ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಬಿಬಿಸಿ! ಕೇಂದ್ರ ಸರ್ಕಾರ ನಿಷೇಧ-ಹಿನ್ನೆಲೆ ಏನು?! » Dynamic Leader
October 22, 2024
ದೇಶ ರಾಜಕೀಯ

ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಬಿಬಿಸಿ! ಕೇಂದ್ರ ಸರ್ಕಾರ ನಿಷೇಧ-ಹಿನ್ನೆಲೆ ಏನು?!

ಡಿ.ಸಿ.ಪ್ರಕಾಶ್, ಸಂಪಾದಕರು

ಇಂಗ್ಲೆಂಡಿನ ಪ್ರಸಿದ್ಧ ಖಾಸಗಿ ಮಾಧ್ಯಮ ಸಂಸ್ಥೆಯಾದ ಬಿಬಿಸಿ, ಭಾರತದಲ್ಲಿ 2002ರ ಗುಜರಾತ್ ಗಲಭೆಗಳ ಕುರಿತು ರಹಸ್ಯ ತನಿಖೆ ನಡೆಸಿ, ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಗಲಭೆಗೆ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಕೂಡ ಕಾರಣ ಎಂಬ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ‘ಭಾರತ-ಮೋದಿ ಪ್ರಶ್ನೆಗಳು’ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಈ ಸಾಕ್ಷ್ಯಚಿತ್ರಕ್ಕೆ ವಿವಿಧೆಡೆಯಿಂದ ಬೆಂಬಲ-ವಿರೋಧ ವ್ಯಕ್ತವಾಗಿತ್ತು. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಭಾರದಲ್ಲಿ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿರುತ್ತದೆ.

ಫೆಬ್ರವರಿ 27, 2002 ರಂದು ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಜನರು ಪ್ರಾಣ ಕಳೆದುಕೊಂಡರು. ಇದನ್ನು ಆಧರಿಸಿ ಗುಜರಾತ್ ನಲ್ಲಿ ಗಲಭೆಗಳು ನಡೆದವು. ಈ ಗಲಭೆಯ ಸಂದರ್ಭದಲ್ಲಿ 790 ಮುಸ್ಲಿಮರು, 254 ಹಿಂದೂಗಳು ಕೊಲ್ಲಲ್ಪಟ್ಟಿರುವುದಾಗಿ ಮತ್ತು 223 ಮಂದಿ ನಾಪತ್ತೆಯಾಗಿದ್ದು, 2500 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು 2005ರಲ್ಲಿ ಸಂಸತ್ತಿನಲ್ಲಿ ಹೇಳಿದ್ದನ್ನೇ ಬಿಬಿಸಿ ತನ್ನ ಸಾಕ್ಷ್ಯಚಿತ್ರದಲ್ಲೂ ಹೇಳಿಕೊಂಡಿದೆ.

2001-2006ರಲ್ಲಿ ಬ್ರಿಟನ್‌ನ ವಿದೇಶಾಂಗ ಸಚಿವರಾಗಿದ್ದ ಜಯಿಕಾ ಸ್ಟ್ರಾ ಅಂದು ಗಲಭೆಯ ಬಗ್ಗೆ ಮಾತನಾಡಿರುವುದು ಕೂಡ ಈ ಸಾಕ್ಷ್ಯಚಿತ್ರದಲ್ಲಿದೆ. ಅಲ್ಲದೆ ಮೋದಿಯವರು ಬಿಬಿಸಿ ದೂರದರ್ಶನಕ್ಕೆ ನೀಡಿದ್ದ ಸಂದರ್ಶನವನ್ನೂ ಇದರೊಂದಿಗೆ ಲಗತ್ತಿಸಲಾಗಿದೆ.

