ಮತ್ತೆ ವಿವಾದ ಎಬ್ಬಿಸಿದ ನೇಪಾಳ; ಭಾರತೀಯ ಪ್ರಾಂತ್ಯಗಳ ನಕ್ಷೆಯೊಂದಿಗೆ ಹೊಸ ಕರೆನ್ಸಿ!
ನವದೆಹಲಿ: ನೇಪಾಳ ಸರ್ಕಾರವು ಮೇ 2020ರಲ್ಲಿ ನವೀಕರಿಸಿದ ನಕ್ಷೆಯನ್ನು ಬಿಡುಗಡೆ ಮಾಡಿತು. ಉತ್ತರಾಖಂಡದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳು ನೇಪಾಳದ ಅಡಿಯಲ್ಲಿವೆ ಎಂದು ಅದು ಉಲ್ಲೇಖಿಸಿತ್ತು. ಇದನ್ನು ಭಾರತ ತೀವ್ರವಾಗಿ ಖಂಡಿಸಿದೆ. ನೇಪಾಳದ ಈ ನಿರಂಕುಶ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಈ ಹಿನ್ನಲೆಯಲ್ಲಿ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ಮೊನ್ನೆ ಸಂಪುಟ ಸಭೆ ನಡೆಯಿತು. ಸಂಪುಟ ಸಭೆಯು ಭಾರತದ ಭೂಪ್ರದೇಶಗಳ ವಿವಾದಾತ್ಮಕ ನಕ್ಷೆಯೊಂದಿಗೆ ಹೊಸ 100 ರೂಪಾಯಿ ನೋಟುಗಳನ್ನು ಮುದ್ರಿಸಲು ಅನುಮೋದಿಸಿದೆ.
ಹಳೆಯ 100 ರೂಪಾಯಿ ನೋಟುಗಳನ್ನು ನೀಡಿ, ಹೊಸ ರೂಪಾಯಿಗಳನ್ನು ಪಡೆದುಕೊಳ್ಳಬಹುದು ಎಂದು ನೇಪಾಳ ಸರ್ಕಾರ ಘೋಷಿಸಿದೆ. ಈ ವಿಚಾರ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಇದನ್ನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಖಂಡಿಸಿದ್ದಾರೆ.