ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪುತ್ತೂರ್ Archives » Dynamic Leader
December 3, 2024
Home Posts tagged ಪುತ್ತೂರ್
ಶಿಕ್ಷಣ

ಪುತ್ತೂರು (ದಕ್ಷಿಣ ಕನ್ನಡ): 2025ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಅಂತಿಮ ಹಂತದ ಪ್ರಕ್ರಿಯೆ ಪುತ್ತೂರು ಕಮ್ಯೂನಿಟಿ ಸೆಂಟರ್‌ನಲ್ಲಿ ನಡೆಯಿತು.

ದ್ವಿತೀಯ ಪಿಯುಸಿ ಮುಗಿಸಿ ಲಾಂಗ್ ಟರ್ಮ್ ನೀಟ್ ಮತ್ತು ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಇಂಟಿಗ್ರೆಟೆಡ್ ನೀಟ್‌ಗೆ ತರಭೇತಿಗಾಗಿ ಕಮ್ಯೂನಿಟಿ ಸೆಂಟರ್ ಈ ಬಾರಿ 50 ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿತ್ತು. ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಅಂಕವನ್ನು ಆದರಿಸಿ 65 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು. ಅನಂತರ ಕೌನ್ಸಿಲಿಂಗ್ ನಡೆಸಿ ಅವರಲ್ಲಿ ಎಲ್ಲರಿಗೂ ಸೆಂಟರಿನ ಅರ್ಹತಾ ಪರೀಕ್ಷೆಗೆ ಅವಕಾಶ ನೀಡಲಾಯಿತು.

ಭಾನುವಾರದಂದು ನಡೆದ ಸೆಂಟರಿನ ಅರ್ಹತಾ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಈ ಮೊದಲು ಹದಿನೈದು ವಿದ್ಯಾರ್ಥಿಗಳು ಸೆಂಟರಿನ ದಾಖಲಾತಿ ಇರುವವರಿಗಾಗಿ ಮೀಸಲು ನೀಡಲಾಗಿತ್ತು. ಪರೀಕ್ಷೆಯಲ್ಲಿ ಆಯ್ಕೆಯಾಗದ ಉಳಿದ ವಿದ್ಯಾರ್ಥಿಗಳಿಗೆ ಸೆಂಟರ್ ವಿದ್ಯಾರ್ಥಿ ವೇತನ ನೀಡಲಿದೆ.

ಮುಂದಿನ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಳೆದ ಬಾರಿ ನೀಟ್‌ನಲ್ಲಿ ಸಾದನೆ ಮಾಡಿ ವಿವಿಧ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರೇರಣಾ ಶಿಭಿರ ನಡೆಸಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ಎಂ.ಬಿ.ಬಿ.ಎಸ್ ಕಲಿಯುತ್ತಿರುವ ಸೆಂಟರಿನ ವಿದ್ಯಾರ್ಥಿಗಳು ಸಮಾಲೋಚಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಈ ಮೊದಲು ಸಾದನೆ ಮಾಡಿದವರು ಮುಂದೆ ಸಾದನೆ ಮಾಡಲಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸಂದರ್ಭದಲ್ಲಿ ನಿರಂತರ ನೆರವು ನೀಡುವುದಾಗಿ ಧೈರ್ಯ ತುಂಬಿದರು.

ಸಿ.ಆರ್.ಡಿ.ಎಫ್ ನ ಉಪಾಧ್ಯಕ್ಷರಾದ ಅಬ್ದುಲ್ಲಾ ಶೇಕ್ ರವರು ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆ ನಡೆಸಿಕೊಟ್ಟರು. ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾದ ನಸ್ವೀಫ್, ಅಮಿಷಾ ಹಾಗೂ ಈ ಬಾರಿ ನೀಟ್‌ನಲ್ಲಿ ಅತ್ಯುತ್ತಮ ಸಾದನೆ ಮಾಡಲಿರುವ ಅನಸ್ ರವರು ಮಾರ್ಗದರ್ಶನ ನೀಡಿದರು. ಫಿಸಿಕ್ಸ್ ನಲ್ಲಿ ಉನ್ನತ ಪದವಿ ಮಾಡುತ್ತಿರುವ ಸೆಂಟರಿನ ವಿದ್ಯಾರ್ಥಿನಿ ಅಮ್ನಾಝ್ ರವರು ಸಬ್ಜೆಕ್ಟ್ ಕಲಿಯುವ ಸುಲಭ ವಿದಾನದ ಬಗ್ಗೆ ಮಾಹಿತಿ ನೀಡಿದರು.

ಮುಂದಿನ ದಿನದಲ್ಲಿ ನೀಟ್‌ನಲ್ಲಿ 400 ಅಂಕಕ್ಕಿಂತ ಹೆಚ್ಚು ಬರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡುವ ಹೊಸ ಯೋಜನೆಯನ್ನು ಈ ಸಂದರ್ಭ ಸೆಂಟರಿನ ಟ್ರಸ್ಟಿ ಇಮ್ತಿಯಾಝ್ ರವರು ವಿವರಿಸಿದರು.