ಈ ಸಾಕ್ಷ್ಯಚಿತ್ರ ಬಿಡುಗಡೆಯಾದ ನಂತರ ಈ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ‘ಸಾಕ್ಷ್ಯಚಿತ್ರವನ್ನು ಭಾರತ ವಿರೋಧಿ ಪ್ರಚಾರಕ್ಕಾಗಿ ತಯಾರಿಸಲ್ಪಟ್ಟಿದೆ. ಇದು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಕಂಪನಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಟೀಕಿಸಿದ್ದರು. ಇದರ ನಂತರ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಬಿಸಿಯಾದವು. ನಿರ್ದಿಷ್ಟವಾಗಿ ಹೇಳುವುದಾದರೆ, Who is BBC? ಹ್ಯಾಶ್‌ಟ್ಯಾಗ್ ಟ್ರೆಂಡ್ ಆಯಿತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಾಹಿತಿ ತಂತ್ರಜ್ಞಾನ ನಿಯಮಗಳ (2021) ಅಡಿಯಲ್ಲಿ ಕೆಲವು ಒತ್ತಾಯಗಳನ್ನು ಮುಂದಿಟ್ಟರು. ಈ ಕುರಿತು ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳು ‘BBC ಸಾಕ್ಷ್ಯ ಚಿತ್ರವನ್ನು ಪರಿಶೀಲಿಸಿದಾಗ, ಇದು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಕಳಂಕಗೊಳಿಸುತ್ತದೆ ಮತ್ತು ಭಾರತದಲ್ಲಿನ ವಿವಿಧ ಸಮುದಾಯಗಳ ನಡುವೆ ವಿಭಜನೆಯನ್ನು ಉಂಟುಮಾಡುವ ರೀತಿಯಲ್ಲಿದೆ. ಹಾಗಾಗಿ ಭಾರತದ ಸಮಗ್ರತೆಗೆ ಧಕ್ಕೆ ತರುವ ಇದನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಹೀಗಾಗಿ, ಪ್ರಸಾರ ಸಚಿವಾಲಯವು ವೀಡಿಯೊ ಕಾಣಿಸಿಕೊಂಡಿರುವ ಟ್ವಿಟರ್ ಮತ್ತು ಯೂಟ್ಯೂಬ್ ಖಾತೆಗಳಿಂದ ಸಾಕ್ಷ್ಯ ಚಿತ್ರವನ್ನು ತೆಗೆದುಹಾಕಲು ವಿನಂತಿಸಿ ಕೊಂಡಿತ್ತು. ಸಂಬಂಧಪಟ್ಟ ಕಂಪನಿಗಳು ಅದನ್ನು ಒಪ್ಪಿಕೊಂಡು ತೆಗೆದುಹಾಕಿವೆ ಎಂದು ವರದಿಯಾಗಿದೆ.

ಗೋಧ್ರ ಗಲೆಭೆಯ ಸಂಧರ್ಭದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ

ಸಾಕ್ಷ್ಯಚಿತ್ರದ ಎರಡನೇ ಭಾಗವು ಈ ವಾರ ಬಿಡುಗಡೆಯಾಗಲಿದ್ದು, ಭಾರತ ಸರ್ಕಾರವು ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಅದೇ ಸಂದರ್ಭದಲ್ಲಿ, ‘ವ್ಯಾಪಕ ಸಂಶೋಧನೆಯ ನಂತರವೇ ಸಾಕ್ಷ್ಯಚಿತ್ರವನ್ನು ಮಾಡಲಾಯಿತು’ ಎಂದು ಬಿಬಿಸಿ ವಿವರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಶಶಿಕಾಂತ್ ಸೆಂಥಿಲ್, ‘ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದಲ್ಲಿ ಹೊಸದೇನೂ ಇಲ್ಲ. ಅದು ಈಗಾಗಲೇ ಪ್ರಕಟವಾಗಿರುವ ಹಳೆಯ ಮಾಹಿತಿಯೇ ಆಗಿದೆ. ಈ ಗಲಭೆಗೆ ಮೋದಿಯೇ ಕಾರಣ ಎಂದು ಈ ಹಿಂದೆಯೂ ಹಲವರು ಮಾತನಾಡಿದ್ದಾರೆ. ಆದರೆ, ಅವರಲ್ಲಿ ಯಾರೂ ಈಗ ಜೀವಂತವಾಗಿಲ್ಲ. ಜೀವಂತವಾಗಿದ್ದಿದ್ದರೆ ಅವರೆಲ್ಲರು ಇಂದು ಜೈಲು ಪಾಲಾಗುತ್ತಿದ್ದರು. ಪ್ರಸ್ತುತ ಈ ಸಾಕ್ಷ್ಯಚಿತ್ರವನ್ನು ಯುಕೆ ಮೂಲದ ಬಿಬಿಸಿ ತನಿಖೆ ಮಾಡಿ, ಕ್ಷೇತ್ರ ಅಧ್ಯಯನ ನಡೆಸಿ, ಸಿದ್ಧಪಡಿಸಿದ ಸಂಶೋಧನಾ ಪ್ರಬಂಧವಾಗಿರುತ್ತದೆ. ಇದು ನಿಜವೆಂದು ಎಲ್ಲರಿಗೂ ತಿಳಿದಿದ್ದೆ. ಅವರು ಅದನ್ನು ವರದಿಯ ರೂಪದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ ಇದು ನರಮೇಧದ ಸಾಕ್ಷಿಯಾಗಿದೆ. ಶ್ರೀಲಂಕಾ ತಮಿಳರನ್ನು ಕೊಂದ ರಾಜಪಕ್ಸೆಯ ಬಗ್ಗೆ ನಾವು ಯೋಚಿಸುತ್ತಿದ್ದಂತೆ, ಈ ನರಮೇಧವೂ ಹೌದು. ಹಾಗಾಗಿ ಅವರು ತೋರಿಸಿದ್ದರಲ್ಲಿ ತಪ್ಪೇನೂ ಇಲ್ಲ. ಈ ಗಲಭೆಗಳು ನಡೆದು 20 ವರ್ಷಗಳಾದರೂ ಇದಕ್ಕೆ ಕಾರಣರಾದ ನರೇಂದ್ರ ಮೋದಿಯವರು ಒಮ್ಮೆಯೂ ವಿಷಾದ ವ್ಯಕ್ತಪಡಿಸಿಲ್ಲ ಎಂಬುದು ಐತಿಹಾಸಿಕ ಸತ್ಯ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ’ ಎಂದರು.

