ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ 14 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಿದೆ!
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗೂಡಿದ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಎರಡನೇ ದಿನವಾದ ಇಂದೂ (ಸೆಪ್ಟೆಂಬರ್ 1) ಮುಂಬೈನಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆ ಆರಂಭವಾದಾಗ ಪಕ್ಷದ ಮುಖಂಡರು ಗುಂಪು ಫೋಟೊ ತೆಗೆಸಿಕೊಂಡರು. ಈ ಸಭೆಯಲ್ಲಿ ಸಮನ್ವಯ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಸಂಯೋಜಕರು ಯಾರು ಎಂಬುದನ್ನೂ ತಿಳಿಸಲಾಗಿದೆ.
ಸಮನ್ವಯ ಸಮಿತಿ ಸದಸ್ಯರು:
1. ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್), 2. ಶರದ್ ಪವಾರ್ (ಎನ್‌ಸಿಪಿ), 3. ಸ್ಟಾಲಿನ್ (ಡಿಎಂಕೆ), 4. ಸಂಜಯ್ ರಾವತ್ (ಉದ್ದವ್ ಶಿವಸೇನೆ), 5. ತೇಜಸ್ವಿ ಯಾದವ್ (ರಾಷ್ಟ್ರೀಯ ಜನತಾದಳ), 6. ಅಭಿಷೇಕ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ರಾಘವ್ ಚಡ್ಡಾ (ಆಮ್ ಆದ್ಮಿ,) 8. ಜಾವಿದ್ ಅಲಿ ಖಾನ್ (ಸಮಾಜವಾದಿ), 9. ಲಾಲನ್ ಸಿಂಗ್ (ಸಂಯುಕ್ತ ಜನತಾ ದಳ), 10. ಹೇಮಂತ್ ಸೊರನ್ (ಜಾರ್ಖಂಡ್ ಮುಕ್ತಿ ಮೋರ್ಚಾ), 11. ಡಿ ರಾಜಾ (ಸಿಪಿಐ), 12. ಉಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ), 13. ಮೆಹಬೂಬಾ ಮುಫ್ತಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ), 14. ಸಿಪಿಎಂ ಪಕ್ಷದ ಪ್ರತಿನಿಧಿ.
ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ!
ಅಕ್ಟೋಬರ್ 2ಕ್ಕೆ ಚುನಾವಣೆ ಪ್ರಣಾಳಿಕೆ?
ಸಭೆಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೆ ಎಷ್ಟು ‘ಸೀಟು’ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದೇ ತಿಂಗಳ 3ನೇ ವಾರದಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಅಕ್ಟೋಬರ್ 2 ರೊಳಗೆ ‘ಇಂಡಿಯಾ’ ಒಕ್ಕೂಟವು ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಮೈತ್ರಿ ಘೋಷಣೆ:
ಜುಡೇಗಾ ಭಾರತ್, ಜೀತೇಗ ಇಂಡಿಯಾ, (ಭಾರತ ಒಗ್ಗೂಡುತ್ತದೆ, ಇಂಡಿಯಾ ಗೆಲ್ಲುತ್ತದೆ) ಈ ಘೋಷಣೆಯನ್ನು ಇಂಡಿಯಾ ಒಕ್ಕೂಟದ ಘೋಷಣೆಯಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್‌ಪಿ ಎಂದು ಸರ್ಕಾರಿ ನೌಕರರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ಬಂಧನ!
ನಿರ್ಣಯಗಳು:
ಈ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ವರದಿಯಾಗಿದೆ. ಅದರಂತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದು, ಕ್ಷೇತ್ರ ಹಂಚಿಕೆ ಸಮಾಲೋಚನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಿ, ಶೀಘ್ರವಾಗಿ ಮುಗಿಸುವುದು, ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಪ್ರಮುಖ ಸಮಸ್ಯೆಗಳನ್ನು ಒತ್ತಿ ಹೇಳುವುದು. ಸಂವಹನ ಮತ್ತು ಮಾಧ್ಯಮ ತಂತ್ರಗಳ ಮೂಲಕ ಪ್ರಚಾರಗಳನ್ನು ಸಂಘಟಿಸಲು ನಿರ್ಧಾರಗಳನ್ನು ಮಾಡಲಾಗಿದೆ.