ಲೈಕಾ ಪ್ರೊಡೆಕ್ಷನ್ಸ್ ಎ.ಸುಭಾಸ್ಕರನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಾಯಕ ನಟನಾಗಿ ನಿಖಿಲ್ ಕುಮಾರಸ್ವಾಮಿ! » Dynamic Leader
October 31, 2024
ಸಿನಿಮಾ

ಲೈಕಾ ಪ್ರೊಡೆಕ್ಷನ್ಸ್ ಎ.ಸುಭಾಸ್ಕರನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಾಯಕ ನಟನಾಗಿ ನಿಖಿಲ್ ಕುಮಾರಸ್ವಾಮಿ!

ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡೆಕ್ಷನ್ಸ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕ ನಟನಾಗಿ ನಟಿಸುತ್ತಿರುವ ನೂತನ ಚಲನಚಿತ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿ ಚಿತ್ರತಂಡವನ್ನು ಹರಸಿದರು.

ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪನೆ ಮಾಡಿರುವ ಲೈಕಾ ಸಂಸ್ಥೆಯ ಅಧ್ಯಕ್ಷ ಎ.ಸುಭಾಸ್ಕರನ್ ಸೇರಿದಂತೆ ಅವರ ಕುಟುಂಬ ಸದಸ್ಯರು, ಸಂಸ್ಥೆಯ ಅನೇಕ ಪ್ರಮುಖರು, ಚಿತ್ರತಂಡದವರು ಈ ಸಂತೋಷದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬುಧವಾರ ಈ ಕಾರ್ಯಕ್ರಮ ನಡೆಯಿತು.

Related Posts