ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Anant Ambani - Radhika Merchant Wedding Archives » Dynamic Leader
October 23, 2024
Home Posts tagged Anant Ambani – Radhika Merchant Wedding
ದೇಶ

ಗುಜರಾತ್: ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಅವರ ವಿವಾಹವು ಗುಜರಾತ್‌ನ ಜಾಮ್‌ನಗರದಲ್ಲಿ ಸುಮಾರು 1000 ಕೋಟಿ ರೂಪಾಯಿ ವೆಚ್ಚದಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತಿವೆ.

ಉದ್ಯಮಿ ಮುಖೇಶ್ ಅಂಬಾನಿ ಪುತ್ರನ ವಿವಾಹ ಸಮಾರಂಭಕ್ಕೆ ಸ್ಥಳೀಯರಿಂದ ಹಿಡಿದು ಜಾಗತಿಕ ಸೆಲೆಬ್ರಿಟಿಗಳವರೆಗೆ 2000 ಜನರು ಒಂದೇ ಸ್ಥಳದಲ್ಲಿ ಜಮಾಯಿಸಿದ್ದು, ಜಾಮ್‌ನಗರದಲ್ಲಿ ಸಂಭ್ರಮ ಮನೆ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರು ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ 2ನೇ ಮಗ ಅನಂತ್ ಅಂಬಾನಿ. ಇವರಿಗೂ ಎನ್ ಕೋರ್ ಸಿಇಒ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರಿಗೂ ಜುಲೈ 12 ರಂದು ವಿವಾಹವಾಗಲಿದೆ. ಉದ್ಯಮಿ ಮುಖೇಶ್ ಅಂಬಾನಿ ಪುತ್ರನ ಮದುವೆ 1000 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ತರುವಾಯ, ಮೂರು ದಿನಗಳ ಕಾಲ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ. ನಿನ್ನೆ ಜಾಮ್‌ನಗರದಲ್ಲಿ ಆರಂಭವಾದ ವಿವಾಹ ಮಹೋತ್ಸವದ ಮೊದಲ ದಿನವೇ ಇಡೀ ಭಾರತದ ಗಮನ ಸೆಳೆದಿದೆ. ಹಬ್ಬದ ಸಡಗರದಿಂದ ಕೂಡಿರುವ ಜಾಮ್‌ನಗರದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಂದ ಹಿಡಿದು ಸ್ಥಳೀಯ ಸೆಲೆಬ್ರಿಟಿಗಳವರೆಗೆ ಜಮಾಯಿಸಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಫೇಸ್‌ಬುಕ್ ಮತ್ತು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಇವಾಂಕಾ ಟ್ರಂಪ್ ಸೇರಿದಂತೆ ನೂರಾರು ವಿಶ್ವದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಏತನ್ಮಧ್ಯೆ, ಎಲ್ಲಾ ಆಹ್ವಾನಿತ ವಿಶೇಷ ಅತಿಥಿಗಳಿಗಾಗಿ ದೆಹಲಿ ಮತ್ತು ಮುಂಬೈನಿಂದ ಜಾಮ್ ನಗರಕ್ಕೆ ವಿಮಾನ ಸೇವೆಯನ್ನು ಏರ್ಪಡಿಸಲಾಗಿದೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಲಂಡನ್, ಪ್ಯಾರಿಸ್, ಇಟಲಿ, ಕತಾರ್, ಭೂತಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮುಂತಾದ ನಗರಗಳಿಂದ ಅಂತರರಾಷ್ಟ್ರೀಯ ಅತಿಥಿಗಳೊಂದಿಗೆ ಅಂತರರಾಷ್ಟ್ರೀಯ ವಿಮಾನಗಳು ಜಾಮ್‌ ನಗರಕ್ಕೆ ಬರುತ್ತಿವೆ. ಈ ಮೂಲಕ ಜಾಮ್‌ನಗರ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ಪಡೆದುಕೊಂಡಿದೆ.

ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ವಿವಾಹಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರವು ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ 10 ದಿನಗಳ ಕಾಲ (ಫೆಬ್ರವರಿ 25-ಮಾರ್ಚ್ 5) ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಸ್ಥಾನಮಾನವನ್ನು ನೀಡಿದೆ. ವಿಶ್ವದ ಪ್ರಮುಖ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಆಗಮನಕ್ಕೆ ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಸಾಮಾನ್ಯವಾಗಿ ದಿನಕ್ಕೆ 6 ವಿಮಾನಗಳನ್ನು ನಿರ್ವಹಿಸುವ ಜಾಮ್‌ನಗರಕ್ಕೆ ನಿನ್ನೆಯಷ್ಟೇ 140 ವಿಮಾನಗಳು ಬಂದಿವೆ.

ವಿಮಾಣ ನಿಲ್ದಾಣಗಳ ಮೇಲ್ದರ್ಜೆಗಾಗಿ ಮತ್ತು ಅಂತರಾಷ್ಟ್ರೀಯ ವಿಮಾಣ ನಿಲ್ದಾಣದ ಘೋಷಣೆಗಾಗಿ ಅದೆಷ್ಟೋ ವಿಮಾಣ ನಿಲ್ದಾಣಗಳು ಅರ್ಜಿಹಾಕಿ ಕಾಯುತ್ತಿದ್ದರೂ ಕಂಡುಕೊಳ್ಳದ ಕೇಂದ್ರ ಬಿಜೆಪಿ ಸರ್ಕಾರ, ಇದೀಗ 10 ದಿನಗಳ ಅಂಬಾನಿ ಮನೆಯ ವಿವಾಹ ಆಚರಣೆಗಾಗಿ ಜಾಮ್‌ನಗರ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯಗೊಳಿಸಿರುವುದಕ್ಕೆ ಎಲ್ಲಡೆ ಪ್ರತಿರೋಧ ವ್ಯಕ್ತವಾಗುತ್ತಿವೆ.