ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ: ವೆಲ್‌ಫೇರ್ ಪಾರ್ಟಿ » Dynamic Leader
October 31, 2024
ರಾಜ್ಯ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ: ವೆಲ್‌ಫೇರ್ ಪಾರ್ಟಿ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಕಲಬುರಗಿ ಕೋಟನೂರ್ ಪ್ರದೇಶದಲ್ಲಿ ಅವಮಾನ ಮಾಡಿದ ಕೃತ್ಯ ಖಂಡನಾರ್ಹ. ಅವಮಾನಿಸಿ ಪಟಾಕಿ ಸಿಡಿಸಿ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕದ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಅಪಚಾರಗೈದಂತೆ. ಇತ್ತೀಚೆಗೆ ಇಂತಹಾ ಕಿಡಿಗೇಡಿ ಕೃತ್ಯಗಳು ವ್ಯಾಪಕವಾಗುತ್ತಿದೆ. ಆಡಳಿತದ ಬಗ್ಗೆ ಮತ್ತೆ ಕಾನೂನಿನ ಬಗ್ಗೆ ಭಯವಿಲ್ಲದಿರುವುದೇ ಇಂತಹ ದುಷ್ಕೃತ್ಯ ಮರುಕಳಿಸಲು ಕಾರಣವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮುಂದುವರಿಯಬೇಕು.

ದಲಿತರ ಪರ ಹಕ್ಕುಗಳಿಗಾಗಿ ಹೋರಾಡಿ, ದೇಶಕ್ಕೆ ಸಂವಿಧಾನವನ್ನು ರಚಿಸಿದ ಓರ್ವ ಮಹಾನ್ ವ್ಯಕ್ತಿಯನ್ನು ಅವಮಾನಿಸಿ ಅದೇನು ಸಾಧಿಸಿತ್ತಾರೆ?  ಜನರ ಭಾವನೆ ಕೆರಳಿಸಿ ಸಮಾಜದ ಶಾಂತಿ, ನೆಮ್ಮದಿ ಕೆಡಿಸುವುದೇ ಇಂತಹವರ ಗುರಿಯಾಗಿದೆ. ಅಪರಾಧಿಗಳನ್ನು ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯಬಾರದು.

ಇಂತಹ ಸಮಾಜಘಾತುಕ ಶಕ್ತಿಗಳನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿದೆ. ಇಂತಹ ಕುಕೃತ್ಯಗಳು ಕಡಿಮೆಯಾಗಳು ಸರ್ಕಾರ ಎಲ್ಲಾ ಆಯಮಗಳಲ್ಲೂ ಚಿಂತಿಸಬೇಕು ಎಂದು ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.

Related Posts