ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸೋಲಾರ್ ಎನರ್ಜಿ ಪ್ರಾಜೆಕ್ಟ್ Archives » Dynamic Leader
November 22, 2024
Home Posts tagged ಸೋಲಾರ್ ಎನರ್ಜಿ ಪ್ರಾಜೆಕ್ಟ್
ವಿದೇಶ

ಡಿ.ಸಿ.ಪ್ರಕಾಶ್

ಗೌತಮ್ ಅಧಾನಿ ಅವರು ಸೋಲಾರ್ ಎನರ್ಜಿ ಪ್ರಾಜೆಕ್ಟ್ ಡೀಲ್ ವಿಚಾರದಲ್ಲಿ ಹೂಡಿಕೆ ಪಡೆಯಲು ಅಮೆರಿಕ ಹೂಡಿಕೆದಾರರಿಗೆ ಸುಳ್ಳು ಹೇಳಿ ಮೋಸಗೊಳಿಸಿದ್ದೂ ಅಲ್ಲದೇ ಭಾರತೀಯ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿದ್ದಾರೆ ಎಂದು ಅಮೆರಿಕ ವಕೀಲರು ಆರೋಪಿಸಿದ್ದಾರೆ.

ಭಾರತದ ಅಗ್ರ ಶ್ರೀಮಂತ ವ್ಯಕ್ತಿ ಗುಜರಾತ್‌ನ ಗೌತಮ್ ಅಧಾನಿ, ಪ್ರಧಾನಿ ಮೋದಿಯವರ ಸ್ನೇಹಿತ ಎಂಬುದಕ್ಕಾಗಿ ಬಿಜೆಪಿ ಆಡಳಿತದಲ್ಲಿ ಅಗಾಧ ಬೆಳವಣಿಗೆ ಕಂಡವರು ಎಂದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾದವರು. ಈಗಾಗಲೇ ಅಮೆರಿಕದ ಹಿಂಡೆನ್ ಬರ್ಗ್ ವರದಿ ಹಾಗೂ ಸೆಬಿ ಕ್ರಮಗಳಿಂದ ತತ್ತರಿಸಿರುವ ಅದಾನಿ ಇದೀಗ ಅಮೆರಿಕದ ನ್ಯಾಯಾಲಯದಲ್ಲಿ ಅಲ್ಲಿನ ವಕೀಲರು ಸಲ್ಲಿಸಿರುವ ವರದಿಯಿಂದ ತತ್ತರಿಸಿ ಹೋಗಿದ್ದಾರೆ. ಅದೇನೆಂದರೆ, ಗೌತಮ್ ಅದಾನಿಯವರ “ಅದಾನಿ ಗ್ರೀನ್ ಎನರ್ಜಿ” ಕಂಪನಿಯು ಅಮೆರಿಕದಲ್ಲಿ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳನ್ನು ಪಡೆಯುವ ಸಲುವಾಗಿ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 2,200 ಕೋಟಿ ರೂಪಾಯಿ (265 ಮಿಲಿಯನ್ ಡಾಲರ್) ಲಂಚವನ್ನು ನೀಡಿದ್ದಾರೆ ಎಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಈ ಮೂಲಕ ಗೌತಮ್ ಅದಾನಿ ಮಾತ್ರವಲ್ಲ, ಅದಾನಿ ಸೋದರ ಸಂಬಂಧಿ ಸಾಗರ್ ಅದಾನಿ, ವಿನೀತ್ ಜೈನ್ ಕೂಡ ಸುಳ್ಳು ಹೇಳಿ ಅಮೆರಿಕದ ಹೂಡಿಕೆದಾರರಿಂದ ಬಂಡವಾಳ ಪಡೆಯಲು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಭಾರತೀಯ ಅಧಿಕಾರಿಗಳು ಸೇರಿದಂತೆ ಏಳು ಜನರ ಮೇಲೆ ಈ ಆರೋಪವಿದೆ. ಈ ಆರೋಪಗಳ ಪ್ರಕಾರ, ಭಾರತೀಯ ಇಂಧನ ನಿಗಮ (Indian Power Corporation), ಭಾರತೀಯ ಇಂಧನ ನಿಗಮದ ಅಂಗಸಂಸ್ಥೆಗಳು ಮತ್ತು ಅಮೆರಿಕನ್ ರಿಟೈನರ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಭಾರತ ಸರ್ಕಾರದ ವಿದ್ಯುತ್ ವಿತರಣಾ ಕಂಪನಿಗಳು ಸೌರ ಒಪ್ಪಂದಗಳಿಗೆ ಸಹಿ ಹಾಕಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಸಂಚು ರೂಪಿಸಲಾಗಿದೆ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಜುಲೈ 2021 ಮತ್ತು ಫೆಬ್ರವರಿ 2022ರ ನಡುವೆ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದಾಗಿ ಭರವಸೆ ನೀಡಿದ್ದಾರೆ. ತರುವಾಯ, ತಮಿಳುನಾಡು, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‌ಗಢ, ಆಂಧ್ರಪ್ರದೇಶ ಸೇರಿದಂತೆ ರಾಜ್ಯಗಳ ವಿದ್ಯುತ್ ವಿತರಣಾ ಕಂಪನಿಗಳು ಕೇಂದ್ರ ಸರ್ಕಾರದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದೊಂದಿಗೆ (SECI – Solar Energy Corporation of India) ಪಿ.ಎಸ್.ಎ ಒಪ್ಪಂದದಲ್ಲಿ (POWER SALE AGREEMENT – FOR SALE OF SOLAR POWER)  ಸಹಿ ಹಾಕಿದ್ದಾರೆ. ಅಂದರೆ, ಭಾರತದಲ್ಲಿ ಲಂಚದ ಮೂಲಕ ಪಡೆಯಲಾದ ಒಪ್ಪಂದಗಳನ್ನು ಮುಂದಿಟ್ಟು, ಅಮೆರಿಕ ಹೂಡಿಕೆದಾರರನ್ನು ಅದಾನಿ ಮೋಸ ಮಾಡಿದ್ದಾರೆ ಎಂಬುದು ಅಮೆರಿಕ ವಕೀಲರ ಪ್ರಾಥಮಿಕ ಆರೋಪವಾಗಿದೆ. ಈ ಆರೋಪ ಬೆಳಕಿಗೆ ಬಂದ ನಂತರ ಅದಾನಿ ಷೇರುಗಳು ಮತ್ತು ಬಾಂಡ್‌ಗಳು ತೀವ್ರವಾಗಿ ಕುಸಿತವನ್ನು ಖಂಡಿವೆ.

