“ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.” – ರಾಹುಲ್ ಗಾಂಧಿ
ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಜನರ ಆಸ್ತಿ ಕಿತ್ತುಕೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಯನ್ನು ನೋಡೋಣ.
ಛತ್ತೀಸ್‌ಗಢದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,
“ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ, ಅದನ್ನು ಕಿತ್ತುಕೊಂಡು ಕಾಂಗ್ರೆಸ್ ತನ್ನ ಬೆಂಬಲಿಗರಿಗೆ ನೀಡಲಿದೆ. ಅಂಬೇಡ್ಕರ್ ಅವರು ತಂದಿದ್ದ ಕಾಯಿದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಅಧಿಕಾರವನ್ನು ತೆಗೆದುಹಾಕುತ್ತದೆ.” ಎಂದು ಹೇಳಿದರು.
ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ,
“ಯಾವುದೇ ಅಧಿಕಾರ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡವಿಲ್ಲ. ಉನ್ನತ ಹುದ್ದೆಯಲ್ಲೂ ಅವರಿಲ್ಲ. ಮಾಧ್ಯಮಗಳಲ್ಲಿ, ಆಸ್ಪತ್ರೆಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಎಲ್ಲಿ ನೋಡಿದರೂ ಅವರು ಕಾಣುವುದಿಲ್ಲ. ಅಂದರೆ ಶೇಕಡ 90ರಷ್ಟು ಮಂದಿ ಇಲ್ಲ.” ಎಂದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,
“ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ, ದೇಶದ ಪ್ರತೊಯೊಂದು ಮನೆಯನ್ನು, ಅಲಮಾರಿಯನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು ಎಕ್ಸ್-ರೇ ಮಾಡಿ ಅವರು ಹೊಂದಿರುವ ಅಲ್ಪ ಸ್ವಲ್ಪ ಆಸ್ತಿಯ ಮೇಲೂ ಕಾಂಗ್ರೆಸ್ ತೆರಿಗೆ ವಿಧಿಸುತ್ತದೆ.”
ರಾಹುಲ್ ಗಾಂಧಿ:
“ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಚೆನ್ನಾಗಿ ನೋಡಿ. ಇದು ಒಳ್ಳೆಯದು ಎಂದು ನಿಮಗೆ ಅನಿಸುತ್ತದೆ. ಅದರಲ್ಲಿ ಎಕ್ಸ್-ರೇ ಇದೆ. ಅದು ಏನಂದರೆ, ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.”
ನರೇಂದ್ರ ಮೋದಿ:
“ನೀವು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಮಕ್ಕಳು ಅನುಭವಿಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಅದನ್ನು ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರವೂ ಮಾಡುತ್ತದೆ. ಭ್ರಷ್ಟಾಚಾರವೇ ಕಾಂಗ್ರೆಸ್ ಮಂತ್ರ. ಅವರು ಸತ್ತರೂ ಅಥವಾ ಬದುಕಿದ್ದರೂ ಅದನ್ನು ಮಾಡುತ್ತಾರೆ.”
ರಾಹುಲ್ ಗಾಂಧಿ:
“ನಾನು ನಿಮಗೆ ಮೊದಲು ಹೇಳಿದಂತೆ, ಕಾಂಗ್ರೆಸ್ ಪ್ರಣಾಳಿಕೆ ರಾಜಕೀಯಕ್ಕಾಗಿ ಅಲ್ಲ. ಅದೇ ನಮ್ಮ ಜೀವನದ ಗುರಿ. ಇದು ನಮ್ಮ ಗ್ಯಾರಂಟಿ. ನೀವು ಬರೆದಿಟ್ಟುಕೊಳ್ಳಿ. ನಾವು ಇದನ್ನು ಸಾಧಿಸುತ್ತೇವೆ.”
ಹೀಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮಾತಿನ ಸಮರದಲ್ಲಿ ತೊಡಗಿದ್ದಾರೆ.