ಕರ್ನಾಟಕ ಮುಸ್ಲಿಮ್ ಯುನಿಟಿಗೆ ಅಬ್ದುಲ್ ಸತ್ತಾರ್ ಅಧ್ಯಕ್ಷರು; ಜಿಲ್ಲಾ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಆಯ್ಕೆ!
ಬೆಂಗಳೂರು: ಕರ್ನಾಟಕ ಮುಸ್ಲಿಮ್ ಯುನಿಟಿಯ ಜಿಲ್ಲಾ ಪ್ರತಿನಿಧಿಗಳ ಪೂರ್ವಭಾವಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಮ್ ಯುನಿಟಿಯು ರಾಜ್ಯದ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಪಾಲು ಹಾಗೂ ಮುಸ್ಲಿಮರ ಮೀಸಲಾತಿಗಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಯಾಗಿದೆ.
ಶಿಕ್ಷಣ ಹಾಗೂ ಉದ್ಯೋಗವಕಾಶಗಳಲ್ಲಿ ಮುಸ್ಲಿಂ ಸಮುದಾಯ ಬಹಳ ಹಿಂದುಳಿದಿದೆ. ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗಗಳು ಮುಸ್ಲಿಂ ಸಮುದಾಯದಲ್ಲಿ 17 ವೃತ್ತಿಪರ ಗುಂಪುಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 69ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಈಗಾಗಲೇ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿರುತ್ತದೆ. ಆದ್ದರಿಂದ ಮುಸ್ಲಿಂ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 7ಕ್ಕೆ ಹೆಚ್ಚಿಸಬೇಕೆಂದು ಕರ್ನಾಟಕ ಮುಸ್ಲಿಮ್ ಯುನಿಟಿ ಸರ್ಕಾರವನ್ನು ಒತ್ತಾಯ ಮಾಡಿಕೊಂಡು ಬರುತ್ತಿದೆ. ಈಗಾಗಲೇ ರಾಜ್ಯಾದಂತ್ಯ ಜನಪರ, ಜಾತ್ಯತೀತ, ಪ್ರಗತಿಪರ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ.
ರಾಜ್ಯದಲ್ಲಿ ಜೀವಂತವಾಗಿರುವ ಈದ್ಗಾ ಮೈಧಾನ ವಿವಾದ, ಗೋಹತ್ಯೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜಗಳು ಮತ್ತು ಕೊಲೆಗಳು, ಆಜಾನ್ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳ ದಾಖಲು ಮತ್ತು ಆಜಾನ್ ವಿರುದ್ಧ ಅನುಮಾನ್ ಚಾಲೀಸ, ಸುಪ್ರಭಾತ ಪಠಣ ಮಾಡಿಸುವುದು, ಹಲಾಲ್ ಕಟ್, ಜಟ್ಕಾ ಕಟ್ ವಿವಾದ, ಹಿಜಾಬ್-ಬುರ್ಕಾ ವಿವಾದ, ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಮುಂತಾದ ಇನ್ನು ಹಲವಾರು ರೀತಿಯಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರದವರು ಮಾಡುತ್ತಿರುವ ದೌರ್ಜನ್ಯೆಗಳು ಹೇಳತೀರದು. ಇವುಗಳನ್ನು ಸಮರ್ಥಿಸಿಕೊಳ್ಳುವ ಸರ್ಕಾರಗಳು ಇದಕ್ಕೆ ಬೆಂಬಲವನ್ನೂ ನೀಡಿ ‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ’ ಎಂದು ಸಮಜಾಯಿಷಿ ನೀಡುತ್ತಿದೆ.
