ಮಾಣಿಕ್ಯದಿಂದ ಮಾಡಿದ ವಿಶ್ವದ ಮೊದಲ ವಜ್ರದ ಕಿರೀಟ; ಶ್ರೀರಂಗಂ ರಂಗನಾಥನಿಗೆ ಅರ್ಪಿಸಿದ ಮುಸ್ಲಿಂ ಭಕ್ತ!
ತಿರುಚ್ಚಿ ಶ್ರೀರಂಗಂ ರಂಗನಾಥನಿಗೆ, ಇಸ್ಲಾಂ ಧರ್ಮದ ಭಕ್ತ ಜಾಕಿರ್ ಹುಸೇನ್ ಸೇರಿದಂತೆ ಅನೇಕ ದಾನಿಗಳು ಒಂದೇ ರತ್ನದಲ್ಲಿ 160ಕ್ಕೂ ಹೆಚ್ಚು ವಜ್ರಗಳನ್ನು ಹುದುಗಿಸಿ ಸುಂದರವಾದ ಕಿರೀಟವನ್ನು ಸಿದ್ಧಪಡಿಸಿ ಅರ್ಪಿಸಿದ್ದಾರೆ. ಈ ಕಿರೀಟವನ್ನು ತಿರುಚ್ಚಿಯ ಗೋಪಾಲ್ ದಾಸ್ ಜೆಮ್ಸ್ ಅಂಡ್ ಜ್ಯುವೆಲರ್ಸ್ ಸಂಸ್ಥೆಯವರು ತಯಾರಿಸಿದ್ದಾರೆ.
108 ವೈಷ್ಣವ ಕ್ಷೇತ್ರಗಳಲ್ಲಿ ಮೊದಲನೆಯದು ಮತ್ತು ಭೂಲೋಕ ವೈಕುಂಠ ಎಂದು ಕರೆಯಲ್ಪಡುವ ಶ್ರೀರಂಗಂ ರಂಗನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಏಕಾದಶಿ ದಿನದಂದು ಕೈಸಿಕ ಏಕಾದಶಿ ಉತ್ಸವವನ್ನು ನಡೆಸಲಾಗುತ್ತದೆ. ಈ ವರ್ಷ ಕೈಸಿಕ ಏಕಾದಶಿ ಹಬ್ಬ ನೆನ್ನೆಯಿಂದ ನಡೆಯುತ್ತಿದೆ. ಈ ಸಮಾರಂಭದಲ್ಲಿ ಮುಸ್ಲಿಂ ಭಕ್ತರೊಬ್ಬರು ಶ್ರೀರಂಗಂ ರಂಗನಾಥನಿಗೆ ಹೊಸ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ.
ರಂಗನಾಥನ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾಕಿರ್ ಹುಸೇನ್, “ತಿರುಚ್ಚಿ ಶ್ರೀರಂಗಂ ರಂಗನಾಥ ಸ್ವಾಮಿಯ ಮೇಲಿನ ಭಕ್ತಿಯಿಂದಾಗಿ ನಾನು ಈ ವಜ್ರದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದೇನೆ. ಸುಮಾರು ಅರ್ಧ ಅಡಿ ಎತ್ತರದ ಕಿರೀಟವನ್ನು 3,160 ಕ್ಯಾರೆಟ್ ಮಾಣಿಕ್ಯಗಳು, 600 ವಜ್ರಗಳು ಮತ್ತು ಪಚ್ಚೆ ಕಲ್ಲುಗಳಿಂದ ವಿನ್ಯಾಸಗೊಳಿಸಲಾಗಿದೆ.
ರಾಜಸ್ಥಾನದಿಂದ ಒಂದೇ ಮಾಣಿಕ್ಯ ಕಲ್ಲನ್ನು ತಂದು ಅದನ್ನು ಕೆತ್ತಿ, 400 ಗ್ರಾಂ ಚಿನ್ನದಲ್ಲಿ ವಜ್ರಗಳು ಮತ್ತು ಪಚ್ಚೆಗಳಿಂದ ಹೊದಿಸಿ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ವಿನ್ಯಾಸಗೊಳಿಸಲು ಹಲವು ವರ್ಷಗಳೇ ಬೇಕಾಯಿತು. ಪ್ರಪಂಚದಲ್ಲಿಯೇ ಪ್ರಥಮ ಬಾರಿಗೆ ಬೆಲೆಬಾಳುವ ಕಲ್ಲುಗಳಿಂದ ಮಾಡಿದ ವಜ್ರದ ಕಿರೀಟವೆಂಬುದು ಇದರ ವಿಶೇಷ. ನಾನು ಹುಟ್ಟಿನಿಂದ ಮುಸಲ್ಮಾನನಾದರೂ ರಂಗನಾಥರ ಮೇಲಿನ ಭಕ್ತಿಯಿಂದ ಹೀಗೆ ಮಾಡಿದ್ದೇನೆ” ಎಂದು ಜಾಕೀರ್ ಹುಸೇನ್ ಉತ್ಸಾಹದಿಂದ ಹೇಳಿದರು.