ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಂವಿಧಾನ ಅರಿವಿನ ಯಾನ Archives » Dynamic Leader
December 3, 2024
Home Posts tagged ಸಂವಿಧಾನ ಅರಿವಿನ ಯಾನ
ರಾಜ್ಯ

ಗಿರೀಶ್ ಕುಮಾರ್, ಯಾದಗಿರಿ

ಯಾದಗಿರಿ: ಅಕ್ಷರಧಾತೆ ಸಾವಿತ್ರಿಬಾಯಿ ಪುಲೆ ಅವರ 127ನೇ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಧಮ್ಮ ಮಹಿಳಾ ಪರಿಷತ್ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಇದೇ ಮಾರ್ಚ್ 17 ರಂದು ಸಂವಿಧಾನ ಅರಿವಿನ ಯಾನ ಕಾರ್ಯಕ್ರಮವನ್ನು ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಯಾದಗಿರಿ ಜಿಲ್ಲಾಧ್ಯಕ್ಷ ಮರೆಪ್ಪ ಬುಕ್ಕಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದು 1949 ರಂದು ಈ ದೇಶಕ್ಕೆ ಸಮರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೆ ಈ ದೇಶದಲ್ಲಿ ಸುವ್ಯವಸ್ಥೆ ಸಮರ್ಪಕವಾಗಿ ಜಾರಿಯಲ್ಲಿದೆ. ಸಂವಿಧಾನದ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಹಾಗೂ ಪ್ರಜಾಸತಾತ್ಮಕ ಮೌಲ್ಯಗಳು ಸಿಕ್ಕಿರುವುದು ನಮಲ್ಲೆರಿಗೂ ಗೊತ್ತಿರುವ ವಿಷಯ.

ಬಾಬಾ ಸಾಹೇಬರು ದೇಶದ ಬಹುಸಂಖ್ಯಾತರಿಗಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ಮಹಿಳಾ ಸಮಸ್ಯೆಗಳ ಕುರಿತು ಪ್ರಪ್ರಥಮವಾಗಿ ಧ್ವನಿ ಎತ್ತಿ ಹೋರಾಟ ನಡೆಸಿದರು. ಆದರೆ ಸಂವಿಧಾನದ ಆಶಯಗಳ ಬಗ್ಗೆ ಇವತ್ತಿನ ನಮ್ಮ ಮಹಿಳಾ ಸಮೂಹದಲ್ಲಿ ಮಾಹಿತಿ ಇಲ್ಲದೇ ಇರುವುದು ಬೇಸರದ ಸಂಗತಿಯಾಗಿದೆ. ಬಹುಪಾಲು ಮಹಿಳೆಯರು ಇಂದಿಗೂ ಯಾವುದೋ ಮೌಡ್ಯದ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಹಾಗಾಗಿ, ಭಾರತೀಯ ಬೌದ್ಧ ಮಹಾಸಭಾ ಮತ್ತು ಧಮ್ಮ ಮಹಿಳಾ ಪರಿಷತ್ ವತಿಯಿಂದ ಸಂವಿಧಾನ ಅರಿವಿನ ಯಾನ ಕುರಿತು, ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಕೆಂಭಾವಿಯಲ್ಲಿ, ನಾಡಿನ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ, ಇತಿಹಾಸದಲ್ಲಿ ನಮಗೆ ಅರಿವು ಮೂಡಿಸಿ ಅಕ್ಷರದ ಜ್ಞಾನ ನೀಡಿದ ಅಕ್ಷರಧವ್ವ ಮಾತೆ ಸಾವಿತ್ರಿಬಾಯಿ ಪುಲೆ ಅವರ 127ನೇ ಪುಣ್ಯಸ್ಮರಣೆ ಅಂಗವಾಗಿ ಹಾಗೂ ತ್ಯಾಗಮಯಿ ರಮಾತಾಯಿಯವರ ಜೀವನ ಆದರ್ಶ ಹಿಂಬಾಲಿಕೆಗಾಗಿ, ಈ ಕಾರ್ಯಕ್ರಮದ ಮುಖಾಂತರ ಬಾಬಾ ಸಾಹೇಬರ ಆಶಯಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ಭಗವಂತ ಅನುವಾರ, ವೆಂಕಟೇಶ ಹೊಸಮನಿ, ನಿಲ್ಲಮ್ಮ ಬಿ.ಮಲ್ಲೆ, ಭೀಮಬಾಯಿ ಕಲ್ಲದೇವನಹಳ್ಳಿ, ರಾಜೇಶ್ವರಿ ಯಡಿಯಪ್ಪ, ರಾಹುಲ್ ಹುಲಿಮನಿ, ಬಸವರಾಜ ಆರ್ ಮಲ್ಪೆ, ಸುರೇಶ್ ಬೋಮ್ಮನ್, ಚಂದ್ರಕಾಂತ ಛಲವಾದಿ, ರಣಧೀರ ಹೊಸಮನಿ, ಶಿಲ್ಪ ಆರ್. ಹುಲಿಮನಿ, ಮಂಜುಳಾ ಸುರಪುರ, ಪ್ರೀಯಾದರ್ಶಿನಿ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.