ರಾಜಪಕ್ಷ ಸಹೋದರರು

ಅವರು ಮುಂದುವರಿದು, ಗುಜರಾತ್ ಗಲಭೆ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಂಗ್ಲಿಷ್ ನಿರೂಪಕರು ಕೇಳಿದ ಪ್ರಶ್ನೆಗೆ, ‘ಮಾನವ ಹಕ್ಕುಗಳ ಬಗ್ಗೆ ನೀವು ಕಲಿಸುವ ಅಗತ್ಯವಿಲ್ಲ’ ಎಂದು ಮೋದಿ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬ್ರಿಟಿಷ್ ಇಂಡಿಯಾದ ದಬ್ಬಾಳಿಕೆಯ ಹಿನ್ನೆಲೆ ಮತ್ತು ಕಂಪನಿಯ ಬಗ್ಗೆ ಮಾತನಾಡುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ವಾದದ ಸುಳ್ಳು (Argumentative Fallacies) ಈ ಅಪರಾಧ ಏಕೆ ನಡೆಯಿತು ಎಂದು ಕೇಳಿದರೆ ಅದಕ್ಕೆ ಉತ್ತರ ಹೇಳಬೇಕು. ಅದರಿಂದ ತಪ್ಪಿಸಿಕೊಳ್ಳಲು ಇನ್ನೊಂದು ಅಪರಾಧದ ಬಗ್ಗೆ ಮಾತನಾಡಬಾರದು.

ಆದರೆ, ಬಹುತೇಕ ಬಿಜೆಪಿ ಸದಸ್ಯರು ಈ ರೀತಿಯ ವಾದವನ್ನೆ ಅನುಸರಿಸುತ್ತಿದ್ದಾರೆ. 3000 ಜೀವಗಳ ಮೇಲೆ ಚೆಲ್ಲಾಟವಾಡಿ, ಅವರನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿದಕ್ಕಾಗಿ ಪಶ್ಚಾತ್ತಾಪ ಪಡುವುದು ಮಾನವನ ಸಹಜ ಗುಣ. ಈ ಗಲಭೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಬಹು ಪಶ್ಚಾತ್ತಾಪಗಳು ಇದ್ದಿರಬೇಕು. ಆದರೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸದ ವ್ಯಕ್ತಿಯನ್ನು, ಈ ಘಟನೆಗೆ ಅವರು ಹೊಣೆಯಲ್ಲ ಎಂದು ಹೇಳುವುದು ಎಷ್ಟು ಸರಿ’ ಎಂದು ಕೇಳುತ್ತಾರೆ.

Related Posts