ಮಂಜುಳಾ ರೆಡ್ಡಿ, ವರದಿಗಾರರು
ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಉಪಾಧ್ಯಕ್ಷರಾದ ಶ್ರೀ.ಬಿ.ಎಸ್.ಉಮೇಶ್ ರವರಿಂದ ನೆನ್ನೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾ ಘೋಷ್ಠಿಯನ್ನು ಉದ್ದೆಶಿಸಿ ಮಾತನಾಡಿ ಅವರು, ದಿನಾಕ: 01-04-2006ಕ್ಕೂ ಮೊದಲು ನೇಮಕವಾಗಿ ದಿನಾಂಕ: 01-04-2006ರ ನಂತರ ಅನುದಾನಕ್ಕೊಳಪ್ಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಪಿಂಚಣಿಗೆ ಪರಿಗಣಿಸಿ, ನಿವೃತ್ತಿಯಾದ ದಿನಾಂಕದಂದು ವೇತನ ನಿಗದಿಪಡಿಸಿ “ಹಳೆಯ ನಿವೃತ್ತಿ ಪಿಂಚಣಿ” ಯೋಜನೆ ನೀಡಬೇಕು. ಈಗಾಗಲೇ ಬರಿಗೈಯಲ್ಲಿ ನಿವೃತ್ತಿ ಹೊಂದಿರುವ ಕುಟುಂಬಗಳಿಗೆ ಈ ಸೌಲಭ್ಯವನ್ನು ಈ ಕೂಡಲೇ ಜಾರಿಗೆ ತರಬೇಕು.
ಅನುದಾನಿತ ಶಾಲೆ ಕಾಲೇಜುಗಳಲ್ಲಿ ದಿನಾಂಕ: 01-04-2006ರ ನಂತರ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ “ನಿಶ್ಚಿತ ಪಿಂಚಿಣಿ ಸೌಲಭ್ಯ” ನೀಡಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯವಿಲ್ಲದೇ ಅನುದಾನಿತ ನೌಕರರಿಗೂ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಅದಕ್ಕಾಗಿ ದಿನಾಂಕ: 14-01-2023 ಮತ್ತು 15-01-2023 ರಂದು ಬೆಂಗಳೂರ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಳೇ ನಿಶ್ಚಿತ ಪಿಂಚಿಣಿ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿ ಮತ್ತು “ಅನಿರ್ಧಿಷ್ಟ ಅವಧಿ ಧರಣಿ ಮುಷ್ಕರದ 100 ನೇ ದಿನದ ಪ್ರಯುಕ್ತವಾಗಿ ಕುಟುಂಬ ಪರಿವಾರ ಸಮೇತ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಮಾಡುತ್ತೇವೆ’ ಎಂದು ಉಮೇಷ್ ಅವರು ಸರ್ಕಾರಕ್ಕೆ ಹೆಚ್ಚರಿಕೆ ನೀಡಿದರು.