಪ್ರದೇಶದವರಾದ ಶಂಬು ದಯಾಳನಿಗೆ ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಈತ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಜನವರಿ 4ರಂದು ಆ ಪ್ರದೇಶದ ಕೊಳೆಗೇರಿಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ‘ಅನೀಶ್ ಎಂಬುವನು ತನ್ನ ಪತಿಯ ಫೋನನ್ನು ಕಿತ್ತುಕೊಂಡು ನಮಗೆ ಬೆದರಿಕೆ ಹಾಕಿದ್ದಾನೆ’ ಎಂದು ದೂರ ನೀಡಿದ್ದರು.
ದೂರನ್ನು ಸ್ವೀಕರಿಸಿದ ಪೊಲೀಸ್ ಅಧಿಕಾರಿ, ಕಾನ್ ಸ್ಟೇಬಲ್ ಶಂಬು ದಯಾಳ್ ಅವರನ್ನು ದುರುದಾರ ಮಹಿಳೆಯೊಂದಿಗೆ ಕಳುಹಿಸಿ ಅನೀಶನನ್ನು ಬಂಧಿಸುವಂತೆ ಸೂಚಿಸಿದ್ದರು. ಸಂತ್ರಸ್ತೆಯ ಜೊತೆಗಿದ್ದ ಶಂಬು ದಯಾಳ್ ಸ್ಥಳಕ್ಕೆ ಆಗಮಿಸಿದ್ದು, ಮಹಿಳೆ ಅನೀಶನನ್ನು ಗುರುತಿಸಿದ್ದಾಳೆ. ಪೊಲೀಸ್ ಪೇದೆ ಅನೀಶ್‌ನನ್ನು ಹಿಡಿದು ಬೆದರಿಸಿ ಕದ್ದ ಫೋನನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಆತನನ್ನು ಬಂಧಿಸಿ ಪಶ್ಚಿಮ ದೆಹಲಿಯ ಮಾಯಾಪುರಿ ಮಾರುಕಟ್ಟೆಯ ಮೂಲಕ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಆಗ ಕಳ್ಳ ಅನೀಶ್ ತನ್ನ ಶರ್ಟ್ ನಲ್ಲಿ ಬಚ್ಚಿಟ್ಟಿದ್ದ ಚಾಕುವನ್ನು ತೆಗೆದು ಶಂಬು ದಯಾಳ್ ಗೆ ಇರಿಯಲು ಆರಂಭಿಸಿದ್ದಾನೆ. ಅಲ್ಲಿ ನೆರೆದಿದ್ದ ಜನರ ಮಧ್ಯೆಯೇ ಅನೀಶ್ 12 ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಕಾನ್‌ಸ್ಟೆಬಲ್‌ಗೆ ಎದೆ ಮತ್ತು ಹೊಟ್ಟೆಯಲ್ಲಿ ಗಂಭೀರ ಗಾಯಗಳಾಗಿವೆ.
ಈ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಪೊಲೀಸ್ ಅನೀಶನನ್ನು ಹಿಡಿದು ಬಂಧಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದ ಶಂಬು ದಯಾಳ್ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಭಾನುವಾರ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಕಾನ್ ಸ್ಟೇಬಲ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.