ನಮ್ಮ ಕುಟುಂಬ ಎಂದಿಗೂ ಶರಣಾಗುವುದಿಲ್ಲ; ನೀವು ಇಷ್ಟಪಡುವದನ್ನು ಮಾಡಿ! ಮೋದಿಗೆ ಪ್ರಿಯಾಂಕಾ ಗಾಂಧಿ ಸವಾಲು
ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ‘ಟ್ವಿಟರ್’ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ನರೇಂದ್ರ ಮೋದಿ, ನಿಮ್ಮ ಅಭಿಮಾನಿಗಳು ದಿವಂಗತ ಪ್ರಧಾನಿ ಅವರ ಪುತ್ರನನ್ನು (ರಾಹುಲ್ ಗಾಂಧಿ) ‘ಮೀರ್ ಜಾಫರ್’ ಎಂದು ಕರೆಯುತ್ತಾರೆ. ನಿಮ್ಮ ಮುಖ್ಯಮಂತ್ರಿಗಳಲ್ಲಿ ಒಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು? ಎಂದು ಕೇಳುತ್ತಾರೆ. ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಜೈಲು ಶಿಕ್ಷೆ ನೀಡಿಲ್ಲ. ಅನರ್ಹಗೊಳಿಸಿಲ್ಲ. ರಾಹುಲ್ ಗಾಂಧಿ ನಿಜವಾದ ದೇಶಭಕ್ತ. ಅವರು ಅದಾನಿಯ ದರೋಡೆ ಬಗ್ಗೆ ಮಾತನಾಡಿದರು. ನೀರವ್ ಮೋದಿ ಮತ್ತು ಮೆಕುಲ್ ಚೋಕ್ಸಿ ಬಗ್ಗೆ ಪ್ರಶ್ನಿಸಿದರು. ನಿಮ್ಮ ಸ್ನೇಹಿತ ಅದಾನಿ ಸಂಸತ್ತಿಗಿಂತ ದೊಡ್ಡವರಾ? ಅವರ ದರೋಡೆಯ ಬಗ್ಗೆ ಪ್ರಶ್ನಿಸಿದರೆ ಏಕೆ ಹೆದರುತ್ತಿರಿ?
ನಮ್ಮ ಕುಟುಂಬವು ಉತ್ತರಾಧಿಕಾರ ರಾಜಕಾರಣ ಮಾಡುತ್ತಿದೆ ಎನ್ನುತ್ತೀರಿ. ಆದರೆ, ಈ ಕುಟುಂಬವೇ ರಕ್ತವನ್ನು ನೀಡಿ ಪ್ರಜಾಪ್ರಭುತ್ವವನ್ನು ಪೋಷಿಸಿತು. ಭಾರತೀಯ ಜನರಿಗಾಗಿ ಧ್ವನಿ ಎತ್ತಿತು. ಸತ್ಯಕ್ಕಾಗಿ ಹೋರಾಡಿತು. ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತಕ್ಕೆ ವಿಶೇಷ ಗುಣವಿದೆ. ನಿಮ್ಮಂತಹ ಹೇಡಿತನದ, ಅಧಿಕಾರ ದಾಹದ ಸರ್ವಾಧಿಕಾರಿಗೆ ನಮ್ಮ ಕುಟುಂಬ ಎಂದಿಗೂ ಶರಣಾಗುವುದಿಲ್ಲ. ನೀವು ಇಷ್ಟಪಡುವದನ್ನು ಮಾಡಿಕೊಳ್ಳಿ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.