ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬೈನರಿ ನಕ್ಷತ್ರ Archives » Dynamic Leader
January 14, 2025
Home Posts tagged ಬೈನರಿ ನಕ್ಷತ್ರ
ಲೇಖನ

ಡಿ.ಸಿ.ಪ್ರಕಾಶ್

ಬೈನರಿ ನಕ್ಷತ್ರವು ಪ್ರತಿ 80 ವರ್ಷಗಳಿಗೊಮ್ಮೆ ಸ್ಫೋಟಗೊಳ್ಳುತ್ತದೆ! ಅದರ ಪ್ರಕಾರ, 1946ರ ನಂತರ, ಈ ವರ್ಷದ ಫೆಬ್ರವರಿ ಮತ್ತು ಸೆಪ್ಟೆಂಬರ್ ನಡುವೆ ಯಾವಾಗ ಬೇಕಾದರೂ ಸ್ಫೋಟಿಸಬಹುದು!!

ಬಾಹ್ಯಾಕಾಶದಲ್ಲಿ ಅನೇಕ ಅಪರೂಪದ ವಿದ್ಯಮಾನಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳೂ ಅದನ್ನು ಕಂಡುಹಿಡಿದು ನಮಗೆ ತಿಳಿಸುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ, ನಾಸಾ ಇತ್ತೀಚೆಗೆ ಬಾಹ್ಯಾಕಾಶದಲ್ಲಿ ಸ್ಫೋಟಗೊಳ್ಳುವ ಬೈನರಿ ನಕ್ಷತ್ರದ ಬಗ್ಗೆ ಹೇಳಿದೆ. ಈ ಬೈನರಿ ನಕ್ಷತ್ರವು ಪ್ರತಿ 80 ವರ್ಷಗಳಿಗೊಮ್ಮೆ ಸ್ಫೋಟಗೊಳ್ಳುತ್ತದೆ. ಅದರ ಪ್ರಕಾರ 1946ರ ನಂತರ ಈ ವರ್ಷದ ಫೆಬ್ರುವರಿ ಮತ್ತು ಸೆಪ್ಟೆಂಬರ್ ನಡುವೆ ಯಾವಾಗ ಬೇಕಾದರೂ ಬೈನರಿ ನಕ್ಷತ್ರ ಸ್ಫೋಟಗೊಳ್ಳಬಹುದು ಮತ್ತು ಈ ಸ್ಫೋಟವನ್ನು ನಾವು ಭೂಮಿಯಿಂದಲೇ ನೋಡಬಹುದು ಎನ್ನುತ್ತಾರೆ ವಿಜ್ಞಾನಿ ಡಾ.ವಿಘ್ನೇಶ್ವರನ್ ಕೃಷ್ಣಮೂರ್ತಿ. Postdoctoral researcher, Trottier Space Institute at McGill, Montreal Canada.

ಡಾ.ವಿಘ್ನೇಶ್ವರನ್ ಕೃಷ್ಣಮೂರ್ತಿ

ಈ ಬಗ್ಗೆ ಮಾತನಾಡಿರುವ ಅವರು, “ಈ ನೋವಾ ಸ್ಫೋಟ (Nova Explosion) 80 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಇದನ್ನು ನಾವು ಭೂಮಿಯಿಂದಲೇ ನೋಡಬಹುದು. ಅಂದರೆ, ಭೂಮಿಯಿಂದ 3000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಎರಡು ನಕ್ಷತ್ರಗಳು ಹತ್ತಿರ ಹತ್ತಿರದಲ್ಲಿದೆ. ಇದನ್ನು ಕೆಂಪು ದೈತ್ಯ ನಕ್ಷತ್ರ (Red Giant Star) ಮತ್ತು ಬಿಳಿ ಕುಬ್ಜ ನಕ್ಷತ್ರ (White Dwarf Star) ಎಂದು ಕರೆಯಲಾಗುತ್ತದೆ. ಇದರಲ್ಲಿ ಕೆಂಪು ದೈತ್ಯ ನಕ್ಷತ್ರ ನಮ್ಮ ಸೂರ್ಯನಿಗಿಂತ ಅನೇಕ ಪಟ್ಟು ದೊಡ್ಡದಾಗಿದೆ. ಆದರೆ, ಅದರ ಹತ್ತಿರದಲ್ಲಿರುವ ಬಿಳಿ ಕುಬ್ಜ ನಕ್ಷತ್ರವು ತುಂಬಾ ಚಿಕ್ಕದಾಗಿದೆ. ಅದು ಭೂಮಿಯಿಂದ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.

