ಬೈರುತ್: ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ 105 ಜನರು ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಯೋತ್ಪಾದಕ ಸಂಘಟನೆ ಹಮಾಸ್ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಇದೀಗ ಲೆಬನಾನ್ ಮೂಲದ ಹಿಜ್ಬುಲ್ಲಾ ಸಂಘಟನೆ ಮೇಲೂ ದಾಳಿ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ದಾಳಿಯಲ್ಲಿ 21 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ 274 ಜನರು ಸಾವನ್ನಪ್ಪಿದ್ದರು. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಕೂಡ ಕೊಲ್ಲಲ್ಪಟ್ಟರು.
ಈ ಹಿನ್ನೆಲೆಯಲ್ಲಿ, ಇದೀಗ ಮತ್ತೆ ಇಸ್ರೇಲ್ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 105 ಮಂದಿ ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಲೆಬನಾನ್ ಜನರು ದೇಶವನ್ನು ತೊರೆಯಲು ಪ್ರಾರಂಭಿಸಿದ್ದಾರೆ. ನಮ್ಮ ಗುರಿಯನ್ನು ಸಾಧಿಸುವವರೆಗೂ ನಾವು ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧರಿಸಿದ್ದಾರೆ.
ಯೆಮನ್ನಲ್ಲೂ ಇಸ್ರೇಲ್ ದಾಳಿ:
ಹಮಾಸ್ ಪಡೆಗಳ ವಿರುದ್ಧ ಯುದ್ಧ ಪ್ರಾರಂಭವಾದ 9 ತಿಂಗಳ ನಂತರ ಜುಲೈ 21 ರಂದು ಮೊದಲ ಬಾರಿಗೆ, ಯೆಮನ್ನಲ್ಲಿ ಹಲವಾರು ಹೌತಿ (Houthi) ಬಂಡುಕೋರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದೀಗ ಯೆಮನ್ನಲ್ಲೂ ಇಸ್ರೇಲ್ ಭೀಕರ ದಾಳಿ ನಡೆಸುತ್ತಿದೆ.
ಇಸ್ರೇಲ್ ಯೆಮನ್ನ ವಿದ್ಯುತ್ ಸ್ಥಾವರಗಳು ಮತ್ತು ಬಂದರುಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಇದರಲ್ಲಿ 4 ಹೌತಿ ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.