ರಾಜಧರ್ಮವನ್ನು ಪಾಲಿಸುವವರು ಮಾತ್ರ ಅದನ್ನು ಬೋಧಿಸಲು ಸಾಧ್ಯ: ಮಣಿಪುರ ಮುಖ್ಯಮಂತ್ರಿ ರಾಜೀನಾಮೆಗೆ ಪಿ.ಚಿದಂಬರಂ ಒತ್ತಾಯ!
ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯದಿಂದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ.
ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಳೆದ 2 ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅತ್ಯಾಚಾರ ನಡೆಸಿದ ವಿಡಿಯೋವೊಂದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಣಿಪುರದ ಪರಿಸ್ಥಿತಿಯನ್ನು ಖಂಡಿಸಿದೆ. ಪ್ರಧಾನಿ ವಿವರಣೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಕಲಾಪವನ್ನು ಸ್ಥಗಿತಗೊಳಿಸಿವೆ.
How long will it take for the Supreme Court's indictment of the Manipur Government to reach PMO in Delhi and CMO in Imphal?
If the chief minister of Manipur, Mr Biren Singh, has any sense of constitutional morality, he should quit immediately
Only those who practise rajdharma…
— P. Chidambaram (@PChidambaram_IN) August 2, 2023
ಈ ಹಿನ್ನಲೆಯಲ್ಲಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ಮಣಿಪುರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಆರೋಪಗಳು ದೆಹಲಿಯ PMO (ಪ್ರಧಾನಿ ಕಚೇರಿ) ಮತ್ತು ಇಂಫಾಲ್‌ನಲ್ಲಿರುವ CMO (ಮುಖ್ಯಮಂತ್ರಿ ಕಚೇರಿ) ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಇದನ್ನೂ ಓದಿ: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಶಕ್ತಿ ತುಂಬಿ ಸಕ್ರಿಯಗೊಳಿಸಿ; ಕರ್ನಾಟಕ ಮುಸ್ಲಿಮ್ ಯೂನಿಟಿಯ ಖಾಸಿಂ ಸಾಬ್ ಆಗ್ರಹ!
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ಸಾಂವಿಧಾನಿಕ ತತ್ವಗಳ ಬಗ್ಗೆ ತಿಳುವಳಿಕೆ ಇದ್ದರೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ರಾಜಧರ್ಮವನ್ನು ಪಾಲಿಸುವವರು ಮಾತ್ರ ಅದನ್ನು ಬೋಧಿಸಲು ಸಾಧ್ಯ. ಅವಮಾನಕ್ಕೊಳಗಾದ ಮಹಿಳೆಯರ ಬಳಿ “ಕೀ ಇಲ್ಲ” ಎಂದು ಹೇಳಿದ ಪೊಲೀಸ್ ಜೀಪ್ ಡ್ರೈವರ್ ನಂತಾಗಿದೆ ಕೇಂದ್ರ ಸರ್ಕಾರ!
ಕೇಂದ್ರ ಸರ್ಕಾರವು ಸಾಂವಿಧಾನಿಕ ಜವಾಬ್ದಾರಿಯ ಯಂತ್ರವನ್ನು ಆಫ್ ಮಾಡಿ ಕೀಲಿಯನ್ನು ಎಸೆದಿದೆ (ಲೇಖನ 355 ಮತ್ತು 356) ಎಂದು ಪಿ.ಚಿದಂಬರಂ ಪೋಸ್ಟ್ ಮಾಡಿದ್ದಾರೆ.