ಅಮೆರಿಕದಲ್ಲಿ ಗುತ್ತಿಗೆ ಪಡೆಯಲು ಅದಾನಿ 2,200 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ತನಿಖೆ ಪ್ರಾರಂಭವಾದಾಗ, ತನಿಖೆಯನ್ನು ಸ್ಥಗಿತಗೊಳಿಸಲು ಸಂಚು ರೂಪಿಸಲಾಯಿತು. ಇದೀಗ ಅದಾನಿ ವಿರುದ್ಧ ಅಮೆರಿಕದಲ್ಲಿ ಬಂಧನ ವಾರಂಟ್ ಜಾರಿಯಾಗಿದೆ. ಇದು ವಿಚಿತ್ರವಾಗಿದೆ. ಅದಾನಿ ಮತ್ತು ಅವರಿಗೆ ಸಂಬಂಧಿಸಿದ ಹಗರಣಗಳ ತನಿಖೆಯ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಲೇ ಇದೆ. ಆದರೆ, ನರೇಂದ್ರ ಮೋದಿಯವರು ಅದಾನಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಕಾರಣ ಸ್ಪಷ್ಟ – ಅದಾನಿಯನ್ನು ತನಿಖೆಗೆ ಒಳಪಡಿಸಿದರೆ ನರೇಂದ್ರ ಮೋದಿಯೊಂದಿಗಿನ ಪ್ರತಿಯೊಂದು ಕೊಂಡಿಯೂ ಹೊರಬರುತ್ತದೆ!