ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
FII Archives » Dynamic Leader
October 23, 2024
Home Posts tagged FII
ದೇಶ

ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 55% ಮತ್ತು ಅದಾನಿ ಪೋರ್ಟ್ಸ್ ಷೇರು ಬೆಲೆ 23% ರಷ್ಟು ಕುಸಿತವನ್ನು ಖಂಡಿದೆ. ಅದಾನಿ ಗ್ರೂಪ್ ಕಂಪನಿಗಳು ಮನಿ ಲಾಂಡರಿಂಗ್ ಮತ್ತು ಷೇರು ಮಾರುಕಟ್ಟೆ ವಂಚನೆಯನ್ನು ಆರೋಪಿಸಿ ಅಮೆರಿಕದ ಶಾರ್ಟ್ ಸೆಲ್ಲಿಂಗ್ ಸಂಸ್ಥೆಯಾದ ಹಿಂಡೆನ್‌ಬರ್ಗ್ ಕಂಪನಿ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವರದಿಯ ನಂತರ ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತವನ್ನು ಕಂಡಿದೆ.

ಅದಾನಿ ಗ್ರೂಪ್ ಷೇರುಗಳು ಸುಮಾರು $105 ಬಿಲಿಯನ್ ನಷ್ಟವನ್ನು ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಷೇರುಪೇಟೆ ಕೆಲವು ವಾರಗಳ ಕಾಲ ತೀವ್ರ ಕುಸಿತವನ್ನು ಖಂಡಿತು. ಈ ಹಿನ್ನಲೆಯಲ್ಲಿ ಗೌತಮ್ ಅದಾನಿ ಕೂಡ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 35ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.ಅದಾನಿಯ ವಿರುದ್ಧ ದೂರುಗಳು, ವಿವಾದಗಳು ಇನ್ನು ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಅದಾನಿ ಷೇರುಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಪ್ರಾಧಿಕಾರವು EPFO ಹೂಡಿಕೆಯನ್ನು ಮುಂದುವರೆಸುತ್ತಿರುವುದಾಗಿ ವರದಿಯಾಗಿದೆ. ಅದಾನಿ ಸಮೂಹದ ಷೇರುಗಳಿಂದ ಹೆಚ್ಚಿನ ಅಪಾಯವಿರುವ ಕಾರಣದಿಂದಲೇ FII ಹೂಡಿಕೆದಾರರು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹೂಡದೇ ದೂರ ಸರಿದಿದ್ದಾರೆ.

ಆದರೆ ಕಾರ್ಮಿಕರ ಅನುಕೂಲಕ್ಕಾಗಿ ಸಂಗ್ರಹಿಸಿ ನಿರ್ವಹಣೆ ಮಾಡುತ್ತಿರುವ PF ಹಣವನ್ನು ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಜನರಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸಿದೆ. ದೇಶದಲ್ಲಿ ಒಟ್ಟು 27.73 ಕೋಟಿ ಕಾರ್ಮಿಕರು EPFO ಸದಸ್ಯರಾಗಿದ್ದಾರೆ. ಇವರ ಭವಿಷ್ಯದ ನಿವೃತ್ತಿ ನಿಧಿಯನ್ನು ಆಯೋಗವು ನಿರ್ವಹಿಸುತ್ತಿದೆ. ಈ ಹಣವು ಸಂಪೂರ್ಣವಾಗಿ ಜನರ ನಿವೃತ್ತಿಯ ನಂತರದ ಅಗತ್ಯಗಳಿಗಾದದ್ದು. ವೃದ್ಧಾಪ್ಯ ಮತ್ತು ಹಣ ಗಳಿಸಲು ಸಾಧ್ಯವಾಗದ ಸಂದರ್ಭದಲ್ಲಿ ಲಾಭದಾಯಕವಾಗಿ ಉಳಿಸಿದ PF ನಿಧಿಯನ್ನು ಹೆಚ್ಚಿನ ಅಪಾಯದ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಅದಾನಿ ವಿರುದ್ಧದ ದೂರುಗಳಿಂದ ಅದರ ಷೇರುಗಳು ಕುಸಿತವನ್ನು ಕಂಡಿದ್ದರೂ ಅದಾನಿ ಗ್ರೂಪ್‌ನ 2 ಕಂಪನಿ ಷೇರುಗಳಲ್ಲಿ PF ಹಣವನ್ನು ಹೂಡಿಕೆ ಮಾಡುವುದನ್ನು ಮುಂದುವರೆಸಿರುವುದು ಆಘಾತಕಾರಿಯಾಗಿದೆ. EPFO Remains Invested In Adani Stocks Despite Hindenburg-Induced Market Rout. 

PF ಹಣವನ್ನು ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಕಳೆದ 3 ತಿಂಗಳುಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 55% ಮತ್ತು ಅದಾನಿ ಪೋರ್ಟ್ಸ್ ಷೇರು ಬೆಲೆ 23% ರಷ್ಟು ಕುಸಿದಿದೆ. ಈ ಕುಸಿತದ ನಂತರವೂ ಕಾರ್ಮಿಕರ ಪಿಂಚಣಿ ಹಣವನ್ನು ಕೋಟಿಗಟ್ಟಲೆ ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂಬ ಧ್ವನಿ ಕಾರ್ಮಿಕರಲ್ಲಿ ಬಲವಾಗಿ ಕೇಳಿಬರುತ್ತಿದೆ. EPFO ಬೋರ್ಡ್ ಆಫ್ ಟ್ರಸ್ಟಿಗಳು ಈ ನಿಟ್ಟಿನಲ್ಲಿ ತಕ್ಷಣದ ನಿರ್ಧಾರವನ್ನು ತೆಗೆದುಕೊಂಡರೆ ಮಾತ್ರ ಅದಾನಿ ಷೇರುಗಳಲ್ಲಿನ ಹೂಡಿಕೆಯನ್ನು ಹಿಂಪಡೆಯಬಹುದು. ಇಲ್ಲದಿದ್ದರೆ ಬರುವ 30 ರಿಂದ ಮುಂದಿನ 6 ತಿಂಗಳವರೆಗೆ ಅದಾನಿ ಷೇರುಗಳನ್ನು EPFO ಇರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ ಎಂದು ಹೇಳಲಾಗುತ್ತಿದೆ. ಅದಾನಿ ಷೇರು ಹೂಡಿಕೆಯಿಂದ EPFO ಹೂಡಿಕೆ ಮೌಲ್ಯವು ಏರಿಳಿತವಾಗಬಹುದು. ಇದು PF ಸದಸ್ಯರ ಹಣದ ಮೇಲೆ ಗಣನೀಯವಾದ ಪರಿಣಾಮವನ್ನು ಸೃಷ್ಟಿಸುತ್ತದೆ. EPFO Remains Invested In Adani Stocks Despite Hindenburg-Induced Market Rout.