ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದು ಏಕೆ? ಅಲ್ಲಿ ನಡೆದಿದ್ದು ಏನು? ಫುಲ್ ಡೀಟೇಲ್ಸ್ ಇಲ್ಲಿದೆ!
ಡಿ.ಸಿ.ಪ್ರಕಾಶ್, ಸಂಪಾದಕರು
‘ತಮಿಳುನಾಡಿನ ಕೊಡೈಕಾನಲ್ ಪ್ರದೇಶದಲ್ಲಿ ಬೆಳೆಯುವ ಒಂದು ರೀತಿಯ ಮಾದಕ ಅಣಬೆಯೆ ಇದಕ್ಕೆ ಕಾರಣ’ ಎಂದು ಅಲ್ಲಿನ ಬಿಜೆಪಿಯವರು ಹೇಳುತ್ತಿರುವುದು ಆಶ್ಚರ್ಯವಾಗಿದೆ!
ತಮಿಳುನಾಡಿನ ಬಿಜೆಪಿ ಪಕ್ಷಕ್ಕೆ ಸೇರಿದವನು ಸೆಲ್ವಕುಮಾರ್. ಕರೂರು ಜಿಲ್ಲೆಯ ಇಲುಪ್ಪೂರು ಪ್ರದೇಶಕ್ಕೆ ಸೇರಿದ ಶಕ್ತಿ ಎಂಬ ಡ್ರಗ್ ಪೆಡ್ಲರ್ ಇವನ ಸಂಬಂಧಿ. ತಮಿಳುನಾಡು ಪೊಲೀಸರು ಡ್ರಗ್ಸ್ ಜಾಲವೊಂದನ್ನು ಪತ್ತೆಹಚ್ಚಿದಾಗ, ಅವರ ಸೆಲ್ ಫೋನ್ ನಂಬರ್ ಬಳಸಿ ಶಕ್ತಿಯನ್ನು ಬಂಧಿಸಿದ್ದರು. ಈ ಶಕ್ತಿ ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಕೊಕೇನ್ ಮತ್ತು ಹೆರಾಯಿನ್‌ನಂತಹ ಮಾದಕವಸ್ತುಗಳನ್ನು ಪೂರೈಸುವ ಡ್ರಗ್ ಗ್ಯಾಂಗ್‌ನ ಒಂದು ಭಾಗ. ಡ್ರಗ್ ಪೆಡ್ಲರ್ ಶಕ್ತಿಯ ಸೋದರ ಸಂಬಂಧಿ ಸೆಲ್ವಕುಮಾರ್ ಬಿಜೆಪಿಯ ಅನುಯಾಯಿ. ಸೋಶಿಯಲ್ ಮೀಡಿಯಾದಲ್ಲಿ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಖ್ಯಾತಿಯನ್ನು ಬಿತ್ತರಿಸುವುದೇ ಇವನ ದಿನನಿತ್ಯದ ಕಾಯಕ. ಶಕ್ತಿ ಬಂಧನಕ್ಕೊಳಗಾದ ನಂತರ ಪೊಲೀಸರು ತನ್ನ ಕಡೆಗೂ ಬರಬಹುದು ಎಂದು ಅನುಮಾನಿಸಿದ ಸೆಲ್ವಕುಮಾರ್ ಅಣ್ಣಾಮಲೈ ಬಳಿ ಶರಣಾಗುತ್ತಾನೆ. ಸೆಲ್ವಕುಮಾರನನ್ನು ಪಕ್ಷಕ್ಕೆ ಸೇರಿಸಿಕೊಂಡ ಅಣ್ಣಾಮಲೈ, ಕೂಡಲೇ ಪಕ್ಷದಲ್ಲಿ ಜವಾಬ್ದಾರಿಯನ್ನೂ ನೀಡುತ್ತಾರೆ. ಅಮರ್ ಪ್ರಸಾದ್ ರೆಡ್ಡಿ, ತಿರುಚ್ಚಿ ಸೂರ್ಯ, ಸೆಲ್ವಕುಮಾರ್ ಮತ್ತು ಅಲಿಶಾ ಅವರನ್ನೊಳಗೊಂಡ ಅಣ್ಣಾಮಲೈ ತಂಡದಲ್ಲಿ ಸೆಲ್ವಕುಮಾರ್ ಪ್ರಮುಖ ಭಾಗವಾಗುತ್ತಾನೆ. ಈ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಸೆಲ್ವಕುಮಾರ್ ಪೊಲೀಸ್ ಕಾರ್ಯಾಚರಣೆಯಿಂದ ಪಾರಾಗುತ್ತಾನೆ.
