ಗದಗದಲ್ಲಿ ನೂತನ 50 ಬಸ್‌ಗಳ ಲೋಕಾರ್ಪಣೆ: ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ! » Dynamic Leader
October 31, 2024
ರಾಜ್ಯ

ಗದಗದಲ್ಲಿ ನೂತನ 50 ಬಸ್‌ಗಳ ಲೋಕಾರ್ಪಣೆ: ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ!

ಗದಗ: ಗದಗದಲ್ಲಿ ನೂತನ 50 ಬಸ್‌ಗಳ ಲೋಕಾರ್ಪಣೆ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಚಿವರಾದ ಎಚ್.ಕೆ ಪಾಟೀಲ್ ಅವರೊಂದಿಗೆ ಸೇರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಚಾಲನೆ ನೀಡಿದರು.  

ಸರ್ಕಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 375 ಗ್ರಾಮಾಂತರ ಸಾರಿಗೆ ವಾಹನಗಳ ಖರೀದಿಗಾಗಿ ರೂ.150 ಕೋಟಿ ಅನುದಾನವನ್ನು ಮಂಜೂರಾತಿ ಮಾಡಿದ್ದು, ಈ ಪೈಕಿ ಮೊದಲ ಹಂತವಾಗಿ 50 ಗ್ರಾಮಾಂತರ ಸಾರಿಗೆ ಬಸ್ಸುಗಳನ್ನು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ 645 ಬಸ್ಸುಗಳು ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.

ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಫೋನ್ ಪೇ ಕಂಪನಿಯ ಸಹಯೋಗದಲ್ಲಿ UPI ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸುಗಳಲ್ಲಿ ದಿನಾಂಕ: 01.09.2023 ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.  

ಸಮಾರಂಭದಲ್ಲಿ, ಡಿ.ಆರ್.ಪಾಟೀಲ್, ವ್ಯವಸ್ಥಾಪಕ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಿಭಾಗೀಯ ನಿಯಂತ್ರಣಾಧಿಕಾರಿ ಸೀನಪ್ಪ, ಸಾರಿಗೆ ಇಲಾಖೆ ಅಧಿಕಾರಿ ಸಿಬ್ಬಂದಿ ಇದ್ದರು.

Related Posts