ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Blue Tooth Archives » Dynamic Leader
November 25, 2024
Home Posts tagged Blue Tooth
ಶಿಕ್ಷಣ

ನಾವು ಬ್ಲೂಟೂತ್ (Bluetooth) ಎಂದು ತಿಳಿದಿರುವ ತಂತ್ರಜ್ಞಾನದ ಹೆಸರು ಮತ್ತು ಅದರ ಚಿಹ್ನೆಗೆ ಕಾರಣ, ಒಬ್ಬ ರಾಜನ ಹಲ್ಲುಗಳೇ ಎಂದರೆ ನೀವು ನಂಬುತ್ತೀರಾ? ನಂಬದಿದ್ದರೂ ಅದುವೇ ಸತ್ಯ! ಅದನ್ನೇ ನಾವು ಇಲ್ಲಿ ಕಾಣಲಿದ್ದೇವೆ.

ಹರಾಲ್ಡ್ ಬ್ಲೂಟೂತ್ ಗೋರ್ಮ್ಸನ್ (Harald Bluetooth Gormsson), ಇವರು ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ, ರೂನಿಕ್ ಹರಾಲ್ಡ್ ಕುನುಕ್ ಅವರ ಇನ್ನೊಂದು ಹೆಸರು. ಇವರ ಆಳ್ವಿಕೆಯು ಬರೀ 28 ವರ್ಷಗಳೇ (ಕ್ರಿ.ಶ.958-986) ಆಗಿದ್ದರೂ ಆ ಅವಧಿಯೊಳಗೆ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಒಂದುಗೂಡಿಸಿದ್ದಾರೆ.

ಅವರ ಅಡ್ಡ ಹೆಸರು ಬ್ಲೂಟೂತ್ ಮತ್ತು ಬ್ಲ್ಯಾಕ್‌ಟೂತ್ ಎಂದು ಹೇಳಲಾಗುತ್ತಿದೆ. ರಾಜ ಬ್ಲೂಟೂತ್ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಬಹಳ ಕಡಿಮೆ ಸಮಯದಲ್ಲಿ ಒಂದುಗೂಡಿಸಿದಂತೆ, ಬ್ಲೂಟೂತ್ ತಂತ್ರಜ್ಞಾನವು ಕಡಿಮೆ ಸಮಯದಲ್ಲಿ ವಿವಿಧ ವಿದ್ಯುನ್ಮಾನ ಸಾಧನಗಳನ್ನು ಒಂದುಗೂಡಿಸುತ್ತದೆ. ಅದಕ್ಕಾಗಿಯೇ ವಿಜ್ಞಾನಿಗಳು ಈ ತಂತ್ರಜ್ಞಾನಕ್ಕೆ ಬ್ಲೂಟೂತ್ ಎಂದು ಹೆಸರಿಸಿದ್ದಾರೆ!

ಅದು ಸರಿ, ಅವನಿಗೆ ಬ್ಲೂಟೂತ್ ಎಂಬ ಅಡ್ಡಹೆಸರು ಹೇಗೆ ಬಂದಿತು? ಅವರ ಹಲ್ಲುಗಳು ಗೋಚರವಾಗಿ ಮತ್ತು ಗಾಢ ನೀಲಿ ಬಣ್ಣವನ್ನು ಹೊಂದಿದ್ದವು. ಆದ್ದರಿಂದಲೇ ಅವರಿಗೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಇವರ ಹಲ್ಲುಗಳು ಇಷ್ಟು ಕೆಟ್ಟದಾಗಿರಲು ಬ್ಲೂಬೆರ್ರಿ (Blueberry) ಕಾರಣ ಎಂದು ಹೇಳಲಾಗುತ್ತದೆ. ಹೌದು, ಅವರು ಬೆರ್ರಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಿದ್ದರಂತೆ. ಎಡೆಬಿಡದೆ ತಿನ್ನುತ್ತಿದ್ದರಿಂದ ಇವರ ಹಲ್ಲುಗಳು ನೀಲಿ ಬಣ್ಣಕ್ಕೆ ತಿರುಗಿದವು ಎಂದು ಇತಿಹಾಸಕಾರರು ಹೇಳುತ್ತಾರೆ.

ಇದೊಂದೆಡೆಯಾದರೆ, ಬ್ಲೂಟೂತ್‌ನಲ್ಲಿನ ಚಿಹ್ನೆ Hagall (*) ಮತ್ತು Bjarkan (B) ಎಂಬ ಅವರ ಹೆಸರಿನ ಮೊದಲಕ್ಷರಗಳನ್ನು ಸೂಚಿಸುತ್ತದೆ. ಇದು ರೂನಿಕ್ ಕೋಡ್ ಕೂಡ ಆಗಿರುತ್ತದೆ. ಇವುಗಳನ್ನು ಸಂಯೋಜಿಸುವ ಮೂಲಕ ಬ್ಲೂಟೂತ್‌ನ ಲೋಗೋವನ್ನು ರಚಿಸಲಾಗಿದೆ. ಇವುಗಳನ್ನು ಸಂಯೋಜಿಸಿಯೇ ಬ್ಲೂಟೂತ್‌ನ ಲೋಗೋವನ್ನು ರಚಿಸಲಾಗಿದೆ.