‘ಅಣ್ಣಾಮಲೈ ಸದಾ ಸೈಕೋ ತರಹ ವರ್ತಿಸುತ್ತಾನೆ. ಇದ್ದಕ್ಕಿದ್ದಂತೆ ನಾನು ಚಾಣಕ್ಯ ಎಂದು ಕೂಗುತ್ತಾನೆ. ಮುಂದಿನ ನಿಮಿಷ ಮೇಜಿನ ಮೇಲೆ ತಲೆಯಿಟ್ಟು ಮಲಗಿಕೊಳ್ಳುತ್ತಾನೆ. ಆತನು ಪ್ರತಿದಿನ ಸಾಕಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾನೆ. ಆತನಿಗೆ ಮಾನಸಿಕ ಖಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂಬ ಸುದ್ದಿ ಬಿಜೆಪಿ ಕಾರ್ಯಕರ್ತರಲ್ಲಿ ಹಬ್ಬಿತ್ತು. ‘ಅವನಿಗೆ ಯಾವುದೇ ಮಾನಸಿಕ ಕಾಯಿಲೆಗಳು ಇಲ್ಲ. ಯಹೂದಿಗಳು ದೇಶವನ್ನು ಆಳಬೇಕಾದರೆ ಅವರು ಮತಾಂಧರಾಗಿರಬೇಕು ಎಂಬುದಕ್ಕಾಗಿ ಅವರು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಹಾಗಾಗಿ ಕೊಡೈಕಾನಲ್ ಪ್ರದೇಶದಿಂದ ನೈಸರ್ಗಿಕವಾಗಿ ಬೆಳೆಯುವ ಅಣಬೆ ಮಾದರಿಯ ಮಾದಕ ವಸ್ತುವನ್ನು ಖರೀದಿಸಿ ಅಣ್ಣಾಮಲೈ ಸೇವಿಸುತ್ತಿದ್ದಾನೆ’ ಎಂದು ಅಮರ್ ಪ್ರಸಾದ್ ರೆಡ್ಡಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾನೆ ಎಂದು ಬಿಜೆಪಿ ವಲಯದಲ್ಲಿ ಗುಸುಗುಸು ಇದೆ.
ಅಣ್ಣಾಮಲೈ ಹಾಗೂ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಡಿಸೆಂಬರ್ 10 ರಂದು ವಿಮಾನದ ತುರ್ತು ಬಾಗಿಲು ತೆರೆಯುವ ಹಿಂದಿನ ದಿನ, ಪೂರ್ವ ಕರಾವಳಿ (ECR) ರಸ್ತೆಯಲ್ಲಿರುವ ಜನಪ್ರಿಯ ಐಷಾರಾಮಿ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. 10ರಂದು ತಿರುಚ್ಚಿಯಲ್ಲಿ ನಡೆಯುವ ಬಿ.ಜೆ.ಪಿ. ಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತೇಜಸ್ವಿ ಸೂರ್ಯ ಬೆಂಗಳೂರಿನಿಂದ ಬಂದಿದ್ದನು.
‘ಆ ರಾತ್ರಿ ತೇಜಸ್ವಿ ಸೂರ್ಯನೊಂದಿಗೆ ಅಣ್ಣಾಮಲೈ ಜೊತೆಗೂಡಿ ಮದ್ಯಪಾನ, ಡ್ಯಾನ್ಸು, ಡ್ರಗ್ಸು ಎಂದು ಇಬ್ಬರೂ ಸಂಭ್ರಮಿಸಿದ್ದರು. ತೇಜಸ್ವಿ ಸೂರ್ಯ ಮಹಿಳೆಯೊಬ್ಬರ ಜೊತೆಯಿರುವ ಖಾಸಗಿ ವಿಡಿಯೋವೊಂದನ್ನು ಅಣ್ಣಾಮಲೈ ತಮ್ಮ ಹನಿ ಟ್ರ್ಯಾಪ್ ಶೈಲಿಯಲ್ಲಿ ಚಿತ್ರೀಕರಿಸಿದ್ದಾನೆ’ ಎಂಬ ಸುದ್ಧಿಗಳು ಅಲ್ಲಿನ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ.
ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕರ್ನಾಟಕದ ಶೃಂಗೇರಿ ಶಂಕರ ಮಠದ ಬೆಂಬಲಿಗರಾಗಿದ್ದಾರೆ. ಬಿಜೆಪಿಯನ್ನು ನಿಯಂತ್ರಿಸಲು ಆರ್‌ಎಸ್‌ಎಸ್ ನಿಯೋಜಿಸಿದ ವ್ಯಕ್ತಿಯೇ ಬಿ.ಎಲ್.ಸಂತೋಷ್. ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೂ ಆಗಿದ್ದಾರೆ. ಇವರು ಶೃಂಗೇರಿ ಶಂಕರ ಮಠದ ಪ್ರಮುಖರಲ್ಲಿ ಒಬ್ಬರು. ತೇಜಸ್ವಿ ಸೂರ್ಯನನ್ನು ಸಂಸದನಾಗಿ ಮಾಡಿದವರು ಇದೇ ಬಿ.ಎಲ್.ಸಂತೋಷ್.
ಸೂರ್ಯನ ಅಮಲಿನ ಮಾತು ಕರ್ನಾಟಕದಲ್ಲಿ ಜನಪ್ರಿಯ. ಈತನ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಬೆಂಗಳೂರು ನಗರವು ಮಳೆಯ ಅಬ್ಬರಕ್ಕೆ ತತ್ತರಸಿ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನಗರದ ಹೋಟೆಲ್ ಒಂದರಲ್ಲಿ ನಿಂತು ‘ನಾನು ಖುಷಿಯಿಂದ ಮಸಾಲೆ ದೋಸೆ ತಿನ್ನುತ್ತಿದ್ದೇನೆ’ ಎಂದು ವಿಡಿಯೋ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಅವಹೇಳನಕ್ಕೆ ಒಳಗಾದವನು ಈ ತೇಜಸ್ವಿ ಸೂರ್ಯ. ಕೋವಿಡ್ ಸಮಯದಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಬೇಟಿ ನೀಡಿ, ‘ಹಿಂದೂ ರೋಗಿಗಳನ್ನು ಮುಸ್ಲಿಂ ಸಿಬ್ಬಂದಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ’ ಎಂಬ ಸುಳ್ಳು ನಾಟಕವಾಡಿ ಜನರಿಂದ ಉಗಿಸಿಕೊಂಡಿದ್ದನ್ನು ಯಾರೂ ಇನ್ನೂ ಮರೆತಿಲ್ಲ.
ಇದೇ ತೇಜಸ್ವಿ ಸೂರ್ಯ ಅರಬ್ ಮಹಿಳೆಯರನ್ನು ಅವಹೇಳನ ಮಾಡಿ ‘ಕಳೆದ ಕೆಲವು ಶತಮಾನಗಳಿಂದ 95% ಅರಬ್ ಮಹಿಳೆಯರು ಪರಾಕಾಷ್ಠೆಯನ್ನು (Orgasm) ತಲುಪಲಿಲ್ಲ’ ಎಂದು ಬರೆದ ಟ್ವೀಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಮದ್ಯೆ ಭಾರತವು ತಲೆ ತಗ್ಗಿಸುವಂತೆ ಮಾಡಿತು.
ಬಿ.ಎಲ್.ಸಂತೋಷ್ ಮುಖಾಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಡಿಸಂಬರ್ 10ರಂದು ಮದ್ಯದ ಅಮಲಿನಲ್ಲಿ ತಿರುಚ್ಚಿಗೆ ವಿಮಾನ ಹತ್ತಿದರು. ಇವರ ಜೊತೆ ನಾಲ್ವರು ಬಿಜೆಪಿ ಸದಸ್ಯರು ಇದ್ದರು ಎಂದು ಈ ಹಿಂದೆ ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್, ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್ 2019ರಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದಲ್ಲಿ ಸೇರ್ಪಡೆಯಾದರು. ಅರಸುಕುಮಾರ್ ಕೂಡ ಇದೇ ವಿಮಾನದಲ್ಲಿ ಅಂದು ಪ್ರಯಾಣ ಮಾಡಿರುತ್ತಾರೆ. ಇವರು ಈ ಘಟನೆಯನ್ನು ಹತ್ತಿರದಿಂದ ನೋಡಿದ ಪ್ರತ್ಯಕ್ಷದರ್ಶಿಯೂ ಆಗಿದ್ದಾರೆ.
