ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಡಾಲರ್‌ಗೆ ಸಮಾನವಾದ ಭಾರತೀಯ ಕರೆನ್ಸಿಯ ಮೌಲ್ಯವನ್ನು ತರುವುದಾಗಿ ಪ್ರಸ್ತಾಪಿಸಿದ್ದರು.
ಭಾರತದ ಪ್ರಧಾನಿ ಮೋದಿ ಅವರು ನಿನ್ನೆ ತಮ್ಮ ಕಚೇರಿಗೆ ಭೇಟಿ ನೀಡಿದ ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆದರು. ನಂತರ ಅವರನ್ನು ರಂಜಿಸಲಿಕ್ಕಾಗಿ “ಮ್ಯಾಜಿಕ್” ಮಾಡಿ ತೋರಿಸಿದರು. ಅವರ ಹಣೆಗೆ ನಾಣ್ಯ ಅಂಟಿಸಿ ಮಾಯವಾಗುವಂತೆ ಮಾಡುತ್ತಿದ್ದರು; ಅದನ್ನು ಮಕ್ಕಳು ನೋಡಿ ಆನಂದಿಸಿದರು.
ಈ ವಿಡಿಯೋವನ್ನು ತಮ್ಮ ಎಕ್ಸ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ನನ್ನ ಕಿರಿಯ ಸ್ನೇಹಿತರೊಂದಿಗೆ ಕೆಲವು ಮರೆಯಲಾಗದ ಕ್ಷಣಗಳು” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಕುಸಿಯುತ್ತಿರುವ ಭಾರತೀಯ ರೂಪಾಯಿ ಮೌಲ್ಯವನ್ನು ಹೋಲಿಕೆ ಮಾಡಿ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿಯವರನ್ನು ಟ್ರೋಲ್ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತನ್ನ ಎಕ್ಸ್ ಪೇಜ್‌ನಲ್ಲಿ ಪ್ರಧಾನಿ ಮೋದಿ ಹಣೆಯ ಮೇಲೆ ನಾಣ್ಯ ಹಿಡಿದಿರುವ ಚಿತ್ರವನ್ನು ಬಿಡುಗಡೆ ಮಾಡಿದೆ.
ಅದರೊಂದಿಗೆ,
“ಪ್ರಶ್ನೆ: ಭಾರತೀಯ ಕರೆನ್ಸಿಯ ಮೌಲ್ಯ ಹೇಗೆ ಕುಸಿಯಿತು?
ಪ್ರಧಾನಿ ಮೋದಿ: ಹೀಗೆ…” ಎಂದು ಪೋಸ್ಟ್ ಮಾಡಿದೆ.
ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಡಾಲರ್‌ಗೆ ಸಮಾನವಾದ ಭಾರತೀಯ ಕರೆನ್ಸಿಯ ಮೌಲ್ಯವನ್ನು ತರುವುದಾಗಿ ಪ್ರಸ್ತಾಪಿಸಿದ್ದರು. ಆದರೆ, ಭಾರತೀಯ ಕರೆನ್ಸಿಯ ಪ್ರಸ್ತುತ ಮೌಲ್ಯ ಪ್ರತಿ ಡಾಲರ್‌ಗೆ ರೂ.83.27 ಆಗಿದೆ. 2014ರಲ್ಲಿ 63.72 ಇತ್ತು. ಇದನ್ನು ಟೀಕಿಸಿ ಕಾಂಗ್ರೆಸ್ ಪಕ್ಷ ಟ್ರೋಲ್ ಮಾಡಿದೆ.