ಸುಮಾರು 7 ಕೋಟಿ 6 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತು ವಶ! ಸಿಸಿಬಿ
ಬೆಂಗಳೂರು: ಅಂತರಾಷ್ಟ್ರೀಯ, ಅಂತರರಾಜ್ಯ ಹಾಗೂ ಸ್ಥಳೀಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಭೇದಿಸಿ, ಸುಮಾರು 7 ಕೋಟಿ 6 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು, ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಾರ್ಯಚರಣೆಯನ್ನು ಮುಂದುವರಿಸಿ, ಕಳೆದ ಒಂದು ತಿಂಗಳಿನಿಂದ ಸಂಗ್ರಹಿಸಲಾದ ಮಾಹಿತಿಗಳ ಆಧಾರದ ಮೇಲೆ ನೈಜೀರಿಯಾದ ಇಬ್ಬರು, ಐವರಿಕೋಸ್ಟ್ ದೇಶದ ಒಬ್ಬರು, ಕೇರಳದ 12 ಜನ, ಪಶ್ಚಿಮ ಬಂಗಾಳದ ಒಬ್ಬ, ಆಂದ್ರ ಪ್ರದೇಶದ ಒಬ್ಬ ಮತ್ತು ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸೇರಿದಂತೆ ಒಟ್ಟು 19 ಜನ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಅಂದಾಜು 7,06,00,000/- ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 6kg Hashish Oil, 51.89kg Ganja, 140grm MDMA Crystal, 236 Ecstasy Pills, 34 LSD strips, 23grm Cocaine, 17 Mobile Phone, 1 Car, 1 Bike ಅನ್ನು ವಸಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತ ಆರೋಪಿಗಳು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುತ್ತಾರೆ.
ಬಂಧಿತ ಆರೋಪಿಗಳ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್, ಬೇಗೂರು, ಅಶೋಕ್ ನಗರ, ಬಾಣಸವಾಡಿ, ಸಿದ್ದಾಪುರ, ಪುಲಿಕೇಶಿನಗರ, ಹೆಣ್ಣೂರು, ಕೆ.ಆರ್.ಪುರ, ಯಲಹಂಕ ಹಾಗೂ ಆರ್.ಟಿ.ನಗರ ಠಾಣೆಗಳಲ್ಲಿ NDPS ಕಾಯ್ದೆ-1985 ರೀತ್ಯಾ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಾರ್ಯಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.