ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಸ್ಪರ್ಧೆ?
ರಾಹುಲ್ ಗಾಂಧಿ ಸ್ಪರ್ಧಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಅವರ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಹೋದರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ.
ಮೋದಿಯ ಮಾನಹಾನಿ ಪ್ರಕರಣದಲ್ಲಿ, ರಾಹುಲ್‌ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ನ ಸೂರತ್ ಕೋರ್ಟ್ ನೀಡಿದ ತೀರ್ಪಿನ ನಂತರ, ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಈ ಪರಿಣಾಮದಿಂದ ಅವರ ಕೇರಳದ ವಯನಾಡ್ ಲೋಕಸಭಾ ಸ್ಥಾನವು ಖಾಲಿಯಾಗಿದೆ.
ಪಂಜಾಬ್ ರಾಜ್ಯದ ಜಲಂಧರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಚಂದೋಕ್ ಸಿಂಗ್ ಚೌಧರಿ ನಿಧನ, ಲಕ್ಷದ್ವೀಪ ರಾಷ್ಟ್ರೀಯವಾದಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಫೈಸಲ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯ ಸಮಸ್ಯೆಯಿಂದಾಗಿ ಎರಡೂ ಕ್ಷೇತ್ರಗಳು ಖಾಲಿಯಾಗಿವೆ. ಖಾಲಿಯಾಗಿರುವ ಕ್ಷೇತ್ರಗಳಿಗೆ 90 ದಿನದೊಳಗೆ ಚುನಾವಣೆ ನಡೆಸ ಬೇಕಿರುವುದರಿಂದ, ಮೂರೂ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಸಲು ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.
ಈ ಹಿನ್ನಲೆಯಲ್ಲಿ ಅನರ್ಹತೆಯ ವಿರುದ್ಧದ ಕಾನೂನು ಹೋರಾಟದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದರೆ, ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ. Wayanad going to bypoll soon? What EC’s Lakshadweep move signals.