ಕಾಂಡೋಮ್ ಪ್ಯಾಕೆಟ್‌ಗಳ ಮೇಲೆ ಪಕ್ಷದ ಚಿಹ್ನೆಗಳು: ಪರಸ್ಪರ ಕಿತ್ತಾಡುತ್ತಿರುವ ವೈಎಸ್ಆರ್ ಕಾಂಗ್ರೆಸ್-ಟಿಡಿಪಿ ಪಕ್ಷ!
ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರ ಜನರಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ‘ತೆಲುಗು ದೇಶಂ ಪಕ್ಷ (ಟಿಡಿಪಿ) ಕಾಂಡೋಮ್ ಪ್ಯಾಕೆಟ್‌ಗಳ ಮೇಲೆ ತಮ್ಮ ಪಕ್ಷದ ಲೋಗೋ ಮುದ್ರಿಸಿ ಹಂಚುತ್ತಿದೆ’ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಈ ಸಂಬಂಧ ವೀಡಿಯೊವೊಂದನ್ನು ಬಿಡುಗಡೆ ಮಾಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ, ತಮ್ಮ ‘ಎಕ್ಸ್’ ಸೈಟ್‌ನಲ್ಲಿ ‘ತಮ್ಮ ಪಕ್ಷದ ಪ್ರಚಾರಕ್ಕಾಗಿ ಗರ್ಭನಿರೋಧಕಗಳನ್ನು ವಿತರಿಸುತ್ತಿದೆ. ಇದು ಯಾವ ರೀತಿಯ ಜಾಹೀರಾತು ಹುಚ್ಚು? ಮುಂದೆ ಅವರು ವಯಾಗ್ರ ನೀಡಲು ಪ್ರಾರಂಭಿಸುತ್ತಾರೆಯೇ? ಕನಿಷ್ಠ ಅಲ್ಲಿಗೆ ನಿಲ್ಲಿಸಿ; ಇಲ್ಲದಿದ್ದರೆ, ನಿಮ್ಮ ಅವನತಿ ಇನ್ನಷ್ಟು ಹದಗೆಡುತ್ತದೆ’ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ತೆಲುಗು ದೇಶಂ ಪಕ್ಷವು ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ ಸೈಟ್‌ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿ, ‘ನಾವು ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ, ನಾವೂ ಸಿದ್ಧ… ಎಂದು ಏಕೆ ಕೂಗುತ್ತಿದ್ದೀರಿ? ಇಂತಹ ಅಸಹ್ಯ ಅಪಪ್ರಚಾರ ನಿಲ್ಲಿಸಿ’ ಎಂದು ಸೂಚಿಸಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಲೋಗೋವನ್ನು ಮುದ್ರಿಸಿರುವ ಗರ್ಭನಿರೋಧಕ ಪ್ಯಾಕೆಟ್‌ಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರ ಜನರಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.