ಇದರಲ್ಲಿ, ಬಿಳಿ ಕುಬ್ಜ ನಕ್ಷತ್ರವು ಹತ್ತಿರದ ಕೆಂಪು ದೈತ್ಯ ನಕ್ಷತ್ರದಿಂದ ಸ್ವಲ್ಪ ಸ್ವಲ್ಪವಾಗಿ ಅದರಲ್ಲಿರುವ ವಸ್ತುಗಳನ್ನು (Materials)  ಎಳೆದುಕೊಳ್ಳುತ್ತವೆ. ಅಂದರೆ ಕೆಂಪು ದೈತ್ಯ ನಕ್ಷತ್ರದಲ್ಲಿರುವ ಅನಿಲಗಳು, ಪರಮಾಣುಗಳನ್ನು ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸಿ ದೊಡ್ಡದಾಗಿ ಒಂದು ಹಂತದಲ್ಲಿ ಸ್ಫೋಟಗೊಳ್ಳುತ್ತವೆ. ಸ್ಫೋಟದ ನಂತರ, ಕೆಂಪು ದೈತ್ಯ ನಕ್ಷತ್ರವು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ಮತ್ತೆ ತನ್ನೊಳಗೆ ಎಳೆದುಕೊಳ್ಳುತ್ತವೆ. ಈ ಆಟವು ಆಕಾಶದಲ್ಲಿ 80 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಬಿಳಿ ಕುಬ್ಜ ನಕ್ಷತ್ರವು ಕೊನೆಯ ಬಾರಿಗೆ ಸ್ಫೋಟಗೊಂಡಿದ್ದು 1946ರಲ್ಲಿ. ಇದು 2024ರಲ್ಲಿ ಫೆಬ್ರವರಿ ಮತ್ತು ಸೆಪ್ಟೆಂಬರ್ ನಡುವೆ ಯಾವುದೇ ಸಮಯದಲ್ಲಿ ಮತ್ತೆ ಸ್ಫೋಟಿಸಬಹುದು. ಈ ಸ್ಫೋಟವನ್ನು ನಾವು ಭೂಮಿಯಿಂದಲೇ ನೋಡಬಹುದು. ಈ ಸ್ಫೋಟಕವು ಎರಡು ದಿನಗಳ ಕಾಲ ಆಕಾಶದಲ್ಲಿ ಗೋಚರಿಸುತ್ತದೆ.

ಬೈನರಿ ನಕ್ಷತ್ರಗಳನ್ನು ವೃತ್ತಾಕಾರವಾಗಿ ತೋರಿಸಲಾಗಿದೆ

ಬಾಹ್ಯಾಕಾಶದಲ್ಲಿ ಎರಡು ನಕ್ಷತ್ರಗಳು ಹತ್ತಿರ ಹತ್ತಿರದಲ್ಲಿರುವುದನ್ನು ಬೈನರಿ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಈ ಬೈನರಿ ವ್ಯವಸ್ಥೆಯಲ್ಲಿ ನಮ್ಮ ಸೌರವ್ಯೂಹದಲ್ಲಿ ನಮಗೆ ತಿಳಿದಂತೆ ಒಟ್ಟು 5 ಮಾತ್ರವೇ ಇದೆ. ಅದರಲ್ಲೂ ಕೆಂಪು ದೈತ್ಯ ನಕ್ಷತ್ರ (Red Giant Star) ಮತ್ತು ಬಿಳಿ ಕುಬ್ಜ ನಕ್ಷತ್ರ (White Dwarf Star) ಬಹಳ ವಿಶೇಷ. ಏಕೆಂದರೆ ಪ್ರತಿ 80 ವರ್ಷಗಳಿಗೊಮ್ಮೆ ವಸ್ತುಗಳನ್ನು ಸಂಗ್ರಹಿಸಿ ಸ್ಫೋಟಗೊಳ್ಳುವುದು ಒಂದು ಪವಾಡವೇ. ಅದೂ ಈ ತಲೆಮಾರು ಇದನ್ನು ನೋಡುವುದು ಆಶ್ಚರ್ಯವೇ” ಎಂದು ಹೇಳಿದ್ದಾರೆ.

Source: Puthiyathalaimurai.com