ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
GPS Tracker Archives » Dynamic Leader
October 31, 2024
Home Posts tagged GPS Tracker
ದೇಶ

ಶ್ರೀನಗರ: ಕಾಶ್ಮೀರದಲ್ಲಿ ಜಾಮೀನಿನ ಮೇಲೆ ಹೊರಬರುವ ಭಯೋತ್ಪಾದಕರು ತಲೆಮರೆಸಿಕೊಳ್ಳದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅವರ ಕಣಕಾಲುಗಳಲ್ಲಿ ಜಿಪಿಎಸ್ ಟ್ರ್ಯಾಕರ್ ಸಾಧನವನ್ನು ಅಳವಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಇದೇ ರೀತಿಯ ಪದ್ಧತಿ ಈಗಾಗಲೇ ಅಮೆರಿಕ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಜಾರಿಯಲ್ಲಿದೆ. ಆ ದೇಶಗಳಲ್ಲಿ ಜಾಮೀನು, ಪೆರೋಲ್ ಅಥವಾ ಗೃಹಬಂಧನದಲ್ಲಿರುವವರನ್ನು ನಿಗಾ ಇಡಲು ದೇಹದ ಮೇಲೆ ಜಿಪಿಎಸ್ ಟ್ರ್ಯಾಕರ್ ಸಾಧನಗಳನ್ನು ಅಳವಡಿಸಲಾಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ, ಜಾಮೀನಿನ ಮೇಲೆ ಹೊರಬರುವ ಭಯೋತ್ಪಾದಕರ ಕಣಕಾಲುಗಳಿಗೆ ಜಿಪಿಎಸ್ ಟ್ರ್ಯಾಕರ್ ಳನ್ನು ಅಳವಡಿಸಲಾಗುತ್ತಿದೆ. ಹೀಗಾಗಿ, ಜಾಮೀನಿನ ಮೇಲೆ ಹೊರಬರುವವರು ಅಪರಾಧ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಬಹುದು ಮತ್ತು ಅವರ ಮೇಲೆ ನಿಗಾ ಇಡಬಹುದು. ಇದರಿಂದಾಗಿ, ಅವರು “ಓಡಲೂ ಸಾಧ್ಯವಿಲ್ಲ; ಅಡಗಿಕೊಳ್ಳಲೂ ಸಾಧ್ಯವಿಲ್ಲ!” ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ‘ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ, ಕಠಿಣವಾದ ಕಾನೂನಿನ ಅಡಿಯಲ್ಲಿ ಬಂಧಿಸಲಾದ ಭಯೋತ್ಪಾದಕರಿಗೆ ಜಿಪಿಎಸ್ ಟ್ರ್ಯಾಕರ್‌ಗಳನ್ನು ಅಳವಡಿಸಲಾಗಿದೆ. ಭಯೋತ್ಪಾದಕರೊಬ್ಬರು ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಿಗೆ ಜಾಮೀನು ನೀಡಿದ ಬಳಿಕವೂ ಆತನ ಮೇಲೆ ನಿರಂತರ ನಿಗಾ ಇಡಲು ಜಿಪಿಎಸ್ ಟ್ರ್ಯಾಕರ್ ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ: ಎಂದು ಅವರು ಹೇಳಿದರು. JKP Introduce GPS Tracker Anklets To Monitor Terror Accused