ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರಾಮನವಮಿ ಹಿಂಸಾಚಾರ Archives » Dynamic Leader
November 24, 2024
Home Posts tagged ರಾಮನವಮಿ ಹಿಂಸಾಚಾರ
ದೇಶ ರಾಜಕೀಯ

ಬಿಹಾರ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಮೇಲೆ ಪ್ರತಿದಿನ ದಾಳಿಗಳು ನಡೆಯುತ್ತಲೇ ಇವೆ. CAA ಯಂತಹ ಕಠಿಣ ಕಾನೂನುಗಳನ್ನು ತರುವ ಮೂಲಕ ಅಲ್ಪಸಂಖ್ಯಾತರನ್ನು ಭಾರತದಿಂದ ಪ್ರತ್ಯೇಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದು ಒಂದೆಡೆಯಾದರೆ ಮತ್ತೊಂದೆಡೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲವು ಹಿಂದೂ ಪರ ಸಂಘಟನೆಗಳು ಹಿಂಸಾಚಾರಕ್ಕೆ ಮುಗಿಬಿದ್ದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲೇ ಹೆಚ್ಚು ಧಾರ್ಮಿಕ ಸಂಘರ್ಷಗಳು ನಡೆಯುತ್ತವೆ. ಆದರೆ ಈಗ ಬಿಜೆಪಿ ಇಲ್ಲದ ರಾಜ್ಯಗಳಲ್ಲೂ ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ.

ಈ ರೀತಿಯಾಗಿ, ಉತ್ತರ ಪ್ರದೇಶದಲ್ಲಿ ಈ ವರ್ಷ ಶ್ರೀರಾಮನವಮಿ ಮೆರವಣಿಗೆಯಲ್ಲಿ, ಕೆಲವರು ಮಸೀದಿಯ ಹೊರಗಿನ ಅಂಗಡಿಗಳ ಮೇಲೆ ಹತ್ತಿ, ಅಲ್ಲಿ ಕೇಸರಿ ಧ್ವಜಗಳನ್ನು ಕಟ್ಟಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ಆತಂಕಕ್ಕೆ ಕಾರ್ಣವಾಗಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ನಡೆದ ಶ್ರೀರಾಮನವಮಿ ಮೆರವಣಿಗೆಯಲ್ಲಿ ಘರ್ಷಣೆ ನಡೆದು, ಮದರಸಾಕ್ಕೆ ಬೆಂಕಿ ಹಚ್ಚಲಾದ ಘಟನೆ ದುರಂತಕ್ಕೆ ಕಾರಣವಾಗಿದೆ. ಈ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದರೆ, ಒಬ್ಬರು ಸಾವನ್ನಪ್ಪಿದ್ದಾರೆ.

ಹೀಗಿರುವಾಗ ಬಿಹಾರದಲ್ಲಿ ಶ್ರೀರಾಮನವಮಿ ಮೆರವಣಿಗೆ ವೇಳೆ ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹೈದರ್ ಅಜಮ್ ಶೋರೂಂ ಲೂಟಿ ಮಾಡಿರುವ ಘಟನೆ ಸಂಚಲನ ಮೂಡಿಸಿದೆ. ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹಾಗೂ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮ ಲಿಮಿಟೆಡ್ (ಮಹಾರಾಷ್ಟ್ರ ಸರ್ಕಾರ, ರಾಜ್ಯ ಸಚಿವರು) ಮಾಜಿ ಅಧ್ಯಕ್ಷ ಹೈದರ್ ಅಜಮ್, ಬಿಹಾರದಲ್ಲಿ ಎಲೆಕ್ಟ್ರಾನಿಕ್ಸ್ ಶೋ ರೂಂ ನಡೆಸುತ್ತಿದ್ದಾರೆ. ರಾಮನವಮಿಯ ದಿನದಂದು ನಡೆದ ಹಿಂಸಾಚಾರದಲ್ಲಿ ಇವರ ಮಾಲೀಕತ್ವದ ಶೋರೂಮ್ ಗೆ ನುಗ್ಗಿದ ಹಿಂದೂ ಪರ ಸಂಘಟನೆಯ ಕೆಲವರು ಅಂಗಡಿಯನ್ನು ಲೂಟಿ ಮಾಡಿ ಹೋಗಿದ್ದಾರೆ. ಅವರ ಅಂಗಡಿಯಲ್ಲಿದ್ದ ಮೊಬೈಲ್‌, ಟಿವಿ ಸೆಟ್‌ಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಬಿಡುಗಡೆಯಾಗಿ ಆಶ್ಚರ್ಯವನ್ನು ಉಂಟು ಮಾಡಿದೆ.