ದಿನನಿತ್ಯ ಬಳಸುವ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ವಾತಾವರಣದಲ್ಲಿ ಟೊಮೆಟೊ ಪೇಸ್ಟ್ ಮಾರುಕಟ್ಟೆಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದ್ದೇವೆ. ಸತ್ಯವೇನೆಂದರೆ, ಆ ಪ್ರಗತಿಯು ನಮ್ಮ ಅಡುಗೆ ಮನೆಗಳನ್ನೂ ಬಿಟ್ಟಿಲ್ಲ. ಅಂತಹ ಒಂದು ಮಹತ್ವದ ಬದಲಾವಣೆಯ ನೋಟ ಇಲ್ಲಿದೆ!
ನಾವು ಪ್ರತಿನಿತ್ಯ ಎದ್ದಾಗ ಬಳಸುವ ಟೂತ್ ಬ್ರಶ್‌ನಿಂದ ಆರಂಭಿಸಿ, ಮೊಬೈಲ್ ಫೋನ್, ಹ್ಯಾಂಡ್ ಬ್ಯಾಗ್ ಹೀಗೆ ಪ್ರತಿ ದಿನ ಬಳಸುವ ಎಲ್ಲ ವಸ್ತುಗಳಲ್ಲೂ ಹೊಸ ತಂತ್ರಜ್ಞಾನ ಬಂದಿದೆ. ಈ ನಾವೀನ್ಯತೆ ಕೇವಲ ಪದಾರ್ಥಗಳಲ್ಲಿ ಮಾತ್ರವಲ್ಲದೆ ಅಡುಗೆಯಲ್ಲೂ ಹರಿದಾಡುತ್ತಿವೆ. ಉದಾಹರಣೆಗೆ ದಿನನಿತ್ಯ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನಕಾಯಿ, ಜೀರಿಗೆ ಮತ್ತು ಮೆಣಸು ಇತ್ಯಾದಿಗಳನ್ನು ರುಬ್ಬಿ ಆಹಾರಕ್ಕೆ ಸೇರಿಸುವುದು ವಾಡಿಕೆಯಾಗಿತ್ತು.
ಆದರೆ ಕಾಲ ಕಳೆದಂತೆ ಎಲ್ಲವೂ 10 ರೂಪಾಯಿ ಪ್ಯಾಕಟ್‌ನಲ್ಲಿ ಅಡಗಿಕೊಂಡಿತು. ನಾವು ಮಾತ್ರ ಹೊರತಾಗಿಲ್ಲ ಎಂದು ಈಗ ಟೊಮೆಟೊ ಪೇಸ್ಟ್ ಮಾರುಕಟ್ಟೆಗೆ ಬಂದಿವೆ. ಇದು ಬೇರೇನೂ ಇಲ್ಲ, ಟೊಮೆಟೊಗಳನ್ನು ರುಬ್ಬಿ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವುದೇ ಟೊಮೆಟೊ ಪೇಸ್ಟ್.
ಕಳೆದ ವರ್ಷಕ್ಕೆ ಹೋಲಿಸಿದರೆ ಜೀರಿಗೆ ಮತ್ತು ಮೆಣಸಿನ ಬೆಲೆ ದುಪ್ಪಟ್ಟಾಗಿರುವುದರಿಂದ ಕನಿಷ್ಟ ಬೆಲೆಯಲ್ಲಿ ಸಿಗುವ ಪುಡಿ ಮಾಡಿದ ಜೀರಿಗೆ ಮತ್ತು ಮೆಣಸನ್ನು ಖರೀದಿಸಿ ಜನ ಅಡುಗೆಗೆ ಬಳಸುತ್ತಿದ್ದಾರೆ. ಅದೇ ರೀತಿ ಆ್ಯಪಲ್‌ಗೆ ಸವಾಲೆಸೆಯುವಂತೆ ಪ್ರತಿದಿನ ಕೆಜಿ 100-160 ರೂಪಾಯಿಯವರೆಗೆ ಟೊಮೆಟೊ ಬೆಲೆ ಮಾರಾಟವಾಗುತ್ತಿದ್ದು, ಇದೀಗ ಟೊಮೆಟೊ ಪೇಸ್ಟ್ ಮಾರಾಟ ಬಿಸಿ ಶುರುವಾಗಿದೆ.
5 ರಿಂದ 6 ಟೊಮೆಟೊಗಳನ್ನು ಬಳಸುವ ಜಾಗದಲ್ಲಿ 10 ರೂಪಾಯಿಯ ಟೊಮೆಟೊ ಪೇಸ್ಟ್ ಪ್ಯಾಕೆಟ್ ಖರೀದಿಸಿ ಸುರಿದರೆ ಅಡುಗೆ ಸಿದ್ಧ. ಈರುಳ್ಳಿ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಈರುಳ್ಳಿಯನ್ನೂ ಪುಡಿ ಮಾಡಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಿದರೂ ಆಶ್ಚರ್ಯವಿಲ್ಲ.