ಒಂದೇ ವರ್ಷದಲ್ಲಿ 97,000 ಬಂಧನ: ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಸಿಕ್ಕಿಬಿದ್ದ ಭಾರತೀಯರು! » Dynamic Leader
October 31, 2024
ವಿದೇಶ

ಒಂದೇ ವರ್ಷದಲ್ಲಿ 97,000 ಬಂಧನ: ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಸಿಕ್ಕಿಬಿದ್ದ ಭಾರತೀಯರು!

ವಾಷಿಂಗ್ಟನ್: ಕಳೆದೊಂದು ವರ್ಷದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ 97,000 ಭಾರತೀಯರಲ್ಲಿ ಹೆಚ್ಚಿನವರು ಗುಜರಾತ್ ಮತ್ತು ಪಂಜಾಬ್ ಮೂಲದವರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅಮೆರಿಕ ಪೌರತ್ವ ಅಧಿಕಾರಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ವಿವಿಧ ಗಡಿಗಳ ಮೂಲಕ ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ಭಾರತೀಯರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಅಮೆರಿಕ ಕಸ್ಟಮ್ಸ್ ಮತ್ತು ಗಡಿ ಬಧ್ರತಾ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 96,917 ಜನರನ್ನು ಬಂಧಿಸಲಾಗಿದೆ.

ಇವರಲ್ಲಿ 30,010 ಮಂದಿ ಕೆನಡಾದ ಮೂಲಕ ಮತ್ತು 41,770 ಮಂದಿ ಮೆಕ್ಸಿಕೋ ಮೂಲಕ ಗಡಿ ದಾಟಲು ಪ್ರಯತ್ನಿಸಿ ಅಮೆರಿಕ ಅಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದಾರೆ. ಉಳಿದವರು, ಅಮೆರಿಕ ಗಡಿಯನ್ನು ಪ್ರವೇಶಿಸಿದ ನಂತರ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. 2019-20ರಲ್ಲಿ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 19,883 ಭಾರತೀಯರನ್ನು ಬಂಧಿಸಲಾಗಿದ್ದು, 2023ರ ವೇಳೆಗೆ ಈ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದವರಲ್ಲಿ ಹೆಚ್ಚಿನವರು ಗುಜರಾತ್ ಮತ್ತು ಪಂಜಾಬ್ ಮೂಲದವರು ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಗಡಿ ದಾಟಿ ಸಿಕ್ಕಿಬಿದ್ದವರು ಕೇವಲ ಒಂದು ಸಣ್ಣ ಪ್ರಮಾಣ ಮಾತ್ರ. ಒಬ್ಬ ವ್ಯಕ್ತಿ ಸಿಕ್ಕಿಬಿದ್ದರೆ, ಕನಿಷ್ಠ 10 ಜನರು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಾರೆ ಎಂದು ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

Related Posts