‘ಬೆಳಿಗ್ಗೆ ಹತ್ತು ಗಂಟೆಯ ಸಮಯಕ್ಕೆ ತಿರುಚ್ಚಿಗೆ ಹೊರಡಲಿರುವ ಆ ಪುಟ್ಟ ವಿಮಾನದಲ್ಲಿ ಒಟ್ಟು 76 ಪ್ರಯಾಣಿಕರು ಕುಳಿತುಕೊಳ್ಳಬಹುದು. ನಾನು ತಡವಾಗಿಯೇ ಆ ವಿಮಾನದೊಳಗೆ ಪ್ರವೇಶ ಮಾಡಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲ ಬಳಿ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕುಳಿತಿದ್ದರು. ಪ್ರಯಾಣಿಕರು ಯಾವುದೇ ಅಪಘಾತ ಸಂಭವಿಸಿದಾಗ ತುರ್ತು ಬಾಗಿಲು ತೆರೆಯುವುದು ಹೇಗೆ ಎಂದು ಪ್ರಯಾಣಿಕರಿಗೆ ವಿವರಿಸಿಕೊಂಡಿದ್ದ ಗಗನಸಖಿಯರು ಹಿಂದಿನ ಬಾಗಿಲುಗಳನ್ನು ಮುಚ್ಚಿ ಪಕ್ಕಕ್ಕೆ ನಡೆದರು.
ಪ್ರಯಾಣಿಕರ ಆಗಮನವು ಮುಗಿಯುತ್ತಿದ್ದಂತೆ, ವಿಮಾನ ಚಲಿಸಲು ಜೋರಾಗಿ ಎಂಜಿನ್ ಆನ್ ಮಾಡಲಾಯಿತು. ವಿಮಾನ ಟೇಕ್ ಆಫ್ ಆಗುತ್ತಿದೆ ಎಂದು ನಾವು ಭಾವಿಸುತ್ತಿದ್ದಂತೆ, ವಿಮಾನ ಸಿಬ್ಬಂದಿಗಳು (ಕಾಕ್‌ಪಿಟ್ ಕಡೆಗೆ) ಪೈಲಟ್ ಕೋಣೆಯ ಕಡೆಗೆ ಓದಿದರು. ಅದೇ ವೇಳೆಯಲ್ಲಿ ಪೊಲೀಸರೂ ಏಕಾಏಕಿ ವಿಮಾನವನ್ನು ಪ್ರವೇಶಿಸಿದರು.
‘ವಿಮಾನದಲ್ಲಿ ದೊಡ್ಡ ಸೋರಿಕೆಯಾಗಿದೆ ಎಂದು ಪೈಲಟ್ ನ ಕಂಪ್ಯೂಟರ್ ತಿಳಿಸುತ್ತಿದೆ. ಆದ್ದರಿಂದ ಈ ವಿಮಾನವನ್ನು ಚಲಾಯಿಸಲು ಸಾಧ್ಯವಿಲ್ಲ. ಆ ಸೋರಿಕೆಯನ್ನು ಸರಿಪಡಿಸಲಾಗುತ್ತದೆಯೇ? ಅಥವಾ ಪ್ರಯಾಣಿಕರನ್ನು ಬೇರೆ ವಿಮಾನಕ್ಕೆ ಸ್ಥಳಾಂತರಿಸಲಾಗುತ್ತದೆಯೇ? ಇದನ್ನು ಇಂಡಿಗೋ ಏರ್‌ಲೈನ್ಸ್ ನಿರ್ಧರಿಸುತ್ತದೆ’ ಎಂದು ಗಗನಸಖಿಯರು ಘೋಷಣೆ ಮಾಡಿದರು.
ವಿಮಾನದೊಳಗೆ ಬಂದಿದ್ದ ಪೊಲೀಸರು ಅಣ್ಣಾಮಲೈ, ತೇಜಸ್ವಿ ಸೂರ್ಯ ಹಾಗೂ ಅವರೊಂದಿಗಿದ್ದ ಬಿಜೆಪಿಯವರನ್ನು ಪ್ರತ್ಯೇಕವಾದ ಒಂದು ಬಸ್ಸಿನಲ್ಲಿ ಹತ್ತಿಸಿ ವಿಮಾನ ನಿಲ್ದಾಣದೊಳಗೆ ಕರೆದೊಯ್ದರು. ನಾನೂ ಸೇರಿದಂತೆ ಇತರ ಪ್ರಯಾಣಿಕರನ್ನು ಬೇರೆಯ ಬಸ್ಸಿನೊಳಗೆ ಕೂರಿಸಿ, ನಮಗೆ ಸ್ನಾಕ್ಸ್ ಮತ್ತು ಕೂಲ್ ಡ್ರಿಂಕ್ಸ್ ಕೊಟ್ಟರು. ಅಷ್ಟರೊಳಗೆ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಇಬ್ಬರು ಸೇರಿಕೊಂಡು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು (Emergency Exit) ತೆರೆದಿದ್ದ ಕಾರಣ, ವಿಮಾನದೊಳಗೆ ದೊಡ್ಡ ಸೋರಿಕೆ ಉಂಟಾಯಿತು ಎಂಬುದನ್ನು ಪೈಲಟ್ ಪತ್ತೆ ಮಾಡಿದ್ದರು. ಪೈಲಟ್ ಅದನ್ನು ಕಂಡುಹಿಡಿದಿರದಿದ್ದರೆ ನೇಪಾಳ ದೇಶದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 76 ಜನರು ಅಪಘಾತದಲ್ಲಿ ಸತ್ತಂತೆ ನಾವು ಕೂಡ ಸತ್ತಿರಬೇಕು. ಪೈಲೆಟ್ ಸಾಮಾರ್ಥ್ಯದಿಂದ ಅಣ್ಣಾಮಲೈ ಮತ್ತು ಇತರರು ಮಾಡಿದ ಕೆಲಸ ಪತ್ತೆ ಮಾಡಲಾಯಿತು.
