19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ: ಅಕ್ಟೋಬರ್ 14 ರಂದು ಅಮೇರಿಕಾದಲ್ಲಿ ಅನಾವರಣ! » Dynamic Leader
November 21, 2024
ದೇಶ

19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ: ಅಕ್ಟೋಬರ್ 14 ರಂದು ಅಮೇರಿಕಾದಲ್ಲಿ ಅನಾವರಣ!

ಅಕ್ಟೋಬರ್ 14, 1956 ರಂದು, ಡಾ.ಬಿ.ಆರ್.ಅಂಬೇಡ್ಕರ್ ರವರು ದೀಕ್ಷಾ ಭೂಮಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಅವರು ಮತಾಂತಗೊಂಡ ದಿನವನ್ನು “ಧಮ್ಮ ಚಕ್ರ ಪ್ರವರ್ತನ ದಿನ” ಎಂದು ಆಚರಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ಅಮೆರಿಕಾದಲ್ಲಿ, ಅಕ್ಟೋಬರ್ 14 ರಂದು ಮೇರಿಲ್ಯಾಂಡ್ ಅಕ್ಕೋಕೀಕ್ (Accokeek) ಪ್ರದೇಶದ 13 ಎಕರೆ ಜಾಗದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ (AIC) “ಸಮಾನತೆಯ ಪ್ರತಿಮೆ” (Statue of Equality) ಎಂದು ಹೆಸರಿಸಲಾದ 19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಿದ್ದಾರೆ.

ಈ ಪ್ರತಿಮೆಯನ್ನು ಭಾರತದ ಗುಜರಾತ್ ರಾಜ್ಯದಲ್ಲಿ “ಏಕತೆಯ ಪ್ರತಿಮೆ” (Statue of Unity) ಎಂಬ ಹೆಸರಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ (Ram Sutar) ಈ ವಿಗ್ರಹವನ್ನೂ ರಚಿಸಿದ್ದಾರೆ.

ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಸಮಾರಂಭಕ್ಕೆ ವಿಶ್ವದಾದ್ಯಂತ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

Related Posts