ಕೊರೊನಾಕ್ಕಿಂತ ‘ಎಕ್ಸ್’ ವೈರಸ್ 7 ಪಟ್ಟು ಹೆಚ್ಚು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಲಂಡನ್: ವಿಶ್ವದಾದ್ಯಂತ ಜನರನ್ನು ಬಲಿತೆಗೆದುಕೊಂಡ ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ವೈರಸ್ ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 2020ರಲ್ಲಿ ಚೀನಾದಿಂದ ಹರಡಿದ ಕೊರೊನಾ ವೈರಸ್ ಮೂರು ವರ್ಷಗಳಿಂದ ಪ್ರಪಂಚದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿತು. ಈ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಸುಮಾರು 70 ಲಕ್ಷ ಜನರು ಸಾವನ್ನಪ್ಪಿದ್ದಾರೆ.
ಈ ಹಿನ್ನಲೆಯಲ್ಲಿ, ಕೊರೊನಾ ವೈರಸ್‌ಗಿಂತ ಏಳು ಪಟ್ಟು ಹೆಚ್ಚು ಅಪಾಯಕಾರಿಯ ಹೊಸ ವೈರಸ್ ಹೊರಹೊಮ್ಮಲಿದ್ದು, ಆ ಹೊಸ ಸಾಂಕ್ರಾಮಿಕ ರೋಗದಿಂದ ಸುಮಾರು 5 ಕೋಟಿ ಜನರು ಸಾಯಬಹುದು ಎಂದು ಅಂದಾಜಿಸಲಾಗಿದೆ. 1918-1920ರ ಅವಧಿಯಲ್ಲಿ ಜಗತ್ತನ್ನು ಬೆಚ್ಚಿ ಬೀಳಿಸಿದ ‘ಸ್ಪ್ಯಾನಿಷ್’ ಜ್ವರದಷ್ಟೇ ಇದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಹೊಸ ರೀತಿಯ ವೈರಸ್‌ಗೆ ‘ಎಕ್ಸ್’ ಎಂದು ಹೆಸರಿಸಿದೆ. ಇದರ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ತಜ್ಞ ಮತ್ತು ಯುಕೆ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್, ‘ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಹೊಸ ರೀತಿಯ ವೈರಸ್ ಅನ್ನು ಅಧ್ಯಯನ ಮಾಡಲಾಗಿದೆ. ಅಧ್ಯಯನದ ವರದಿಯಂತೆ, ಹೊಸದಾಗಿ ಗುರುತಿಸಲಾದ ‘ಎಕ್ಸ್’ ವೈರಸ್ ಹರಡಿದರೆ ಕನಿಷ್ಠ 5 ಕೋಟಿ ಜನರನ್ನು ಕೊಲ್ಲಬಹುದು ಎಂದು ಅಂದಾಜಿಸಲಾಗಿದೆ.
ಈ ಸಾಂಕ್ರಾಮಿಕ ರೋಗವನ್ನು ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ. ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸಾಂಕ್ರಾಮಿಕ ‘X’ ಹರಡುವ ಮೊದಲು ಅದನ್ನು ಎದುರಿಸಲು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 25 ಬಗೆಯ ವೈರಾಣುಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.