ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮೋದಿ-ಅದಾನಿ ಘರ್ಷಣೆ Archives » Dynamic Leader
December 3, 2024
Home Posts tagged ಮೋದಿ-ಅದಾನಿ ಘರ್ಷಣೆ
ದೇಶ

ಡಿ.ಸಿ.ಪ್ರಕಾಶ್

ಅದಾನಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ದೆಹಲಿ ಹೈಕೋರ್ಟ್‌ನಲ್ಲಿ ಮೋದಿ ವಿರುದ್ಧ ಕೇಸ್!

ಗುಜರಾತ್‌ನ ಅದಾನಿ ಮತ್ತು ಮೋದಿ ಅವರು ವಿಮಾನದಲ್ಲಿ ಪ್ರತ್ಯೇಕವಾಗಿ ಹಾರುವ ಮಟ್ಟಿಗೆ ಸ್ನೇಹಿತರು. ಭಾರತದಲ್ಲಿ ಸರ್ವಾಧಿಕಾರವನ್ನು ಮತ್ತು ಬಂಡವಾಳಶಾಹಿಯನ್ನು ಸ್ಥಾಪಿಸಲು ಕಠಿಣವಾಗಿ ಶ್ರಮಿಸುವವರು.

ಹೀಗಾಗಿ, ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಅದಾನಿ ಬಗ್ಗೆ ಪ್ರಶ್ನೆ ಎತ್ತಿದರೆ ಅಧಿಕಾರ ಕಳೆದುಕೊಳ್ಳುವ ಮತ್ತು ವಿಶ್ವ ಮಾಧ್ಯಮಗಳು ಮತ್ತು ಸಂಘಟನೆಗಳು ಅದಾನಿ ಸಮೂಹವನ್ನು ಟೀಕಿಸಿದರೂ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಪರಿಸ್ಥಿತಿಯೇ ಮುಂದುವರೆದಿದೆ.

ಹೀಗಿರುವಾಗ ಕಳೆದ 10 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರಕಾರ ನಡೆಸಿದ ಸರ್ವಾಧಿಕಾರ ಹಾಗೂ ಅದಾನಿ ಸಮೂಹದ ಬಂಡವಾಳಶಾಹಿ ಚಟುವಟಿಕೆಗಳಿಂದಾಗಿ, ಬಿಜೆಪಿ ಮತ್ತು ಅದಾನಿ ಗ್ರೂಪ್ ಎರಡೂ ಜನರು ಮತ್ತು ಹೂಡಿಕೆದಾರರಲ್ಲಿ ತೀವ್ರ ಅಸಮಾಧಾನವನ್ನು ಗಳಿಸಿವೆ.

ಇದರಿಂದ ಮೋದಿಯ ವರ್ಚಸ್ಸು ಕಡಿಮೆಯಾಗಿದ್ದು, ಬಿಜೆಪಿಯ ಬಹುಪಾಲು ಸಾರ್ವಜನಿಕ ಸಭೆಗಳು ಜನ ಸೇರದೆ ಬಿಕೋ ಎನ್ನುತ್ತಿದೆ. ಜನ ಸೇರದ ಸಾರ್ವಜನಿಕ ಸಭೆಗಳಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಮೋದಿ, ಅಮಿತ್ ಶಾ ಮತ್ತು ನಡ್ಡಾ ಮುಂತಾದ ಹಿರಿಯ ನಾಯಕರುಗಳು ಸುಳ್ಳು ಮತ್ತು ದ್ವೇಷವನ್ನು ಉಗುಳುತ್ತಿದ್ದಾರೆ.

ಜನ ಸೇರದ ಸಭೆಗಳಲ್ಲಿ ಮಾತನಾಡಿದರೆ ಜನರ ಗಮನಕ್ಕೆ ಬರುವುದಿಲ್ಲ ಎಂಬುದನ್ನು ಅರಿತ ಮೋದಿ, ಅದಾನಿ-ಅಂಬಾನಿಯಂತಹ ಬಂಡವಾಳಶಾಹಿಗಳು ವೈಫಲ್ಯದ ಭೀತಿಯಿಂದ ಟೆಂಪೋಗಳಲ್ಲಿ ಕಪ್ಪುಹಣ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಟಿಕೆಗೆ ಗುರಿಯಾಗಿದ್ದರು.

ಇದರಿಂದಾಗಿ ತೀವ್ರ ಅಸಮಧಾನಕ್ಕೆ ಒಳಗಾದ ಅದಾನಿ ಸಮೂಹ, ಅಲ್ಲಿಯವರೆಗೆ ಬಿಜೆಪಿಗೆ ನಿಷ್ಠರಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ, ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ವಿಷಯದಲ್ಲಿ ಬಿಜೆಪಿಯ ನಾಟಕವನ್ನು ಬಹಿರಂಗ ಪಡಿಸಿತು.

ಅದಾದ ನಂತರವೂ ಅದಾನಿ ಗ್ರೂಪ್ ಪಡೆದ ಹೂಡಿಕೆಯಲ್ಲಿನ ಕುಸಿತ ಹಾಗೂ ಬಿಜೆಪಿಯ ಅಧಿಕಾರ ಕುಸಿತದಿಂದಾಗಿ ಅದಾನಿ ಗ್ರೂಪ್ ನೇರವಾಗಿ ಮೋದಿ ವಿರುದ್ಧವೇ ದೆಹಲಿ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದೆ.

ಅದಕ್ಕೆ ಅದಾನಿ ಗ್ರೂಪ್ ನೀಡಿರುವ ಕಾರಣ, ‘ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಮೋದಿ ಮಾತನಾಡಿದ್ದಾರೆ. ಇದಕ್ಕಾದ ನ್ಯಾಯವನ್ನು ಅದಾನಿ ಗ್ರೂಪ್‌ ಪಡೆಯಬೇಕು’ ಎಂಬುದಾಗಿದೆ.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ‘ಅದಾನಿ ಹಗರಣದ ಬಗ್ಗೆ ಸ್ವತಃ ಮೋದಿಯೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇದರಿಂದ ಜಾಗತಿಕ ಹೂಡಿಕೆದಾರರಲ್ಲಿ ಗೊಂದಲ ಮೂಡಿದ್ದು ಮಾತ್ರವಲ್ಲದೆ ಕೇಂದ್ರ ಬಿಜೆಪಿ ಸರಕಾರ ಮಾಡಿರುವ ಹಲವು ಆರ್ಥಿಕ ಭ್ರಷ್ಟಾಚಾರಗಳು ಜನರಲ್ಲಿ ಬಯಲಾಗಿದೆ.