ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dahi Vada Archives » Dynamic Leader
October 23, 2024
Home Posts tagged Dahi Vada
ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮೊಸರು ಪ್ಯಾಕೆಟ್ ಮೇಲೆ ಹಿಂದಿಪದ ‘ದಹಿ’ ಎಂದು ನಮೂದಿಸುವಂತೆ ಕಳೆದ ತಿಂಗಳು ಮಾರ್ಚ್ 10 ರಂದು ಕರ್ನಾಟಕ ಮತ್ತು ತಮಿಳುನಾಡಿನ ಹಾಲು ಒಕ್ಕೂಟಗಳಿಗೆ ನಿರ್ದೇಶನ ನೀಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ‘ದಹಿ’ ಎಂಬ ಶಬ್ದವನ್ನೇ ಬಳಸಬೇಕು. ಆವರಣದಲ್ಲಿ ಮಾತ್ರ ಪ್ರಾದೇಶಿಕ ಭಾಷೆಯನ್ನು ನಮೂದಿಸುವಂತೆ ಸೂಚಿಸಿತ್ತು. ಉದಾಹರಣೆಗೆ ದಹಿ (ಮೊಸರು) ಎಂದು ಆವರಣದಲ್ಲಿ ನಮೂದಿಸುವಂತೆ ಸೂಚಿಸಿತ್ತು.

ಇದಕ್ಕೆ ಮೊದಲು ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್  “FSSAI ನಿರ್ದೇಶನವನ್ನು ನಾವು ಪಾಲಿಸುವುದಿಲ್ಲ. ನಮ್ಮ ರಾಜ್ಯಗಳಲ್ಲೇ ತಮಿಳು ಮತ್ತು ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಬಳಸುವಂತೆ ಬಲವಂತದ ನಿರ್ದೇಶನ ನೀಡಲಾಗುತ್ತಿದೆ. ಇಂತಹ ನಿರ್ದೇಶನ ನೀಡಲು ಜವಾಬ್ದಾರಿಯಾಗಿರುವವರನ್ನು ಶಾಶ್ವತವಾಗಿಯೇ ದಕ್ಷಿಣದಿಂದ ನಿಷಧಿಸಲಾಗುವುದು” ಎಂದು ಕಟುವಾಗಿ ಟೀಕಿಸಿದರು. ನಂತರ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ, ಕನ್ನಡಪರ ಸಂಘಟನೆಗಳ ನಾಯಕರು FSSAI ಗೆ ತೀವ್ರರೀತಿಯ ಖಂಡನೆಯನ್ನು ವ್ಯಕ್ತಪಡಿಸಿ, ಹಿಂದಿ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯ ಮಾಡಿದರು. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ವ್ಯಾಪಕವಾದ ಖಂಡನೆ ಮತ್ತು ಎಚ್ಚರಿಕೆಗೆ ಮನಿದ FSSAI ತಮ್ಮ ಸುತ್ತೋಲೆಯನ್ನು ಕಳೆದ ಗುರುವಾರ ಹಿಂದಕ್ಕೆ ಪಡೆಯಿತು.

ಆದರೆ, ನಮ್ಮ ಕನ್ನಡಿಗರು ನಡೆಸುವ ಸಸ್ಯಹಾರಿ ಹೋಟೆಲ್ ಗಳಲ್ಲಿ ‘ಟುಡೆ ಸ್ಪೆಷಲ್ ದಹಿ ವಡ’ (Today Special Dahi Vada) ಎಂದು ನಾಮ ಫಲಕ ಹಾಕಿ, ಮೊಸರು ವಡೆಯನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹವರನ್ನು ಏನೆಂದು ಹೇಳುವುದು? ‘ಮೊಸರನ್ನ’ ಎಂದು ಹೇಳುವ ಇವರೇ ‘ಮೊಸರು ವಡೆ’ ಎಂದು ಹೇಳುವುದಿಲ್ಲ. ‘ದಹಿ ವಡ’ ಎಂದು ಹೇಳುವುದೇ ಇವರಿಗೆ ಫ್ಯಾಷನ್. ‘ಊಟ ತಯಾರಿದೆ’ ಎಂದು ಅರ್ಧ ಕನ್ನಡ ಅರ್ಧ ಹಿಂದಿಯಲ್ಲಿ ಬೊಗಳುವ ಇವರಿಗೆ ಇದೆಲ್ಲ ಎಷ್ಟರಮಟ್ತಿಗೆ. ಹೋಟೆಲ್ ಗಳಲ್ಲಿ ‘ದಹಿ ವಡ’, ‘ಕಚೋರಿ’ ‘ದಹಿ ಕಚೋರಿ’, ‘ದಹಿ ಪೂರಿ’, ‘ದಹಿ ಪಪಡಿ’, ‘ಪಾವ್ ಬಜ್ಜಿ’, ‘ಪಾನಿಪೂರಿ’, ‘ಗೋಲ್ ಕಪ್ಪ’ ಈ ರೀತಿಯ ನೂರಾರು ಹಿಂದಿ ಪದಬಳಕೆಗಳು ಬೆಂಗಳೂರು ಮತ್ತು ಇತರ ಮಹಾನಗರದ ಹೋಟೆಲ್ ಗಳಲ್ಲಿ ಸರ್ವಸಾಮಾನ್ಯವಾಗಿದೆ. ಇವುಗಳನ್ನು ಮೊದಲು ಸ್ಚಚ್ಚಗೊಳಿಸಬೇಕು.

ಕನ್ನಡದ ನಾಮ ಫಲಕಗಳು ಹೊರಗಡೆ ಇದ್ದರೆ ಸಾಲದು, ಅದು ಒಳಗಡೆಯೂ ಇರಬೇಕು; ಮತ್ತು ವ್ಯವಹಾರಿಕವಾಗಿಯೂ ಇರಬೇಕು. ಹಿಂದಿ ಮಾತ್ರವಲ್ಲ ಇತರ ಭಾಷೆಗಳ ಪದಗಳು ಕನ್ನಡದಲ್ಲಿ ಮುದ್ರಿಸುವುದು ಕೂಡ ಸಾಂಸ್ಕೃತಿಕ ದಾಳಿಯೇ.