ಮಣಿಪುರ ಗಲಭೆ ತನಿಖೆಗೆ 53 ಸಿಬಿಐ ಅಧಿಕಾರಿಗಳು: ಇಬ್ಬರು ಮಹಿಳಾ ಅಧಿಕಾರಿಗಳು ತಂಡವನ್ನು ಮುನ್ನಡೆಸಲಿದ್ದಾರೆ! » Dynamic Leader
October 31, 2024
ದೇಶ

ಮಣಿಪುರ ಗಲಭೆ ತನಿಖೆಗೆ 53 ಸಿಬಿಐ ಅಧಿಕಾರಿಗಳು: ಇಬ್ಬರು ಮಹಿಳಾ ಅಧಿಕಾರಿಗಳು ತಂಡವನ್ನು ಮುನ್ನಡೆಸಲಿದ್ದಾರೆ!

ಮಣಿಪುರ ಹಿಂಸಾಚಾರದ ತನಿಖೆಗಾಗಿ ಸಿಬಿಐ 29 ಮಹಿಳಾ ಅಧಿಕಾರಿಗಳು ಸೇರಿದಂತೆ 53 ಸದಸ್ಯರ ಹೊಸ ತಂಡವನ್ನು ರಚಿಸಿದೆ.

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಇಲ್ಲಿನ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಸಂಘರ್ಷ ಗಲಭೆಯಾಗಿ ಭುಗಿಲೆದ್ದಿತು. ಕುಕಿ ಪಂಗಡಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಗುಂಪೊಂದು ಮೆರವಣಿಗೆಯಲ್ಲಿ ಕರೆದೊಯ್ದಿತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು.

ಎರಡು ಬಣಗಳ ನಡುವಿನ ಘರ್ಷಣೆಯಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು; ಹಲವು ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನಲೆಯಲ್ಲಿ, ಮಣಿಪುರ ಗಲಭೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಮಣಿಪುರ ಹಿಂಸಾಚಾರದ ತನಿಖೆಗಾಗಿ ಸಿಬಿಐ 29 ಮಹಿಳಾ ಅಧಿಕಾರಿಗಳು ಸೇರಿದಂತೆ 53 ಸದಸ್ಯರ ಹೊಸ ತಂಡವನ್ನು ರಚಿಸಿದೆ.

ಇದನ್ನೂ ಓದಿ: ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌! – ದಿನೇಶ್ ಗುಂಡೂರಾವ್

ಇವುಗಳ ತನಿಖೆ ನಡೆಸಲಿರುವ ಸಿಬಿಐ ತಂಡದಲ್ಲಿ ಮೂವರು ಡಿಐಜಿ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಇಬ್ಬರು ಮಹಿಳಾ ಅಧಿಕಾರಿಗಳು ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಎಲ್ಲಾ ಪ್ರಕರಣಗಳ ಕುರಿತು ಸಿಬಿಐನ ಜಂಟಿ ನಿರ್ದೇಶಕರಿಗೆ ವರದಿಯನ್ನು ಸಲ್ಲಿಸಬೇಕು. 

Related Posts