ಇದರಿಂದ ಧೃತಿಗೆಡದ ರಾಜ್ಯದ ಮುಸ್ಲಿಮರು ಸಂವಿಧಾನ ನೀಡಿರುವ ಹಕ್ಕುಗಳ ರಕ್ಷಣೆಗಾಗಿ ಐಕ್ಯತೆಯಿಂದ, ಒಂದೇ ವೇದಿಕೆಯಡಿ ನಿಂತು, ಜಾತ್ಯತೀತ ತತ್ವವನ್ನು ಪ್ರತಿಪಾದಿಸಿ, ಭಾರತೀಯ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು, ಕಾನೂನಿನ ಚೌಕಟ್ಟಿನಲ್ಲಿ ನಿಂತು ಸಂಘಟನಾತ್ಮಕವಾದ ವಿರೋಧವನ್ನು ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಬೆಂಗಳೂರಿನ ಗುಲಿಸ್ತಾನ್ ಶಾದಿ ಮಹಲ್ ನಲ್ಲಿ ನಡೆದ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿಯ ವತಿಯಿಂದ ಕೆಎಂಯು ಸಂಘಟನೆಯ ಅಧಿಕೃತ ರಾಜ್ಯ ಸಮಿತಿಯನ್ನು ಘೋಷಿಸಲಾಗಿದೆ. ಕಾರ್ಯಾಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಹಿರಿಯ ನಾಯಕರು, ಸಮಾಜ ಸೇವಕರು, ಚಿಂತಕರೂ ಆದ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಅವರು, ರಾಜ್ಯಾಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಹಿರಿಯ ಮುಖಂಡರು, ಯಶಸ್ವಿ ಉದ್ಯಮಿ, ಹಾಗೂ ಪ್ರಖರ ವಾಗ್ಮಿಯೂ ಆದ ಅಬ್ದುಲ್ ಸತ್ತಾರ್ ರವರು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ನಾಯಕ ಹಾಗೂ ರಾಜಕೀಯ ಚಿಂತಕರೂ ಆಗಿರುವ ಡಾ.ಖಾಸಿಂ ಸಾಬ್, ರಾಜ್ಯ ಉಪಾಧ್ಯಕ್ಷರಾಗಿ ಟಿ.ಎಂ.ನಾಸಿರ್ ಇಂಪಾಲ್, ಉತ್ತರ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ಜಬ್ಬಾರ್ ಕಲ್ಬುರ್ಗಿ ಹಾಗು ದಕ್ಷಿಣ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ವಹೀದ್ ಅಹ್ಮದ್ ಮಾಗುಂಡಿ ರವರು ಆಯ್ಕೆ ಗೊಂಡಿದ್ದಾರೆ. ಇದರಿಂದ ರಾಜ್ಯದ ಮುಸ್ಲಿಮರಿಗೆ ಭವಿಷ್ಯದ, ಭರವಸೆಯ ನಾಯಕರುಗಳ ಮುಂದಾಳುತ್ವ ಸಿಕ್ಕಿರುವುದು ವಿಶೇಷ.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರುಗಳು:
ಅಬ್ದುಲ್ ಸತ್ತಾರ್: ಅಧ್ಯಕ್ಷರು, ಡಾ.ಖಾಸಿಂ ಸಾಬ್ ಎ: ಪ್ರಧಾನ ಕಾರ್ಯದರ್ಶಿ, ಅಬ್ದುಲ್ ಜಬ್ಬಾರ್ ಕಲ್ಬುರ್ಗಿ: ರಾಜ್ಯ ಸಂಚಾಲಕರು ಉತ್ತರ ಕರ್ನಾಟಕ, ಅಬ್ದುಲ್ ವಾಹಿದ್ ಮಗುಂಡಿ: ರಾಜ್ಯ ಸಂಚಾಲಕರು ದಕ್ಷಿಣ ಕರ್ನಾಟಕ. ಹಾಗೂ ನಾಸಿರ್ ಇಂಪಾಲ್, ಎನ್.ಎ.ಶೇಕಬ್ಬ, ಅಬ್ದುಲ್ಲ,,ಸರ್ಕಾವಸ್ ಎಂ ಮೆಹಬೂಬ್, ಅಲ್ತಾಫ್ ಕಲ್ಬುರ್ಗಿ, ಮೌಲನ ಯುನೂಸ್, ಅಡ್ವೋಕೇಟ್ ತೌಫಿಕ್ ಮೊಮೀನ್, ದಾದಾ ಪೀರ್ ಶೆಖ್, ಇಸಾಕ್ ಖಾನ್, ಅತಾವುಲ್ಲಾ, ಸಮೀಯುಲ್ಲ, ಶಾಹಿರ್ ಅಲಿ, ತಾಹಿರ್, ಬಿ.ಎಸ್.ಯೂಸುಫ್, ಇಮ್ರಾನ್, ರಿಯಾದ್ ಅಮೀದ್, ಆಯಾಜ್ ಅಹ್ಮದ್, ಮೆಹಬೂಬ್ ಖಾನ್, ಕನ್ನಡ ನದೀಮ್, ಎಝಜ್ ಸಖಿಬ್, ಜಾಫೀರ್ ಬಿಪೇರಿ, ಸ್ಯೆಯದ್ ಮೆಹಬೂಬ್.