ಅಗ್ನಿಶಾಮಕ ವಾಹನಗಳು ಸೇರಿದಂತೆ ಎಲ್ಲಾ ತುರ್ತು ವಾಹನಗಳು ವಿಮಾನದ ಸುತ್ತಲೂ ನಿಂತಿದ್ದವು. ಫ್ಲೈಟ್ ಎಂಜಿನಿಯರ್‌ಗಳು ವಿಮಾನವನ್ನು ಇಂಚಿಂಚಾಗಿ ಪರೀಕ್ಷಿಸಿದರು. ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ವಿಮಾನದ ತುರ್ತು ಬಾಗಿಲನ್ನು ಏಕೆ ತೆರೆದರು? ಅವರು ಭಯೋತ್ಪಾದಕರೇ? ಎಂದೆಲ್ಲ ಅವರನ್ನು ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಲಾಯಿತು. ಆ ನಂತರ ಅವರ ಆಸನಗಳನ್ನು ಬದಲಾಯಿಸಿ ಬೇರೆಕಡೆ ಕೂರಿಸಲಾಯಿತು. ಹತ್ತು ಗಂಟೆಗೆ ಹೊರಡಬೇಕಿದ್ದ ವಿಮಾನ ಒಂದೂವರೆ ಗಂಟೆ ತಡವಾಗಿ ಹನ್ನೊಂದು ಮೂವತ್ತಕ್ಕೆ ಟೇಕ್ ಆಫ್ ಆಯಿತು’ ಎಂದು ಅಲ್ಲಿ ನಡೆದ ಘಟನೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ ಅರಸುಕುಮಾರ್.
ಇದರ ಬಗ್ಗೆ ಇಂಡಿಗೋ ಸಂಸ್ಥೆಯು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿತ್ತು. ದೂರಿನ ಆಧಾರದ ಮೇಲೆ, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತನಿಖೆ ನಡೆಸಿ, ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಇಬ್ಬರಿಂದಲೂ ಕ್ಷಮಾಪಣೆ ಪತ್ರ ಬರೆದು ಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶದ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.
ತಮಿಳುನಾಡು ಮತ್ತು ಕರ್ನಾಟಕದ ಬಿ.ಜೆ.ಪಿ. ನಾಯಕರು ಮದ್ಯದ ಅಮಲಿನಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದನ್ನು ಕೇಂದ್ರ ಸರ್ಕಾರ ಮರೆತ್ತಿದ್ದರೂ ಇಂಡಿಗೋ ವಿಮಾನ ಸಂಸ್ಥೆ ನೀಡಿದ ದೂರಿನ ಮೇರೆಗೆ ಒಂದು ತಿಂಗಳ ನಂತರ ಪ್ರಕರಣ ವಿಚಾರಣೆಗೆ ಬಂದಿತ್ತು. ‘ಇಂತಹ ಒಂದು ಘಟನೆ ನಡೆದಿದ್ದು ನಿಜ; ಅದನ್ನು ನಾವು ವಿಚಾರಣೆ ಮಾಡುತ್ತಿದ್ದೇವೆ’ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಬೇಕಾದ ಅನಿವಾರ್ಯತೆ ಇವರಿಂದ ಎದುರಾಯಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧ್ಯ, ‘ವಿಮಾನದ ತುರ್ತು ಬಾಗಿಲನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಕಳಚಿದ್ದನ್ನು ಒಪ್ಪಿಕೊಂಡಿದ್ದು ಅಲ್ಲದೆ, ಈಗಾಗಲೇ ಅವರು ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಹೇಳಿ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದರು.